ತುಮಕೂರು: ನಗರದ ಸಮೀಪದ ಅಗಳಕೋಟೆಯಲ್ಲಿರುವ ಶ್ರೀ ಸಿದ್ದಾ ರ್ಥ ದಂತ ವೈದ್ಯಕೀಯ ಆಸ್ಪತ್ರೆ ಮತ್ತು ಕಾಲೇಜಿನ ಕೃತಕ ದಂತ ಚಿಕಿತ್ಸಾ ವಿಭಾಗದ ವೈದ್ಯರ ತಂಡ ವಿಶ್ವ ಬಾಯಿ ಆರೋಗ್ಯ ದಿನದ ಅಂಗವಾಗಿ ನಗರದ ಶ್ರೀ ಶಾರದಾಂಬ ಟ್ರಸ್ಟ್ ನಡೆಸುತ್ತಿರುವ ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿ ಉಚಿತ ದಂತ ತಪಾಸಣೆ ಮತ್ತು ದಂತ ಜೋಡಣಾ ಶಿಬಿರವನ್ನು ಯಶಸ್ವಿಯಾಗಿ ನಡೆಸಲಾಯಿತು.
ಅನಾಥಾಶ್ರಮದ ಆವರಣದಲ್ಲಿ ನಡೆದ ವಿಶ್ವ ಬಾಯಿ ಆರೋಗ್ಯದಿನದ ಕಾರ್ಯಕ್ರಮದಲ್ಲಿ ಕೃತಕ ದಂತ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಡಾ. ರಾಘವೇಂದ್ರ ಪ್ರಸಾದ್ ಮಾತನಾಡಿ, ಪ್ರತಿ ವರ್ಷ ವಿಶ್ವ ಬಾಯಿಯ ಆರೋಗ್ಯ ದಿನವು ಉತ್ತಮ ಸಾಮಾನ್ಯ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮೌಖಿಕ ನೈರ್ಮಲ್ಯದ ಪ್ರಾಮುಖ್ಯತೆಯ ಜ್ಞಾಪನೆಯಾಗಿ ಕಾರ್ಯನಿರ್ವಹಿಸುತ್ತದೆ. ಪ್ರತಿ ಯೊಬ್ಬರು ತಮ್ಮ ಮೌಖಿಕ ಆರೋಗ್ಯದ ಜವಾಬ್ದಾರಿಯನ್ನು ನಿರ್ವಹಿಸಿಕೊಳ್ಳಬೆಕು. ಮೌಖಿಕ ಆರೋಗ್ಯ ಮತ್ತು ಸಾಮಾನ್ಯ ಆರೋಗ್ಯವು ಪರಸ್ಪರ ಸಂಬAಧ ಹೊಂದಿದೆ ಎಂದರು.
ಬಾಯಿ ಆರೋಗ್ಯ ಎಂದರೆ ಆತ್ಮವಿಶ್ವಾಸ ಹೆಚ್ಚಿಸುವುದು, ಆರೋಗ್ಯ ಕಾಪಾಡಿಕೊಳ್ಳುವುದು. ದಿನಕ್ಕೆ ೨ ಬಾರಿ ಹಲ್ಲುಜ್ಜಿ, ಫ್ಲೋಸಿಂಗ್ ಮಾಡಿ, ದಂತ ವೈದ್ಯರ ಬಳಿ ತಪಾಸಣೆ ಮಾಡಿಸಿ ಆರೋಗ್ಯಕರ ಭವಿಷ್ಯ ರೂಪಿಸಿಕೊಳ್ಳಿ ಎಂದು ಡಾ. ರಾಘವೇಂದ್ರ ಪ್ರಸಾದ್ ಅವರು ವೃದ್ಧಾಶ್ರಮ ಮತ್ತು ಅನಾಥಾಶ್ರಮದಲ್ಲಿನ ಪ್ರಜೆಗಳಿಗೆ ಮನವರಿಕೆ ಮಾಡಿಕೊಟ್ಟರು.
ಉಚಿತ ತಪಾಸಣೆಯ ಶಿಬಿರದಲ್ಲಿ ವೈದ್ಯರಾದ ಡಾ.ಕೆ.ಚೇತನ, ಡಾ.ನೀಲಾಂಜಲಿ ಮಠಪತಿ, ಡಾ.ಕೆ.ಅನುಷಾ, ಡಾ.ರವೀಂದ್ರ, ಡಾ, ಶಾರನ್, ಡಾ.ರುಯಿನಾ ಅಸ್ಮಾ ಮತ್ತು ತಾಂತ್ರಿಕ ವೈದ್ಕೀಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಶ್ರೀ ಶಾರದಾಂಬ ಟ್ರಸ್ಟ್ನ ವೃದ್ಧಾಶ್ರಮ ಮತ್ತು ಅನಾ ಥಾಶ್ರಮದಲ್ಲಿ ೬೦ ಮಂದಿಗೆ ದಂತ ತಪಾಸಣೆ ನಡೆಸಲಾಯಿತು. ಇದರಲ್ಲಿ ೧೪ ಮಂದಿಗೆ ಉಚಿತವಾಗಿ ದಂತ ಪಂಕ್ತಿಗಳನ್ನು ವಿತರಿಸಲಾಯಿತು.
(Visited 1 times, 1 visits today)