ತುಮಕೂರು: ಮನುಷ್ಯನನ್ನು ಕಾಡುತ್ತಿರುವ ಅನೇಕ ಗಂಬೀರ ಕಾಯಿಲೆಗಳಿಗೆ ಇಂದಿನ ತಾಂತ್ರಿಕ ನಡೆಯುತ್ತಿರುವ ವೈದ್ಯಕೀಯ ಸಂಶೋಧನೆಗಳು ಉತ್ತರ ನೀಡಿವೆ ಎಂದು ಸಾಹೇ ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ಕೆ.ಬಿ.ಲಿಂಗೇಗೌಡ ಅವರು ತಿಳಿಸಿದರು.
ನಗರದ ಸಮೀಪದ ನೆಲಮಂಗಲ ಸಮೀಪದ ಟಿ.ಬೇಗೂರಿನ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಂಡ್ ರಿಸರ್ಚ್ ಸೆಂಟರ್‌ನಲ್ಲಿ ಇಂದು (ಮೇ.೯)ಸಾಹೇ ವಿಶ್ವವಿದ್ಯಾಲಯ, ಕಾಲೇಜಿನ ಆತಂರಿಕ ಗುಣಮಟ್ಟ ಘಟಕ ಹಾಗೂ ಕರ್ನಾಟಕ ಆರೋಗ್ಯ ಇಲಾಖೆ, ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ‘ನಿರಂತರ ವೈದ್ಯಕೀಯ ಶಿಕ್ಷಣ’ ಎಂಬ ಘೋಷ ವಾಕ್ಯದೊಂದಿಗೆ ‘ಆಧುನಿಕ ವೈದ್ಯಕೀಯ ಕೌಶಲ್ಯ ಪರಿಪಕ್ವತೆ ಸಂಶೋಧನಾ ವಿಧಾನಗಳು’ ವಿಷಯ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೆಂಗಳೂರು ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಶಿಕ್ಷಣ ನೀಡಬೇಕು ಎಂಬ ಎಪ್ಪತ್ತರ ದಶಕದ ಕನಸು ಕಂಡಿದ್ದ ಓರ್ವ ಸಾಮಾನ್ಯ ಶಾಲಾ ಶಿಕ್ಷಕ ಗಂಗಾಧರಯ್ಯನವರು ಕನಸಿನಂತೆ ಸಿದ್ದಾರ್ಥ ಶಿಕ್ಷಣ ಸಂಸ್ಥೆಯನ್ನು ಮುಗಿಲು ಎತ್ತರಕ್ಕೆ ಕಟ್ಟಿ ಬೆಳೆಸಿರುವ ಸಾಹೇ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ. ಜಿ ಪರಮೇಶ್ವರ್ ಅವರು ಉತ್ತಮವಾದ ಗುಣಾತ್ಮಕ ಮತ್ತು ಸಂಶೋಧನಾತ್ಮಕ ಅಂತರಾಷ್ಟ್ರೀಯ ಮಟ್ಟದಲ್ಲಿ ನೀಡುವ ಶಿಕ್ಷಣವನ್ನು ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಕೊಡಬೇಕು ಎಂಬ ದೆಸೆಯಿಂದ ಅನೇಕ ವಿಚಾರ ಸಂಕಿರಣ, ಕಾರ್ಯಗಾರಗಳು ಸೇರಿದಂತೆ ಅತ್ಯಾವಶ್ಯಕವಾಗಿರುವ ಸಂಪನ್ಮೂಲಗಳನ್ನು ನೀಡುತ್ತಿದ್ದು ಇದರ ಸದುಪಯೋಗವನ್ನ ಬಳಸಿಕೊಂಡು ಸಮಾಜಕ್ಕೆ ಕೊಡುಗೆಯನ್ನು ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಡಾ. ಕೆ.ಬಿ.ಲಿಂಗೇಗೌಡ ಕರೆ ಕೊಟ್ಟರು.
