ತುಮಕೂರು: ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ಇದೇ ಮೇ ೨೫ ರಂದು ನಡೆಯಲಿರುವ ಸ್ಲಂ ಜನರ ಹಬ್ಬ, ಸಮಾವೇಶ ಮತ್ತು ಪ್ರತಿಭಾಪುರಸ್ಕಾರದ ಕರಪತ್ರ ಬಿಡುಗಡೆ ಮಾಡಲಾಯಿತು.
ನಗರದ ಸೂಫಿಯಾ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಡಾ.ಎಸ್ ರಮೇಶ್ ಕರಪತ್ರ ಬಿಡುಗಡೆ ಮಾಡಿ ಪ್ರತಿಯೊಂದು ಸ್ಲಂಗಳು ಪುಟ್ಟ ಭಾರತ ಇಲ್ಲಿರುವ ಬಹುತ್ವಯುತ ಸಂಸ್ಕೃತಿ, ಸಂಪ್ರದಾಯ, ಆಚಾರ, ವಿಚಾರ, ಜಾತಿ, ಧರ್ಮ, ಭಾಷೆಗಳಿದ್ದರು ಸ್ಲಂಗಳಲ್ಲಿ ಸೋದರತೆಯ ಸೌಹಾರ್ಧತೆಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವುದು ಇಂದಿನ ಮನುಷ್ಯ ಸಮಾಜಕ್ಕೆ ಮಾದರಿಯಾಗಿದೆ. ಕಳೆದ ೨೦ ವಷಗಳಲ್ಲಿ ಕರ್ನಾಟಕದ ನಗರ ಪ್ರದೇಶಗಳಲ್ಲಿ ಕೆಳಜಾತಿಯ ಬಡ ಜನರು ವಾಸಿಸುವ ಕೊಳಚೆ ಪ್ರದೇಶಗಳಲ್ಲಿರುವ ಶ್ರಮ ಸಂಸ್ಕೃತಿ ಹಲವಾರು ಪಲ್ಲಟನೆಗಳನ್ನು ತಂದಿದ್ದು ಶ್ರಮಿಕರ ಸಾಂಸ್ಕೃತಿಕತೆಯನ್ನು ಬೆಸೆಯುತ್ತಿದ್ದು ೨೦೦೭ರಲ್ಲಿ ಪ್ರಾರಂಭಿಸಲಾದ ಸ್ಲಂ ಹಬ್ಬ ಸ್ಲಂ ನಿವಾಸಿಗಳಿಗೆ ನಗರದ ಮೇಲಿನ ಉತ್ತರದಾಯಕತ್ವಕ್ಕಾಗಿ ಮತ್ತು ಸಾಂಸ್ಕೃತಿಕ ನೆಲೆಗಾಗಿ ತಳಸಮುದಾಯಗಳನ್ನು ಕಲೆಗಳ ಅನಾವರದಿಂದಾಗಿ ನಗರ ಪ್ರದೇಶಗಳಲ್ಲಿರುವ ಅಭಿವೃದ್ಧಿ ತಾರತಮ್ಯ, ಅಸಮಾನತೆಗಳನ್ನು ನಗರ ವಂಚಿತ ಸಮುದಾಯಗಳು ಪ್ರತಿರೋಧಿಸಲು ತಮ್ಮ ಸಾಂಸ್ಕೃತಿಕ ಕಲೆಗಳನ್ನು ವೇದಿಕೆಯಾಗಿ ಕಲ್ಪಿಸಿಕೊಂಡು ನಗರದ ಮೇಲಿನ ಹಕ್ಕುಪ್ರತಿಪಾದನೆಗೆ ಪ್ರೇರೆ ಪಿಸುವಲ್ಲಿ ಯಶಸ್ವಿಯಾಗಿ ನಮ್ಮ ಜನರಲ್ಲಿರುವ ಮಾನಸಿಕ ಗುಲಾಮತನವನ್ನು ಹೋಗಲಾಡೊಸಲು ಪ್ರಮುಖವಾದ ವೇದಿಕೆಯಾಗಿದೆ ಇದು ತುಮಕೂರಿನಲ್ಲಿ ನಡೆಯುತ್ತಿರುವುದು ವಿಶೇಷವಾಗಿದ್ದು ಸಾವಿರಾರು ಕುಟುಂಬಗಳಿಗೆ ವಸತಿ ಮತ್ತು ಭೂಮಿ ಹಕ್ಕನ್ನು ದೊರಕಿಸಿ ಕೊಡುವಲ್ಲಿ ಸ್ಲಂ ಸಂಘಟನೆ ಯಶಸ್ವಿಯಾಗಿದೆ ನಾವೆಲ್ಲರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸೊಣ ಎಂದರು.
