ತುಮಕೂರು:  ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ೭೫ನೇ ಹುಟ್ಟು ಹಬ್ಬದ ಅಂಗವಾಗಿ ಮೇ.೧೩ರಂದು  ಹಮ್ಮಿಕೊಂಡಿರುವ ಕೆ.ಎನ್.ಆರ್.ಅಮೃತ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ,ರಾಜಣ್ಣನವರ  ಪರ ಶಕ್ತಿ ಪ್ರದರ್ಶನವಲ್ಲ, ಬದಲಿಗೆ ಅವರ ಅಭಿಮಾನ ದರ್ಶನ ಸಮಾವೇಷವಾಗಿದೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ತುಮಕೂರು ಜಿಲ್ಲಾ ಗೆಳೆಯರ ಬಳಗದ ಅಧ್ಯಕ್ಷರಾದ ಎನ್.ಗೋವಿಂದರಾಜು ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕೆ.ಎನ್.ಆರ್.ಅಭಿನಂದನಾ ಗ್ರಂಥ ಬಿಡುಗಡೆ ಸಮಿತಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು,ನಾನು ಕೂಡ ಕೆ.ಎನ್.ರಾಜಣ್ಣನವರ ಅಭಿಮಾನಿ.ಅಹಿಂದ ಸಮುದಾಯಕ್ಕೆ ಕೆ.ಎನ್.ರಾಜಣ್ಣ ಅವರು ಮಾರ್ಗದರ್ಶಕರಿದ್ದಂತೆ ಎಂದರು.
ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಅವರ ಐದು ದಶಕಗಳ ರಾಜಕೀಯ ಜೀವನವನ್ನು ಅವಲೋಕಿಸಿದರೆ ಜಿಲ್ಲೆಯ ರಾಜಕೀಯ, ಸಹಕಾರ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ.ಇಂತಹ ಓರ್ವ ರಾಜಕಾರಣಿಯನ್ನು ಯುವ ಪೀಳಿಗೆಗೆ ಪರಿಚಯಿಸುವ ಸಲುವಾಗಿ ಅವರ ಅಭಿಮಾನಿಗಳು ೭೫ನೇ ವರ್ಷದ ಸುವರ್ಣ ಮಹೋತ್ಸವ ಹಾಗೂ ಅಭಿನಂದನಾ ಗ್ರಂಥ “ಸಹಕಾರ ಸಾರ್ವಬೌಮ” ಅಭಿನಂದನಾ ಗ್ರಂಥ ಸಮರ್ಪಣೆಯನ್ನು ಹಮ್ಮಿಕೊಂಡಿದೆ.ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಗೋವಿಂದರಾಜು ನುಡಿದರು.
ಮಾಜಿ ಶಾಸಕ ಎಸ್.ಷಪಿ ಅಹಮದ್ ಮಾತನಾಡಿ,ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ಎಲ್ಲಾ ವರ್ಗದ ಜನರಿಗೆ ಬೇಕಾದ ವ್ಯಕ್ತಿ, ಹಾಗಾಗಿ ನಗರದ ೩೫ ವಾರ್ಡುಗಳಲ್ಲಿ ಜನರನ್ನು ಸಮಾರ ಂಭಕ್ಕೆ ಕರೆತರುವ ಕೆಲಸವನ್ನು ಮುಖಂಡರುಗಳು ಮಾಡಬೇಕಾಗಿದೆ.ಮೇ.೧೩ರ ಕೆ.ಎನ್.ಆರ್.ಅಮೃತ ಮಹೋತ್ಸವ ಕಾರ್ಯಕ್ರಮ ಹಬ್ಬದ ರೀತಿಯಲ್ಲಿ ನಡೆಯಬೇಕು.ಪ್ರತಿ ವಾರ್ಡಿನಿಂದ ಒಂದು ಸಾವಿರ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮಾಡ ಬೇಕೆಂದು ಕಾರ್ಯಕರ್ತರಿಗೆ, ಮುಖಂಡರಿಗೆ ಸಲಹೆ ನೀಡಿದರು.
ಕಾಂಗ್ರೆಸ್ ಮುಖಂಡ ಇಕ್ಬಾಲ್ ಅಹಮದ್ ಮಾತನಾಡಿ,ಕೆ.ಎನ್.ಆರ್.ಅವರ ಅಮೃತ ಮಹೋತ್ಸವ ಕಾರ್ಯಕ್ರಮ ಕಾಂಗ್ರೆಸ್ ಕಾರ್ಯಕರ್ತರು ಮುಖಂಡರಿಗೆ ಒಂದು ರೀತಿಯ ಪಕ್ಷ ಸಂಘಟನೆಯ ಜೊತೆಗೆ, ನಗರಪಾಲಿಕೆಯ ಚುನಾವಣಾ ತಾಲೀಮು ಎಂಬAತಿದೆ.ಇಲ್ಲಿ ತಮ್ಮ ಶಕ್ತಿ ಏನು ಎಂಬುದನ್ನು ಮುಖಂಡರು ವ್ಯಕ್ತಪಡಿಸಬೇಕು. ಮುಖ್ಯಮಂತ್ರಿಗಳು,ಕೆಪಿಸಿಸಿ ಅಧ್ಯಕ್ಷರು,ಪಕ್ಷದ ಮುಖಂಡರುಗಳು  ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದರಿಂದ ತಾವುಗಳು ಹೆಚ್ಚಿನ ಜವಾಬ್ದಾರಿ ವಹಿಸುವಂತೆ ಕರೆ ನೀಡಿದರು.