ಮನುಷ್ಯನಿಗೆ ೧೦೦೦ ಸಮಸ್ಯೆಗಳಲ್ಲಿ ಆರೋಗ್ಯ ಸಮಸ್ಯೆಯು ಒಂದಾಗಿದ್ದು, ಅದೆಷ್ಟು ಕಾಯಿಲೆಗಳು ಮಾನವನ ಕಾಡುತ್ತಿವೆ. ಇದಕ್ಕೆ ಇಂದಿನ ವೈದ್ಯರು ತಾಂತ್ರಿಕವಾಗಿ ವೈದ್ಯಕೀಯ ಸಂಶೋಧನೆಗಳೊAದಿಗೆ ಉತ್ತರ ಕಂಡುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನಾತ್ಮಕವಾಗಿ ಅಧ್ಯಯನ ನಡೆಸಿದಾಗ ಉನ್ನತವಾದ ಗುರಿಯನ್ನು ಮುಟ್ಟಬಹುದು ಎಂದು ಸಾಹೇ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ.ಅಶೋಕ್ ಕೆ ಮೆಹ್ತಾ ಅವರು ತಿಳಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಮಹತ್ತರವಾದ ಸಾಧನೆಗಳಾಗುತ್ತಿದ್ದು ಇಂದಿನ ಯುವ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳು ಸಂಶೋಧನಾತ್ಮಕ ಯೋಜನೆಗಳನ್ನು ಕೈಗೊಂಡು ಕಾರ್ಯಗಾರಗಳಲ್ಲಿ ಮೂಡಿ ಬರುವ ವಿವಿಧ ಅಂಶಗಳನ್ನು ಅಧ್ಯಯನ ನಡೆಸಿ ಸಂಪನ್ಮೂಲ ವ್ಯಕ್ತಿಗಳಿಂದ ತಿಳಿದುಕೊಂಡು ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ತರವಾದ ಬದಲಾವಣೆಗಳನ್ನು ತರಬೇಕಾಗಿದೆ ಎಂದು ಅವರು ಹೇಳಿದರು.
ಸಾಹೇ ವಿವಿಯ ಕುಲಾಧಿಪತಿಗಳ ಆಡಳಿತ ಸಲಹೆಗಾರರಾದ ಡಾ. ವಿವೇಕ್ ವೀರಯ್ಯ ಅವರು ಮಾತನಾಡಿ, ಶೈಕ್ಷಣಿಕವಾಗಿ ಪ್ರಾಯೋಗಿಕ ಸಂಶೋಧನೆಗಳು ಸಂಪೂರ್ಣವಾದಾಗ ನಮ್ಮ ಸಾಧನೆಯ ಗುರಿ ಮುಟ್ಟಬಹುದು. ಇದಕ್ಕೆ ಸಹಾಯಕವಾಗಲೆಂದು ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯು ವಿವಿಧ ರೀತಿಯ ಶೈಕ್ಷಣಿಕ ಸಂಸ್ಥೆಗಳನ್ನು ತೆರೆದು ಆಯಾ ಕ್ಷೇತ್ರದ ನುರಿತ ಸಾಧಕರೊಂದಿಗೆ ಒಡಂಬಡಿಕೆ ಮಾಡಿಕೊಂಡು ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವ ಸಲುವಾಗಿ ಅನೇಕ ವ್ಯವಸ್ಥೆಯನ್ನು ಮಾಡಿದ್ದು ,ವಿದ್ಯಾರ್ಥಿಗಳು ತಾಂತ್ರಿಕವಾಗಿ ಬೆಳೆಯುತ್ತಿರುವ ಜಾಗತಿಕ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸಾಧನೆ ಮಾಡಬೇಕಾಗಿದೆ ಎಂದು ಕಿವಿಮಾತು ಹೇಳಿದರು.
