ಶಿರಾ: ಗುರು ಕಲಿಸಿದ ವಿದ್ಯೆ ಕಲಿತು, ಜೊತೆಗೆ ಸಮಾಜದಲ್ಲಿ ಎಲ್ಲರನ್ನೂ ಗೌರವಿಸುವಂತಹ ಸಂಸ್ಕಾರ ಬೆಳಸಿಕೊಂಡ ಪ್ರತಿಯೊಬ್ಬ ವಿದ್ಯಾರ್ಥಿ ಕೂಡ ಎಷ್ಟೇ ದಶಕಗಳು ಕಳೆದರೂ ಗುರು- ಶಿಷ್ಯರ ಬಾಂಧವ್ಯ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಇಂತಹ ಹಳೆಯ ವಿದ್ಯಾರ್ಥಿಗಳು ಮುಂದಿನ ಯುವ ಪೀಳಿಗೆಗೆ ಆದರ್ಶವಾಗಬೇಕು ಎಂದು ನಿವೃತ್ತ ಮುಖ್ಯ ಶಿಕ್ಷಕ ಬಿ. ಎಲ್. ಅಶ್ವತ್ ನಾರಾಯಣ ಹೇಳಿದರು.
ಶಿರಾ ತಾಲೂಕಿನ ಕರೇಜವ ನಹಳ್ಳಿ ಗ್ರಾಮದ ತೋಟದ ಮನೆಯಲ್ಲಿ ಕಠಾವೀರನಹಳ್ಳಿ ಶ್ರೀರಂಗನಾಥ ವಿದ್ಯಾಸಂಸ್ಥೆಯ ೧೯೮೪- ೮೫ನೇ ಸಾಲಿನ ಎಸ್ ಎಸ್ ಎಲ್ ಸಿ ಹಳೆಯ ವಿದ್ಯಾ ರ್ಥಿ, ವಿದ್ಯಾರ್ಥಿನಿಯರು ಭಾನುವಾರ ಆಯೋಜಿಸಿದ್ದ ಸ್ನೇಹಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದರು ೪೦ ವರ್ಷಗಳ ನಂತರ ನಾನು ಬೋಧನೆ ಮಾಡುತ್ತಿದ್ದ ಶಾಲೆಯಲ್ಲಿ ವಿದ್ಯೆ ಕಲಿತ ವಿದ್ಯಾರ್ಥಿಗಳು, ಇಂದು ಸ್ನೇಹ ಮಿಲನಗೊಂಡು ವೈಶಿಷ್ಟ್ಯ ಪೂರ್ಣ ಕ್ಷಣ ಒದಗಿಸಿರುವುದು ನಾನು ಕಲಿಸಿದ ವಿದ್ಯೆ ಸಾರ್ಥಕವಾಯಿತು ಎಂಬ ಮನೋಭಾವ ಮೂಡಿದೆ.
ಇದೇ ರೀತಿ ತಮ್ಮ ಮಕ್ಕಳಿಗೆ, ಮೊಮ್ಮಕ್ಕಳಿಗೆ ಇಂತಹ ಸಂಸ್ಕಾರವನ್ನು ಕಲಿಸಿ ಪರಸ್ಪರ ಸ್ನೇಹ ಬಾಂಧವ್ಯವನ್ನು ಗಟ್ಟಿಗೊಳಿಸಿಕೊಳ್ಳುವಂತಹ ಹಾಗೂ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವ ಸಂಕಲ್ಪ ಮಾಡಬೇಕು. ನಾನು ಕಲಿತ ಶಾಲೆಗೆ ನನ್ನದೊಂದು ಕೊಡುಗೆ ಎಂಬ ಭಾವನೆಯೊಂದಿಗೆ ಶಾಲೆಗಳಿಗೆ ಸಹಾಯಮಾಡುವಂತಹ ಹೃದಯ ವೈಶಾಲ್ಯತೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ನಿರುತ ಮುಖ್ಯ ಶಿಕ್ಷಕರಾದ ರಾಜಣ್ಣ, ಜಿ.ಕೆ. ರಂಗನಾಥ್, ಮುಖ್ಯ ಶಿಕ್ಷಕಿ ಕಲ್ಪನಾ, ಶಿಕ್ಷಕಿ ಮಂಜುಳಾ ಸೇರಿದಂತೆ ಕಠಾವೀರನಹಳ್ಳಿ ಶ್ರೀರಂಗನಾಥ ವಿದ್ಯಾಸಂಸ್ಥೆಯಲ್ಲಿ ೧೯೮೪- ೮೫ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ವ್ಯಾಸಂಗ ಮಾಡಿದ ಎಲ್ಲಾ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
(Visited 1 times, 1 visits today)