ತುರುವೇಕೆರೆ: ಕೃಷಿ ಇಲಾಖೆಯಿಂದ ಸಿಗುವಂತ ಸವಲತ್ತುಗಳನ್ನು ರೈತರು ಪಡೆದುಕೊಂಡು ಅದುನಿಕ ಕೃಷಿಗೆ ಹೆಚ್ಚು ಒತ್ತು ನೀಡಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ತಿಳಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ಕೃಷಿ ಇಲಾಖೆವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ಬೀಜ ವಿತರಣೆ, ಜೀಜೋಪಚಾರ ಆಂದೋಲನ ಹಾಗೂ ಕೃಷಿ ಪರಿಕರ ವಿತರಣ ಕಾರ್ಯಕ್ರಮದಲ್ಲಿ ರೈತರಿಗೆ ಕೃಷಿ ಪರಿಕರಗಳನ್ನು ವಿತರಿಸಿ ಮಾತನಾಡಿದ ಅವರು ರೈತರು ಆದುನಿಕ ಕೃಷಿಗೆ ಬೇಕಾದ ಸಲಕರಣೆಗಳನ್ನು ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ತೆಗೆದುಕೊಂಡು ವ್ಯವಸಾಯಕ್ಕೆ ಬಳಸಿಕೊಳ್ಳಬೇಕು. ಕೇವಲ ಒಂದೇ ಬೆಳೆಯನ್ನು ನಂಬಿ ವ್ಯವಸಾಯ ಮಾಡುವ ಬದಲು ರೈತರ ಆರ್ಥಿಕ ಸ್ಥಿತಿ ಸುದಾರಿಸಲು ಲಾಭ ಬರುವಂತಹ ಬೆಳೆಗಳನ್ನು ರೈತರು ಬೆಳೆಯಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಬದಲ್ಲಿ ಪಲಾನುಭವಿಗಳಿಗೆ ಟಾರ್ಪಲ್, ನೇಗಿಲುಸೇರಿದಂತೆ ಕೃಷಿಗೆ ಸಂಬAದಿಸಿದAತೆ ಕೃಷಿ ಪರಿಕರಗಳನ್ನು ನೀಡಲಾಯಿತು. ಸಮಗ್ರ ಅಭಿವೃದ್ದಿ ಹೊಂದಿದ ಪ್ರಗತಿಪರ ರೈತರನ್ನು ಗುರುತಿಸಿ ಆತ್ಮ ಶ್ರೇಷ್ಟ ಕೃಷಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಸಹಾಯಕ ನಿದೇಶಕ ಪೂಜಾ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ತಾಳಕೆರೆ ಶ್ರೀಕಾಂತ್ ಸದಸ್ಯರಾದ ಹಾವಾಳರಾಮೇಗೌಡ, ಎನ್.ಆರ್.ಸುರೇಶ್, ಬೇವಿನಹಳ್ಳಿ ಬಸವರಾಜು, ದುಂಡಾಸುರೇಶ್, ಶೇಷೇಗೌಡ, ದೇವಿಹಳ್ಳಿ ಬಸವರಾಜು ಕೃಷಿ ಇಲಾಖೆ ಗಿರೀಶ್ ಸೇರಿದಂತೆ ರೈತ ಮುಖಂಡರು ರೈತರು ಇದ್ದರು.
(Visited 1 times, 1 visits today)