ಸಿರಾ: ಆರೋಪಿ ಹರೀಶ್ ರವರು ನೊಂದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಬಗ್ಗೆ ಶಿರಾ ಟೌನ್ ಪೊಲೀಸ್ ಠಾಣೆ ಮೋ. ನಂ ೪೩/೨೦೨೩ ಕಲಂ- ಇಲಂ:೩೭೬(೨)(ಟಿ) ಐಪಿಸಿ ಜೊತೆಗೆ ಕಲಂ-೬ Poಛಿso ಂಛಿಣ-೨೦೧೨ ಪ್ರಕರಣವನ್ನು, ಪ್ರಕಾಶ್.ಕೆ ಪೊಲೀಸ್ ಇನ್ಸ್ಪೆಕ್ಟರ್ ಶಿರಾ ನಗರ ಪೊಲೀಸ್ ಠಾಣೆಯ ರವರು ತನಿಖೆ ಕೈಗೊಂಡು ಪ್ರಕರಣದ ಆರೋಪಿಯಾದ ಹರೀಶ್.ಇ ಬಿನ್ ಈರಣ್ಣ, ೨೨ ವರ್ಷ, ಶಿರಾ ತಾಲ್ಲೂಕು ರವರನ್ನು ದಸ್ತಗಿರಿ ಮಾಡಿ ತನಿಖೆಯನ್ನು ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಪಟ್ಟಿಯನ್ನು ಸಲ್ಲಿಸಿರುತ್ತಾರೆ.
ಸದರಿ ಪ್ರಕರಣವು ತುಮಕೂರು ಜಿಲ್ಲಾ ಈಖಿSಅ-೧ ನ್ಯಾಯಾಲಯದಲ್ಲಿ ಸ್ಪೇಷಲ್ ಸಿ.ಸಿ ನಂಬರ್-೨೯೩/೨೦೨೩ ರಲ್ಲಿ ವಿಚಾರಣೆ ನಡೆದು ಆರೋಪಿ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ದಿನಾಂಕ-೦೮-೦೫-೨೦೨೫ ರಂದು ಪ್ರಕರಣದ ಆರೋಪಿ ಹರೀಶ್ ರವರಿಗೆ ೪೦ ವರ್ಷ ಜೈಲು ಶಿಕ್ಷೆ ಹಾಗೂ ೨ ಲಕ್ಷದ ೫೦ ರೂಪಾಯಿಗಳ ದಂಡ ವಿಧಿಸಿ ತೀರ್ಪು ನೀಡಿರುತ್ತದೆ. ಈ ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರು ಆಶಾ.ಕೆ.ಎಸ್ ರವರು ವಾದ ಮಂಡಿಸಿರುತ್ತಾರೆ. ಪ್ರಕರಣವು ಶಿಕ್ಷೆಯಾಗಲು ಶ್ರಮಿಸಿದ ಅಧಿಕಾರಿ ಹಾಗೂ ಸಿಬ್ಬಂದಿಯವರುಗಳಿಗೆ ಮಾನ್ಯ ತುಮಕೂರು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಶೋಕ್ ಕೆ.ವಿ, ಐ.ಪಿ.ಎಸ್ ರವರು ಶ್ಲಾಘಿಸಿರುತ್ತಾರೆ.

(Visited 1 times, 1 visits today)