ನಂತರ ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು ಮಾಜಿ ನಗರ ಪಾಲಿಕೆ ಸದಸ್ಯರಾದ ಲಕ್ಷ್ಮೀ ನರಸಿಂಹರಾಜು ಮಾತನಾಡಿ ರಾಜ್ಯ ಮಟ್ಟದ ಈ ಕಾರ್ಯಕ್ರಮ ತುಮಕೂರಿನಲ್ಲಿ ನಡೆಯುತ್ತಿರುವುದು ಸಂತೋಷದ ಸಂಗತಿ, ಈ ಸ್ಲಂ ಹಬ್ಬದಲ್ಲಿ ತಳಸಮುದಾಯಗಳ ಕಲಾಪ್ರಕಾರಗಳು ಪ್ರದರ್ಶನವಾಗುತ್ತಿದ್ದು ಸ್ಲಂ ವಿಧ್ಯಾರ್ಥಿಗಳಿಗೆ ನಿರಂತರವಾಗಿ ಪ್ರೋತ್ಸಾಹ ನೀಡುವ ಸಲುವಾಗಿ ಪ್ರತಿಭಾಪುರಸ್ಕಾರ ಹಮ್ಮಿಕೊಳ್ಳುತ್ತಿರುವುದು ಸ್ಲಂ ಮಕ್ಕಳಲ್ಲಿ ಸ್ಪೂರ್ತಿ ತಂದಿದೆ ಎಂದರು.
ಎ.ನರಸಿಂಹಮೂರ್ತಿ ಮಾತನಾಡಿ, ನವ ಆರ್ಥಿಕತೆ ಸಂವಿಧಾನ ಜನರಿಗೆ ನೀಡಿರುವ ಅಧಿಕಾರಗಳನ್ನು ಕೇಂದ್ರಮಯಗೊಳಿಸುವ ಅಪಾಯಕಾರಿ ಕಾಲಘಟ್ಟಕ್ಕೆ ತಲುಪಿದೆ, ಸಾಮಾಜಿಕ ಮತ್ತು ಅಭಿವೃದ್ಧಿ ತಾರತಮ್ಯವನ್ನು ಸ್ಲಂ ಜನರ ಮೇಲೆ ಎಲ್ಲಾ ಸರ್ಕಾರಗಳು ನಡೆಸಿಕೊಂಡು ಬಂದಿದ್ದು ನಗರೀಕರಣ ಪ್ರಕ್ರಿಯೆ ವೇಗವಾಗುತ್ತಿದ್ದು ಕಳೆದ ೨ ವರ್ಷಗಳಿಂದ ಸರ್ಕಾರಿ ಮತ್ತು ಖಾಸಗಿ ಸ್ಲಂಗಳ ಘೋಷಣೆ ತಟಸ್ಥವಾಗಿದೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಳಪೆ ಗುಣಮಟ್ಟದ ಮನೆಗಳನ್ನು ಅರ್ಧಂಬರ್ಧ ಕಟ್ಟಿ ಕೈಬಿಡಲಾಗುತ್ತಿದೆ, ೨೦೨೩ರ ವಿಧಾನ ಸಭೆ ಚುನಾವಣಾ ಪ್ರಣಾಳಿಕೆಯಲ್ಲಿ ಈಗಿನ ಸರ್ಕಾರ ನೀಡಿರುವ ಆಶ್ವಾಸನೆಯಂತೆ ನಗರ ಲ್ಯಾಂಡ್ ಬ್ಯಾಂಕ್ ಯೋಜನೆ ಮತ್ತು ನಗರ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತರಬೇಕು, ನಗರಾಭಿವೃದ್ಧಿ ಯೋಜನೆಗಳಲ್ಲಿ ನಗರದ ಬಡಜನರು ಹಾಗೂ ಕೊಳಗೇರಿ ನಿವಾಸಿಗಳನ್ನು ನಿರ್ಲಕ್ಷಿಸದೇ ಜನರ ಕಲ್ಯಾಣದ ಸಂವಿಧಾನದ ಆಶಯವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಡೇರಿಸಲು ರಾಜ್ಯಾದ್ಯಂತ ಸಮಾವೇಶಗಳನ್ನು ಹಮ್ಮಿಕೊಂಡಿದ್ದು ಮೇ ೨೫ ರಂದು ತುಮಕೂರಿನಲ್ಲಿ ಮೇ ೨೮ ರಂದು ಗದಗ್ನಲ್ಲಿ ಮೇ ೨೯ ರಂದು ಕಲ್ಬುರ್ಗಿಯಲ್ಲಿ, ಮತ್ತು ಮೇ ೩೧ ರಂದು ರಾಯಚೂರಿನಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ತುಮಕೂರು ಸ್ಲಂ ಸಮಿತಿ ಪದಾಧಿಕಾರಿಗಳಾದ ಅರುಣ್, ಶಂಕ್ರಯ್ಯ, ತಿರುಮಲಯ್ಯ, ಕೃಷ್ಣಮೂರ್ತಿ, ಧನಂಜಯ್ ಮುಂ ತಾದವರು ಪಾಲ್ಗೊಂಡಿದ್ದರು.
(Visited 1 times, 1 visits today)