ಅಹಿಂದ ಮುಖಂಡ ವಿರೂಪಾಕ್ಷ ಡ್ಯಾಗೇರಹಳ್ಳಿ ಮಾತನಾಡಿ,ಕೆ.ಎನ್.ರಾಜಣ್ಣ ಅವರ ನಾಲ್ಕು ದಶಕಗಳ ರಾಜಕಾರಣದಲ್ಲಿ ಶೋಷಿತ ಸಮುದಾಯಗಳ ದ್ವನಿಯಾಗಿ ಕೆಲಸ ಮಾಡಿದ್ದಾರೆ.ವಂಚಿತ ಸಮು ದಾಯಗಳ ನ್ಯಾಯದ ಪರವಾಗಿ ಕೆಲಸ ಮಾಡಿದ್ದಾರೆ. ಕೆ.ಎನ್.ರಾಜಣ್ಣ ಅವರ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮ ಮತ್ತೊಬ್ಬ ಅಹಿಂದ ನಾಯಕನ ಉದಯಕ್ಕೆ ವೇದಿಕೆಯಾಗಲಿ ಎಂದರು.
 ಹೋರಾಟಗಾರ ಕೊಟ್ಟ ಶಂಕರ ಮಾತನಾಡಿ,ಕೆ.ಎನ.ರಾಜಣ್ಣ ಅವರು ಅಖಂಡ ಶೋಷಿತ ಸಮುದಾಯಗಳ ಪ್ರತಿನಿಧಿಯಾಗಿ ಸದನದ ಒಳಗೆ ಮತ್ತು ಹೊರಗೆ ಕೆಲಸ ಮಾಡಿದ್ದಾರೆ.ಈ ಕಾರ್ಯ ಕ್ರಮದ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮಾತನಾಡಿ,ಕೆ.ಎನ್.ರಾಜಣ್ಣ ಅವರ ೭೫ನೇ ವರ್ಷ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈಗಾಗಲೇ ಎಲ್ಲಾ ಸಿದ್ದತೆ ಗಳು ನಡೆದಿವೆ. ತುಮುಲ್,ಡಿಸಿಸಿ ಬ್ಯಾಂಕ್, ವ್ಯವಸಾಯ ಸೇವಾ ಸಹಕಾರ ಸಂಘಗಳು, ಸಹಕಾರಿ ಬ್ಯಾಂಕುಗಳ ಸಿಬ್ಬಂದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ ಹೊರಗಿನಿಂದ ಬರುವವರಿಗೆ ವಾಹನ, ಊಟ, ತಿಂಡಿ ಎಲ್ಲವನ್ನು ಮಾಡಲಾಗಿದೆ.ಒಂದು ಲಕ್ಷಕ್ಕೂ ಅಧಿಕ ಜನರು ಈ ಕಾರ್ಯಕ್ರಮದಲ್ಲಿ ಪಾಲ್ಗೊ ಳ್ಳಲಿದ್ದಾರೆ. ಹಾಗಾಗಿ ಕಾಂಗ್ರೆಸ್ ಕಾರ್ಯಕರ್ತರು ಹಿರಿಯ, ಮುತ್ಸದ್ದಿ ರಾಜಕಾರಿಣಿ ಕಾರ್ಯಕರ್ಮದಲ್ಲಿ ಪಾಲ್ಗೊಳ್ಳುವ ಮೂಲಕ ತಮ್ಮ ಇರುವಿಕೆಯನ್ನು ಪ್ರದರ್ಶಿಸುವಂತೆ ಸಲಹೆ ನೀಡಿದರು.
ಮುಖಂಡರಾದ ನಯಾಜ್ ಅಹಮದ್,ಮಹಿಳಾ ಕಾಂಗ್ರೆಸ್‌ನ ಗೀತಾ ರುದ್ರೇಶ್,ಸೌಭಾಗ್ಯಮ್ಮ, ಶಿರಾದ ರವಿ,ಕೊರಟಗೆರೆ, ಶಿವಾಜಿ, ಮೈಲಾರಪ್ಪ ಅವರುಗಳು ಕಾರ್ಯಕ್ರಮ ಯಶಸ್ವಿ ಕುರಿತು ಅಗತ್ಯ ಸಲಹೆ, ಸೂಚನೆ ನೀಡಿದರು.
ಸಭೆಯಲ್ಲ್ಲಿ ನಗರ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಮಹೇಶ್, ಫಯಾಜ್,ಅಲ್ಪಸಂಖ್ಯಾತರ ಘಟಕದ ಸಂಜೀವಕುಮಾರ್,ಕೈದಾಳ ರಮೇಶ್,ಯುವ ಕಾಂಗ್ರೆಸ್ ಮೋಹನ್,ಎಂ.ವಿ.ರಾಘವೇAದ್ರ ಸ್ವಾಮಿ, ಗ್ರಾಮಾಂತರದ ಪಂಚಾಕ್ಷರಯ್ಯ,ಒಬಿಸಿ ಘಟಕದ ಅನಿಲ್‌ಕುಮಾರ್, ಮಾಜಿ ಕೌನಿಲರ್ ಎನ್.ಮಹೇಶ್,ಇನಾಯತ್,ಹೆಬ್ಬೂರು ಶ್ರೀನಿವಾಸ ಮೂರ್ತಿ,ಲೋಕೇಶಸ್ವಾಮಿ,ಜಿಯಾ ಸೇರಿದಂತೆ ಜಿಲ್ಲೆಯ ವಿವಿಧ ಮುಖಂಡರುಗಳು ಪಾಲ್ಗೊಂಡಿದ್ದರು.
(Visited 1 times, 1 visits today)