ಚಿಕ್ಕನಾಯಕನಹಳ್ಳಿ: ನನ್ನ ವಿಧಾನ ಸಭಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ದಿ ಪಡಿಸುವುದರೊಂದಿಗೆ ಇಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣವನ್ನು ಪಡೆದು ಅವರ ಸ್ವಂತ ಜೀವನ ರೂಪಿಸಿಕೊಂಡರೆ ಅದೇ ನನಗೆ ಹಾಗೂ ಈ ಕ್ಷೇತ್ರಕ್ಕೆ ಮತ್ತು ಪೋಷಕರಿಗೆ ನೀಡುವ ಗೌರವ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದಲ್ಲಿ ಸೋಮವಾರ ಎಸ್.ಬಿ.ಚಾರಿಟಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಲಾಗಿದ್ದ ನಮ್ಮಗೆ ಪ್ರೇರಣೆ ನಮ್ಮ ಮೇಷ್ಟ್ರು ಎಂಬ ವಿಶೇಷ ಶಿರ್ಷಿಕೆಯಡಿಯಲ್ಲಿ ತಾಲ್ಲೂಕಿನ ೪೪ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿಯಲ್ಲಿ ೬೨೫ಕ್ಕೆ ೬೦೦ಕ್ಕು ಹೆಚ್ಚು ಅಧಿಕ ಅಂಕಗಳನ್ನು ಪಡೆದಿದ್ದು ಇವರ ಸಾಧನೆಗೆ ಪ್ರೇರಣಾದಾಯಿಗಳಾದ ಶಿಕ್ಷಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ತಾಲ್ಲೂಕಿನ ಎಲ್ಲಾ ಸರ್ಕಾರಿ, ಅನುದಾನಿತ,ಅನುದಾನರಹಿತ ಶಾಲೆಯ ಎಲ್ಲಾ ಶಿಕ್ಷಕರನ್ನೊಳಗೊಂಡ ಸಂಪನ್ಮೂಲ ವ್ಯಕ್ತಿಗಳೊಂದಿಗೆ ಬಿಇಒ ನೇತೃತ್ವದಲ್ಲಿ ಉತ್ತಮವಾದ ಪ್ರೇರಣಾ ಶಿಬಿರಗಳೊಂದಿಗೆ ಮಕ್ಕಳ ಹಾಗೂ ಪೋಷಕರೊಂದಿಗೆ ಉತ್ತಮ ಬಾಂದ್ಯವನ್ನು ಇಟ್ಟುಕೊಂಡು ಈ ಬಾರಿ ನಮ್ಮ ಕ್ಷೇತ್ರದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ೬೦೦ಕ್ಕು ಅಧಿಕ ಅಂಕಗಳನ್ನು ೪೪ವಿದ್ಯಾರ್ಥಿಗಳು ಪಡೆಯಲು ಕಾರಣವಾಗಿದೆ ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳ ಮನೆಗಳಿಗೆ ಹೋಗಿ ಅಭಿನಂದಿಸಿದ್ದು ಇದಕ್ಕೆ ಕಾರಣರಾದ ಶಿಕ್ಷಕರನ್ನು ಗೌರವಿಸಬೆಕಾಗಿರುವುದು ನಮ್ಮ ಜವಾಬ್ದಾರಿ ಎಂದು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಇದೇ ರೀತಿ ನಮ್ಮ ಟ್ರಸ್ಟ್ ವತಿಯಿಂದ ಸಿಇಟಿ ತರಬೇತಿಯನ್ನು ಹಮ್ಮಿಕೊಂಡಿದ್ದು ಈ ಬಾರಿ ಸರ್ಕಾರಿ ಕೋಟಾದಡಿ ವಿವಿಧ ಕೋರ್ಸ್ ಗಳಿಗೆ ಹೋಗುವಂತಹ ವಿದ್ಯಾರ್ಥಿಗಳಿಗ ಟ್ಯಾಬ್ ನ್ನು ನೀಡುವಂತಹ ಉದ್ದೇಶವನ್ನು ಹೊಂದಿದ್ದು ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಬೇಕಾಗಿದೆ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಒಬ್ಬ ವಿದ್ಯಾರ್ಥಿ ಉತ್ತಮವಾಗಿ ಶಿಕ್ಷಣವನ್ನು ಪಡೆದು ಪೋಷಕರಿಗೆ ಹೊರೆಯಾಗದ ರೀತಿಯಲ್ಲಿ ಜೀವನ ಕಟ್ಟಿಕೊಂಡರೆ ಅದೇ ನಮಗೆ ಸಂತೋಷ ಇದರಲ್ಲಿ ಯಾವುದೆ ರಾಜಕೀಯವಿಲ್ಲ ನಾವು ಯಾವುದೇ ಪಕ್ಷ ಜಾತಿ ಧರ್ಮ ಬಡವ ಶ್ರೀಮಂತ ಎಂಬ ಬೇದ ಭಾವ ಮಾಡದೆ ಈ ಕೆಲಸವನ್ನು ಮಾಡುತ್ತಿದ್ದು ಈ ಮೂಲಕ ಅಭಿವೃದ್ದಿ ಮಾಡುತ್ತಿದ್ದು ಇದರೊಂದಿಗೆ ಪ್ರತಿ ಸೋಮವಾರ ಇದೇ ಭವನದಲ್ಲಿ ಜನ ಸಂಪರ್ಕಸಭೆಯನ್ನು ನಡೆಸುತ್ತಿದ್ದು ಇಲ್ಲಿಗೆ ೬೬ವಾರಗಳು ಕಳೆದಿವೆ ಇದು ನಮ್ಮ ಹಾಗೂ ನಮ್ಮ ಕ್ಷೇತ್ರದ ಜನತೆಯ ಸಮಸ್ಯೆಗಳನ್ನು ಆಲಿಸಿ ಅವರಿಗೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸರಿಯಾದ ಪರಿಹಾರ ನೀಡುವುದಾಗಿದೆ ಇದರೊಂದಿಗೆ ಇನ್ನು ಮುಂದೆ ಹೆಜ್ಜೆ ಇಟ್ಟು ಮನೆಬಾಗಿಲಿಗೆ ಮನೆಮಗ ಎಂಬ ಕಾರ್ಯಕ್ರಮದಲ್ಲಿ ಪ್ರತಿ ಗ್ರಾಮಗಳನ್ನು ಬೇಟಿ ಮಾಡಿ ಅಲ್ಲಿನ ಜನರ ಕಷ್ಟ ಸಮಸ್ಯೆಗಳನ್ನು ಆಲಿಸಿ ಅದಕ್ಕೆ ಸ್ಪಂದಿಸುವAತಹ ಕಾರ್ಯವನ್ನು ಮಾಡುತ್ತಿದ್ದೇವೆ ಇದು ನಮ್ಮ ಕ್ಷೇತ್ರದ ಅಭಿವೃದ್ದಿಗಾಗಿ ಎಂದ ಅವರು ಯಾರೇ ಆಗಲಿ ಶಿಕ್ಷಣಕ್ಕೆ ಸಂಬAಧಿಸಿದAತೆ ಸಮಸ್ಯೆಗಳಾದಲ್ಲಿ ನಾನು ನಿಮ್ಮೊಂದಿಗಿರುತ್ತೆನೆ ಎಂದರು.
ಬಿಇಒ ಕಾಂತರಾಜು ಮಾತನಾಡಿ ರಾಜ್ಯದಲ್ಲೇ ಈ ರೀತಿಯ ಕಾರ್ಯಕ್ರಮ ಯಾರು ಮಾಡಿರಲು ಸಾದ್ಯವಿಲ್ಲ ಇದೊಂದು ವಿಶೇಷ ವಿನೂತನ ಕಾರ್ಯಕ್ರಮವಾಗಿದೆ ಶಾಸಕರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದು ಅವರ ಪ್ರೆರಣೆ ಹಾಗೂ ಅವರ ಪ್ರಶಂಸೆಯ ಮಾತುಗಳೇ ನಮಗೆ ಈ ಸಾಧನೆಗೆ ಕಾರಣವಾಗಿದೆ ಇದರೊಂದಿಗೆ ನನ್ನೊಂದಿಗೆ ತಾಲ್ಲೂಕಿನ ಎಲ್ಲಾ ಶಿಕ್ಷಕರು ಈ ಸಾಧನೆಗೆ ಕಾರಣವಾಗಿದ್ದಾರೆ ಅನೇಕ ಪ್ರೇರಣಾ ಶಿಬಿರಗಳು ಹಾಗೂ ಮನಸ್ಸಿನ ಹತೋಟಿಗಾಗಿ ವಿಶೇಷ ತರಬೇತಿಗಳನ್ನು ಏರ್ಪಡಿಸಿದ್ದು ಇದರೊಂದಿಗೆ ಯಾವುದೇ ಶಾಲೆಯಲ್ಲಿ ಯಾವುದೇ ಸಮಸ್ಯೆಗಳಾಗಲಿ ವಿದ್ಯಾರ್ಥಿಗಳಿಗೆ ತೊಂದರೆಯಾದರು ನಮ್ಮೊಂದಿಗೆ ಇದ್ದು ಶಾಸಕರು ನಮಗೆ ಉತ್ತೇಜನ ನೀಡಿದ್ದರು ಪ್ರತಿವರ್ಷ ಮಂಗಳೂರು, ಉಡುಪಿ ಜಿಲ್ಲೆಗಳೇ ಮೊದಲ ಸ್ಥಾನಗಳನ್ನು ಪಡೆಯುತ್ತಿವೆ ಕಾರಣಅಲ್ಲಿನ ಶಿಕ್ಷಕರು ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿನ ಬದ್ದತೆ ಹಾಗೂ ಬಾಂಧ್ಯವೇ ಕಾರಣ ನಮ್ಮಲ್ಲೂ ಆ ರೀತಿಯಲ್ಲಿ ಕೆಲಸ ಮಾಡಿದರೆ ನಮ್ಮ ತಾಲ್ಲೂಕು ಜಿಲ್ಲೆ ಪ್ರಥಮವಾಗಿರುವುದು ರಾಜ್ಯಕ್ಕೆ ಪ್ರಥಮಸ್ಥಾನ ಪಡೆಯುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದು ತಾಲ್ಲೂಕಿನಲ್ಲಿ ಹೆಚ್ಚು ೬೨೫ಕ್ಕೆ ೬೨೦ಅಂಕಗಳನ್ನು ಪಡೆದ ಮೇಲನಹಳ್ಳಿ ಮುರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿ ಧನುಷ್ ಎಸ್ ಮಾತನಾಡಿ ನಮಗೆ ನಮ್ಮ ಶಾಲೆಯ ಶಿಕ್ಷಕರು ಹಾಗೂ ಪ್ರೇರಣಾ ಶಿಬಿರಗಳೇ ನಮ್ಮ ಸಾಧನೆಗೆ ಕಾರಣವಾಗಿದೆ ಕೇವಲ ಶಾಲಾ ಅವಧಿಯಲ್ಲಿ ಮಾತ್ರವಲ್ಲದೇ ಉಳಿದ ಸಮಯದಲ್ಲೂ ನಮಗೆ ಹೆಚ್ಚು ಅಂಕಗಳನ್ನು ಪಡೆಯುವ ಬಗ್ಗೆ ಅದ್ಯಯನ ಮಾಡುವ ಬಗ್ಗೆ ತಿಳಿಸುತ್ತಿದ್ದರು ಅದ್ದರಿಂದ ನಮಗೆ ಈ ಸಾಧನೆ ಮಾಡಲು ಸಾದ್ಯವಾಯಿತು ಇದರೊಂದಿ ಶಾಸಕರೇ ಖುದ್ದು ನಮ್ಮ ಮನೆಗಳಿಗೆ ಬಂದು ನಮ್ಮನ್ನು ಅಭಿನಂದಿಸಿದ್ದು ನಮಗೆ ಹೆಚ್ಚು ಸಂತೋಷವಾಗಿದ್ದು ಮುಂದಿನ ವಿದ್ಯಾರ್ಥಿಗಳಿಗೆ ಇದು ಪ್ರೆರಣೆಯಾಗಿದ್ದು ಈ ಕಾರ್ಯಕ್ರಮ ಉತ್ತಮವಾಗಿದೆ ಎಂದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ಇದಕ್ಕೆ ಕಾರಣ ಶಿಕ್ಷಕರು ತಮ್ಮಅಭಿಪ್ರಾಯ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ಎಲ್ಲಾ ಶಿಕ್ಷಕರು ಅಧಿಕಾರಿಗಳು, ಜನಪ್ರತಿನಿಧಿಗಳು ಪಾಲ್ಗೊಂಡಿದ್ದರು.
ವಿದ್ಯಾರ್ಥಿಗಳ ಸಾಧನೆಗೆ ಕಾರಣರಾದ ಶಿಕ್ಷಕರಿಗೆ ವಿದ್ಯಾರ್ಥಿಗಳಿಂದಲೇ ಸನ್ಮಾನ ಮಾಡಿಸಿದ್ದು ಈ ಕಾರ್ಯಕ್ರಮದ ವಿಶೇಷವಾಗಿತ್ತು.

(Visited 1 times, 1 visits today)