ಚಿಕ್ಕನಾಯಕನಹಳ್ಳಿ :ರಾಜ್ಯ ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಹಾಗೂ ಗಣಿ ಬಾದಿತ ಪ್ರದೇಶಾಭಿವೃದ್ದಿ ಹಣದಲ್ಲಿ ತಾಲ್ಲೂಕಿಗೆ ಹಂಚಿಕೆಯಾಗಿರುವ ಹಣವನ್ನು ಸಮರ್ಪಕವಾಗಿ ಬಳಸಿ ಅಭಿವೃದ್ದಿ ಪಡಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಹಾಗೂ ಗೃಹ ಮಂತ್ತಿ ಜಿ.ಪರಮೇಶ್ವರ್ ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಮಂಗಳವಾರ ನಡೆದ ತಾಲ್ಲೂಕಿನ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡಿದ ಅವರು ಕೃಷಿ, ತೋಟಗಾರಿಕೆ ರೇಷ್ಮೆ , ಪಶು ಸಂಗೋಪನೆ ಇಲಾಖೆಗಳು ಸೇರಿದಂತೆ ಶಿಕ್ಷಣ ಇಲಾಖೆಗಳು ನರೇಗಾ ಯೋಜನೆಯಡಿ ಕಾಮಗಾರಿಗಳನ್ನು ಸಮರ್ಪಕವಾಗಿ ಮಾಡಲು ಸೂಚನೆ ನೀಡಿದ ಅವರು ಕೃಷಿ ಇಲಾಖೆಯಿಂದ ರೈತರಿಗೆ ಸಿಗಬೇಕಾಗಿರುವಂತಹ ಬಿತ್ತನೆ ಬೀಜ, ರಸಗೊಬ್ಬರದ ಸಮಸ್ಯೆ ಬಾರದಂತೆ ಕ್ರಮವಹಿಸವಂತೆ ತಿಳಿಸಿದರು, ಆಹಾರ ಇಲಾಖೆಯಿಂದ ಅನರ್ಹ ಪಡಿತರ ಚೀಟಿಗಳನ್ನು ಪತ್ತೆ ಹಚ್ಚಿ ಕಾಳ ಸಂತೆಯಲ್ಲಿ ಅಕ್ಕಿ ಮಾರಾಟವಾಗುವುದನ್ನು ತಪ್ಪಿಸಲು ಕ್ರಮಕೈಗೊಳ್ಳುವಂತೆ ತಿಳಿಸಿದರು, ಈ ತಾಲ್ಲೂಕಿಗೆ ಭದ್ರಮೇಲ್ದಂಡೆ, ಎತ್ತಿನಹೊಳೆ, ಹೇಮಾವತಿ ಮೂರು ನೀರಾವರಿ ಯೋಜನೆಗಳಿದ್ದು ಅವುಗಳು ಸಮಪರ್ಕವಾಗಿ ಆಗಬೇಕಾಗಿದ್ದು ಈ ಬಗ್ಗೆ ಗಮನಹರಿಸುವಂತೆ ತಿಳಿಸಿ ಶಾಲೆಗಳ ಅಭಿವೃದ್ದಿಗೆ ೯೦ಕೋಟಿ ಅನುದಾನ ಬಿಡುಗಡೆಯಾಗಿದ್ದು ಇದರಲ್ಲಿ ೭೮ಕೋಟಿ ವೆಚ್ಚದ ಕಾಮಗಾರಿಗೆ ಅನುಮೋದನೆಯಾಗಿದ್ದು ಕೂಡಲೇ ಶಾಲೆಗಲ ಕಟ್ಟಡಗಳು ಸೇರಿದಂತೆ ಅಗತ್ಯವಾಗಿರುವಂತಹ ಕಾಮಗಾರಿಗಳನ್ನು ನಿಗದಿತಅವಧಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು, ತಾಲ್ಲೂಕಿಗೆ ಆರೋಗ್ಯ ಕ್ಷೇಮ ಕೇಂದ್ರಗಳಿಗೆ ಒಟ್ಟು ೬೫ಲಕ್ಷ ವೆಚ್ಚದಲ್ಲಿ ಒಟ್ಟು ೧೪ಕಾಮಗಾರಿಗಳು ಮಂಜೂರಾಗಿದ್ದು ಅವುಗಳನ್ನು ಪೂರ್ಣಗೊಳಿಸುವಂತೆ ತಿಳಿಸಿದರು. ತಾಲ್ಲೂಕಿನಲ್ಲಿರುವ ನಿವೇಶನ ರಹಿತರು ಮನೆ ರಹಿತರಿಗೆ ಮನೆಗಳನ್ನು ನೀಡಲು ಸರ್ಕಾರ ಯೊಜನೆ ರೂಪಿಸಿದ್ದು ಅದಕ್ಕೆ ಕೂಡಲೇ ಮಾಹಿತಿ ಸಂಗ್ರಹಿಸಿ ಸರಿಯಾದಅಂಕಿ ಅಂಶಗಳನ್ನು ನೀಡುವಂತೆ ತಿಳಿಸಿದಅವರು ೧೫೦ಮನೆಗಳು ಈಗಾಗಲೇ ಗಣಿಹಣದಲ್ಲಿ ಮಂಜೂರಾಗಿದ್ದು ಪ್ರತಿಮನೆಗೆ ೭.೫ಲಕ್ಷ ಮಂಜೂರಾಗಿದ್ದು ಇದನ್ನು ಕೂಡಲೇ ಅನುಷ್ಠಾನಗೊಳಿಸಿ ಎಂದರು.
ಚುನಾವಣೆಗೆ ಮೊದಲು ಜನಸಮುದಾಯಕ್ಕಾಗಿ ನಮ್ಮ ಪ್ರಣಾಳಿಕೆಯನ್ನು ತಯಾರಿಸಿದ್ದು ನಾನೇ ಕೇಲವು ನಿರ್ದೀಷ್ಠ ಉದ್ದೇಶಗಳನ್ನೊಳಗೊಂಡು ಅದನ್ನು ಮಾಡಿದ್ದು ಬಡವರು ಬಡತನ ರೇಖೆಗಿಂತ ಮೇಲೆ ಬರಬೇಕೆಂದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಮದ್ಯಪ್ರದೇಶದಂತಹ ರಾಜ್ಯಗಳಲ್ಲಿ ಇನ್ನು ಅಭಿವೃದ್ದಿಯನ್ನು ಹೊಲಿಸಿದರೆ ನಾವು ಮುಂದೆಇದ್ದೇವೆ ಅನಿಸುತ್ತದೆ ಅದರೂ ಇನ್ನು ಕೇಲವು ತಾಲ್ಲೂಕುಗಳಲ್ಲಿ ನೀರು, ಶಿಕ್ಷಣ, ರಸ್ತೆ ವಿದ್ಯುತ್ ಸಮಸ್ಯೆಗಳಿವೆ ಅವುಗಳನ್ನು ಇನ್ನು ಬಗೆಹರಿಸಬೇಕಾಗಿದೆ. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ನೇರವಾಗಿ ಸಮುದಾಯಗಳನ್ನು ತಲುಪಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಅದರ ಯಶಸ್ವಿಯಾಗುವ ಬಗ್ಗೆ ಕಾರ್ಯ ನಿರ್ವಹಿಸುವಂತಹ ಇಲಾಖೆಗಳಾದ ಕೃಷಿ ಇಲಾಖೆ, ತೋಟಗಾರಿಕೆ, ಪಶುಇಲಾಖೆ, ರೇಷ್ಮೆ, ಶಿಕ್ಷಣ, ಬೆಸ್ಕಾಂ, ಆಹಾರ ಇಲಾಖೆ ಗಳ ಪ್ರಗತಿಯ ಬಗ್ಗೆ ಪರಿಶಿಲೆನೆ ಮಾಡಿದ ಅವರು ಗಣಿಬಾದಿತ ಪ್ರದೇಶಾಭಿವೃದ್ದಿಯಿಂದ ಸಾಕಷ್ಟು ಹಣ ಇದ್ದು ಅಧಿಕಾರಿಗಳು ಉತ್ತಮವಾಗಿ ಸದ್ಬಳಕೆ ಮಾಡಿ ಅಭಿವೃದ್ದಿಕೆಲಸಗಳನ್ನು ಮಾಡಬೇಕಿದೆ ಇಂದು ತುಮಕೂರು ಜಿಲ್ಲೆ ಅಭಿವೃದ್ದಿ ಆಳತೆಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದು ಅದು ಮೊದಲನೇ ಸ್ಥಾನಕ್ಕೆ ಬರಬೇಕಾದರೆ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು
ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್ ಬಾಬು ಕ್ಷೇತ್ರದಅಭಿವೃದ್ದಿ ಸೆರಿದಂತೆ ಆಗಲೇ ಬೇಕಾದಂತಹ ಯೋಜನೆಗಳ ಬಗ್ಗೆ ಉಸ್ತುವಾರಿ ಮಂತ್ರಿಗಳ ಬಳಿ ವಿವರಿಸಿ ಮಾತನಾಡಿ ತಾಲ್ಲೂಕಿಗೆ ಹರಿಯುತ್ತಿರುವಂತಹ ಹೇಮಾವತಿ ನಾಲೆಗೆ ಕಟ್ ಆಂಡ್ ಕವರ್ ಕಾಮಗಾರಿಗೆ ೧೫೦ಕೋಟಿ ಮಂಜೂರು ಮಾಡಬೇಕು ಹಾಗೂ ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇವೆ , ಇದರೊಂದಿಗೆ ಪಶು ಇಲಾಖೆಯ ಪಶು ಆಸ್ಪತ್ರೆಗಳನ್ನು ಮಂಜೂರು ಮಾಡಬೆಕು ಅದು ದಸೂಡಿ ಭಾಗಕ್ಕೆ ಮಂಜೂರು ಆಗಬೇಕು , ಕಂದಿಕೆರೆ ಭಾಗಕ್ಕೆ ಹೇಮಾವತಿ ನೀರು ಹರಿಸಬೇಕಾಗಿದೆ ಇದಕ್ಕೆ ಕೆಲವು ತಾಂತ್ರಿಕ ತೊಂದರೆಯಾಗಿದ್ದು ಅದನ್ನು ಸರಿಪಡಿಸಿ ಹಣ ಬಿಡುಗಡೆ ಮಾಡಬೇಕಾಗಿದ್ದು ಇದರಿಂದ ಚಿಕ್ಕನಾಯಕನಹಳ್ಳಿ, ನವಿಲೆ, ಕಂದಿಕೆರೆ ಭಾಗಕ್ಕೆ ನೀರು ಹರಿಸಬಹುದಾಗಿದೆ , ಹಾಗೂ ಕೆಎಸ್ ಆರ್ ಟಿಸಿ ಬಸ್ ಡಿಪೊ ಜಾಗಕ್ಕೆ ಸಂಬAಧಿಸಿದAತೆ ಜಾಗದ ಸಮಸ್ಯೆ ಇದ್ದು ಅದನ್ನು ಬಗೆಹರಿಸಬೆಕಿದೆ ಇದರೊಂದಿಗೆ ನಮ್ಮ ಸರ್ಕಾರಿ ಆಸ್ಪತ್ರೆಗೆ ೧೬ಕೋಟಿ ಎಲ್ಲಾ ಉಪಕರಣಗಳ ಬಗ್ಗೆ ಟೆಂಡರ್ ಬಗ್ಗೆ ತಡವಾಗಿದೆ ಈ ಬಗ್ಗೆ ಪರಿಶಿಲೆ ಮಾಡಬೇಕಾಗಿದ್ದು ಇದರೊಂದಿಗೆ ಹೊಯ್ಸಲಕಟ್ಟೆ ಭಾಗಕ್ಕೆ ಒಂದು ಪೊಲೀಸ್ ಠಾಣೆ ಮಾಡುವುದು ಸೇರಿದಂತೆ ಹುಳಿಯಾರು ಭಾಗದಲ್ಲಿ ಅಗ್ನಿ ಅವಘಡಗಳಿಂದ ತೊಂದರೆಯಾಗುತ್ತಿದ್ದು ಆ ಭಾಗಕ್ಕೆ ಒಂದು ಅಗ್ನಿಶಾಮಕ ಠಾಣೆ ಮಂಜೂರು ಮಾಡಬೆಕೆಂದು ಇದರೊಂದಿಗೆ ಆ ಇಲಾಕೆಗೆ ಹೊಸ ವಾಹನಗಳನ್ನು ವ್ಯವಸ್ಥೆ ಮಾಡಬೇಕು, ಎಂದ ಅವರು ಈ ಗಾಗಲೇ ಇಲಾಖೆವಾರು ಪ್ರತಿವಾರ ಕಳೆದ ೬೬ವಾರಗಳಿಂದ ಜನರಿಗೆ ಅನುಕೂಲವಾಗಲೆಂದು ಜನಸಂಪರ್ಕ ಸಭೆಯನ್ನು ಇದರೊಂದಿಗೆ ಮನೆಬಾಗಿಲಿಗೆ ಮನೆ ಮಗ ಎಂಬ ಕಾರ್ಯಕ್ರಮದೊಂದಿಗೆ ಗ್ರಾಮ ಗ್ರಾಮಗಳಿಗೆ ಬೇಟಿ ನೀಡಿ ಮನೆಮನೆಗಳಿಗೆ ಬೇಟಿ ನೀಡಲಾಗುತ್ತಿದೆ ಇದರೊಂದಿಗೆ ನಮ್ಮ ತಾಲ್ಲೂಕು ಎಸ್ ಎಸ್ ಎಲ್ ಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದು ನಮಗೆ ಹೆಮ್ಮೆಯಾಗಿದ್ದು ಪಟ್ಟಣದಲ್ಲಿರುವಂತಹ ಸಾರ್ವಜನಿಕ ಆಸ್ಪತ್ರೆಗಳಲ್ಲಿ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದು ಈ ಬಗ್ಗೆ ಗಮನಹರಿಸಬೇಕು ಎಂದು ಹಾಗೂ ತಾಲ್ಲೂಕಿನ ವಾಣಿಜ್ಯಬೆಳೆಯಾದ ತೆಂಗು ಬೆಳೆಗೆ ಬಿಳಿಹುಳರೋಗ, ಕೊರೆಯುವ ರೋಗದಂತಹ ಕೀಟಬಾದೆಯನ್ನು ತಪ್ಪಿಸಲು ಸೂಕ್ತ ಔಷಧಿ ಸಿಂಪಡನೆಗೆ ಕ್ರಮ ಕೈಗೊಂಡು ಸರ್ಕಾರದಿಂದ ಹಣ ಮಂಜೂರು ಮಾಡಿಸುವಂತೆ ತಿಳಿಸಿದ ಅವರು ತಾಲ್ಲೂಕಿನ ಅಭಿವೃದ್ದಿಗೆ ಆಗಬೇಕಾಗಿರುವಂತಹ ಕೆಲಸಗಳ ಬಗ್ಗೆ ಅಂಕಿ ಅಂಶಗಳನ್ನು ಸಚಿವರ ಗಮನಕ್ಕೆ ತಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಶುಭಕಲ್ಯಾಣ್, ಸಿಇಒ ಪ್ರಭು ಜಿ, ಅಪರ ಪೊಲೀಸ್ ಅಧೀಕ್ಷಕ ಗೋಪಾಲ್, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅದ್ಯಕ್ಷ ಚಂದ್ರಶೇಖರ್,ಕೆಡಿಪಿ ಸಭೆಯ ಸದಸ್ಯರುಗಳಾದ ದೇವರಾಜು, ರಾಮಚಂದ್ರಯ್ಯ, ದೇವರಾಜು, ಶೇಕ್ ಗೌಸ್, ಮಧು ಸೇರಿದಂತೆ ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಪುರಂದರ ಕೆ, ಇಒ ದೊಡ್ಡಸಿದ್ದಯ್ಯ, ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

(Visited 1 times, 1 visits today)