ಚಿಕ್ಕನಾಯಕನಹಳ್ಳಿ: ಟೀಕಿಸುವವರು ಟೀಕಿಸಲಿ ಜನರಿಗೆ ಮಾತ್ರ ಮನೆ ಮಗ ಮನೆ ಬಾಗಿಲಿಗೆ ಕಾರ್ಯಕ್ರಮ ವಿಶ್ವಾಸ ಮೂಡಿಸಿದೆ ಜನರ ಬಳಿಯೇ ತಾಲ್ಲೂಕು ಆಡಳಿತಾಧಿಕಾರಿಗಳು ಹೋಗಿ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಿರುವುದು ಶ್ಲಾಘನೀಯವಾಗಿದ್ದು ಇದರೊಂದಿಗೆ ಇನ್ನು ತ್ವರಿತವಾಗಿ ಕೆಲಸಗಳು ನಡೆಯಲಿ ಎಂಬ ಕಾರಣಕ್ಕೆ ನಮ್ಮ ಸಿ.ಬಿ.ಎಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಬ್ ಟಾಪ್ ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಚಿಕ್ಕನಾಯಕನಹಳ್ಳಿ ವಿಧಾನ ಸಭಾಕ್ಷೇತ್ರದ ಎಲ್ಲಾ ಗ್ರಾಮಪಂಚಾಯಿತಿಗಳ ಅಭಿವೃದ್ದಿ ಅಧಿಕಾರಿಗಳಿಗೆ ಸಿ.ಬಿ.ಎಸ್ ಟ್ರಸ್ಟ್ ವತಿಯಿಂದ ಲ್ಯಾಬ್ ಟಾಪ್ ವಿತರಣೆ ಮಾಡಿ ಮಾತನಾಡಿದ ಅವರು ನಮ್ಮ ಸಿ.ಬಿ.ಎಸ್.ಚಾರಿಟಬಲ್ ಟ್ರಸ್ಟ್ ವತಿಯಿಂದ ಆರೋಗ್ಯ ಹಾಗೂ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಈ ನಿಟ್ಟಿನಲ್ಲಿ ತಾಲ್ಲೂಕು ಆಡಳಿತದ ಎಲ್ಲಾ ಅಧಿಕಾರಿಗಳು ನನ್ನೊಂದಿಗೆ ವಾರದಲ್ಲಿ ಎರಡು ದಿನಗಳ ಕಾಲ ಕೈಜೊಡಿಸಿ ಯಾವುದೇ ಜಾತಿ, ಪಕ್ಷ, ಬೇದ ಬಾವ ಇಲ್ಲದೇ ಜನರ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸುವ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸನವ್ನು ಮಾಡಲಾಗುತ್ತಿದೆ ಅದ್ದರಿಂದ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಇದಕ್ಕೆ ಅನುಕೂಲವಾಗಲೇಂದು ಗ್ರಾಮಲೆಕ್ಕಾಧಿಕಾರಿಗಳಿಗೆ , ಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳಿಗೆ ಲ್ಯಾಬ್ ಟಾಪ್ ವಿತರಿಸಲಾಗುತ್ತಿದ್ದು ಇದರೊಂದಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ಮೊಬೈಲ್ ನೀಡುವಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದ ಅವರು ಕಳೆದ ಹತ್ತು ವರ್ಷಗಳಿಂದ ನಮ್ಮ ಟ್ರಸ್ಟ್ ವತಿಯಿಂದ ಸಿಇಟಿ ನೀಟ್ ತರಬೇತಿ ನೀಡಲಾಗುತ್ತಿದ್ದು ಕಳೆದಬಾರಿ ಅನೇಕರು ಸರ್ಕಾರಿ ಕೋಟದಲ್ಲಿ ವೈದ್ಯಕೀಯ, ಇಂಜನಿಯರಿAಗ್ ಸೇರಿದಂತೆ ವಿವಿಧ ಕೋರ್ಸ್ ಗಳಿಗೆ ಸೇರಿದರು ಅದರಂತೆ ಈ ಬಾರಿಯು ಉತ್ತಮವಾದ ತರಬೇತಿದಾರರಿಂದ ತರಬೇತಿ ನೀಡಿದ್ದು ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಅದೇರೀತಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ಪ್ರೇರಣಾ ಶಿಬಿರ ಗಳನ್ನು ಮಾಡುವ ಮೂಲಕ ಉತ್ತಮ ಪಲಿತಾಂಶ ಬರಲು ಸಹಕಾರಿಯಾಗಿದೆ ಅದ್ದರಿಂದ ತಾಲ್ಲೂಕಿನಲ್ಲಿ ಉತ್ತಮ ಶಿಕ್ಷಣ ನೀಡಿದರೆ ಭವಿಷ್ಯ ಉಜ್ವಲವಾಗುತ್ತದೆ , ಆರೋಗ್ಯ ನೀಡಿದರೆ ನೆಮ್ಮದಿಯಾಗಿರುತ್ತಾರೆ ಎಂಬ ಕಾರಣಕ್ಕೆ ಆರೋಗ್ಯ – ಶಿಕ್ಷಣಕ್ಕೆ ಒತ್ತು ನೀಡುತ್ತಿರುವ ಸಿ.ಬಿ.ಎಸ್ ಟ್ರಸ್ಟ್ ಸಮಾಜ ಮುಖಿಯಾಗಿ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭ ದಲ್ಲಿ ತಾ.ಪಂ. ಇಒ ದೊಡ್ಡಸಿದ್ದಯ್ಯ ಮಾತನಾಡಿ ಶಾಸಕರು ಅಧಿಕಾರಿಗಳ ಕಷ್ಟವನ್ನು ನೋಡಿ ಅವರ ಕೆಲಸ ಕಾರ್ಯಗಳಿಗೆ ಅನುಕೂಲವಾಗುವಂತೆ ಲ್ಯಾಬ್ ಟಾಪ್ ನೀಡುತ್ತಿರುವುದು ಶ್ಲಾಘನೀಯವಾಗಿದ್ದು ಇದರಿಂದ ಸಾರ್ವಜನಿಕರ ಕೆಲಸಗಳು ತ್ವರಿತವಾಗಿ ನಡೆಯುವುದರೊಂದಿಗೆ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲು ಅನುಕೂಲವಾಗಿದೆ ಇದನ್ನು ಎಲ್ಲಾ ಅಧಿಕಾರಿಗಳು ಉಪಯೋಗಿಸಿಕೊಂಡು ಉತ್ತಮ ಕಾರ್ಯನಿರ್ವಹಿಸಬೇಕು ಎಂದರು.
ತಾಲ್ಲೂಕು ಅಭಿವೃದ್ದಿ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ನಾಗೇಶ್ ಮಾತನಾಡಿ ಕಳೆದ ಒಂದು ವಾರದ ಹಿಂದೆ ಶಾಸಕರಿಗೆ ನಮ್ಮ ಕೆಲಗಳಿಗೆ ಅನುಕೂಲವಾಗುವಂತೆ ಲ್ಯಾಬ್ ಟಾಪ್ ನೀಡುವಂತೆ ಮನವಿ ಮಾಡಿದ್ದೇವು ಅದರಂತೆ ಅವರು ಸಿಬಿಎಸ್ ಟ್ರಸ್ಟ್ ಮೂಲಕ ಇಂದು ನಮ್ಮ ತಾಲ್ಲೂಕು ಸೇರಿದಂತೆ ಬುಕ್ಕಾಪಟ್ಟಣದ ವ್ಯಾಪ್ತಿಯ ಎಲ್ಲಾ ಗ್ರಾಮಪಂಚಾಯಿಗಳ ಅಭಿವೃದ್ದಿ ಅಧಿಕಾರಿಗಳಿಗೆ ಇಂದು ವಿತರಿಸುತ್ತಿದ್ದಾರೆ ಅವರಿಗೆ ಧನ್ಯವಾದಗಳು ಎಂದ ಅವರು ನಮ್ಮ ಕಾರ್ಯಕ್ರಮಗಳನ್ನು ಹೆಚ್ಚಿನ ಹಾಗೂ ತ್ವರಿತವಾಗಿ ಮಾಡಲು ಅನುಷ್ಠಾನ ಗೊಳಿಸಲು ಸಹಕಾರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕಿನ ಎಲ್ಲಾ ಗ್ರಾಮಪಂಚಾಯಿತಿ ಅಭಿವೃದ್ದಿ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)