ಕಾರ್ಯಾಗಾರದ ಆಯೋಜಕ ಮುಖ್ಯಸ್ಥರಾದ ಡಾ.ಲೋಹಿತ್ ಕೆ. ಅವರು ಮಾತನಾಡಿ, ಇಂದಿನ ವೇಗವಾಗಿ ಮುಂದುವರಿಯುತ್ತಿರುವ ವೈದ್ಯಕೀಯ ಕ್ಷೇತ್ರದಲ್ಲಿ, ವೈಜ್ಞಾನಿಕ ಸಾಹಿತ್ಯವನ್ನು ನ್ಯಾವಿಗೇಟ್ ಮಾಡುವ ಮತ್ತು ಕೊಡುಗೆ ನೀಡುವ ಸಾಮರ್ಥ್ಯವು ಸಂಶೋಧಕರು, ವೈದ್ಯರು ಮತ್ತು ಆರೋಗ್ಯ ವೃತ್ತಿಪರರಿಗೆ ನಿರ್ಣಾಯಕ ಕೌಶಲ್ಯವಾಗಿದೆ. ಈ ಅಧಿವೇಶನವು ಭಾಗವಹಿಸುವವರಿಗೆ ಉತ್ತಮ ಗುಣಮಟ್ಟದ ವೈದ್ಯಕೀಯ ಸಂಶೋಧನಾ ಪ್ರಬಂಧಗಳನ್ನು ಅರ್ಥಮಾಡಿಕೊಳ್ಳಲು, ಮೌಲ್ಯಮಾಪನ ಮಾಡಲು ಮತ್ತು ಬರೆಯಲು ಅಗತ್ಯವಾದ ಅಗತ್ಯ ಪರಿಕರಗಳು ಮತ್ತು ಜ್ಞಾನವನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದೆ ಎಂದರು.
ಕ್ಷೇತ್ರದ ತಜ್ಞರಿಂದ ಕಲಿಯಲು ಮತ್ತು ನಿಮ್ಮ ಸಂಶೋಧನಾ ಕೌಶಲ್ಯಗಳನ್ನು ಹೆಚ್ಚಿಸಲು ಮತ್ತು ನಿಮ್ಮ ಸಂಶೋಧನೆಗಳನ್ನು ಸ್ಪಷ್ಟತೆ ಮತ್ತು ನಿಖರತೆಯೊಂದಿಗೆ ಸಂವಹನ ಮಾಡಲು ನಿಮಗೆ ಅಗತ್ಯವಿರುವ ಪ್ರಾಯೋಗಿಕ ಒಳನೋಟಗಳನ್ನು ಪಡೆಯಲು ಈ ಕಾರ್ಯಗಾರ ಸಹಾಯವಾಗಲಿದ್ದು ಇದರ ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಅವರು ತಿಳಿಸಿದರು.
ಇದೇ ವೇಳೆ ವೈದ್ಯಕೀಯ ಸಾಹಿತ್ಯದ ವಿಮರ್ಶಾತ್ಮಕ ಮೌಲ್ಯಮಾಪನ ಕುರಿತಾಗಿ ಅಬಾಟ್ ಇಂಡಿಯಾ ಕಾರ್ಡಿಯೋ ಮೆಟಾಬಾಲಿಕ್ ವಿಭಾಗದ ಹಿರಿಯ ವೈದ್ಯಕೀಯ ಸಲಹೆಗಾರ ಡಾ.ನಿಖೀಲ್ ಭಟ್, ಡಾ.ಮಂಗಳ ರಾಂ, ಡಾ.ಐಶ್ವರ್ಯ, ಡಾ.ವಿದ್ಯಾ ಸೇರಿದಂತೆ ಇತರೆ ನುರಿತ ವೈದ್ಯಕೀಯ ಸಂಪನ್ಮೂಲ ವ್ಯಕ್ತಿಗಳು ಕಾರ್ಯಾಗಾರದಲ್ಲಿ ವಿಷಯ ಮಂಡಿಸಿದರು.
ಈ ಸಂದರ್ಭದಲ್ಲಿ ಸಾಯಿ ವಿಶ್ವವಿದ್ಯಾಲಯದ ಉಪಕುಲ ಸಚಿವರಾದ ಡಾ.ಸುದೀಪ್ ಕುಮಾರ್, ಎಸ್ ಎಸ್‌ಆg ಸಿ ಮೆಡಿಕಲ್‌ಸೂಪರ್ ಡಾ. ಮನೋಹರ್, ಸಂಘಟನಾ ಕಾರ್ಯದರ್ಶಿ ಡಾ. ತೇಜಸ್ವಿನಿ, ಡಾ. ನಿಶ್ಚಿತ , ಡಾ. ಜೈರಾಮ್, ಅನಿತಾ , ಸತೀಶ್ , ಶಶಿಕಲಾ ಆದರ್ಶ ರೂಪ ಇತರರು ಉಪಸ್ಥಿತರಿದ್ದರು.
(Visited 1 times, 1 visits today)