filter: 0; fileterIntensity: 0.0; filterMask: 0; captureOrientation: 0;
algolist: 0;
multi-frame: 1;
brp_mask:8;
brp_del_th:0.0008,0.0000;
brp_del_sen:0.1000,0.0000;
motionR: 0;
delta:null;
bokeh:0;
module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (13, 0);aec_lux: 344.62494;aec_lux_index: 0;albedo: ;confidence: ;motionLevel: 0;weatherinfo: null;temperature: 43;

ತುಮಕೂರು: ಮೊದಲು ಮದ್ಯಪಾನ, ಧೂಮಪಾನ, ಇಂತವುಗಳನ್ನ ಬಿಡಿಸುವಂತಹ ಶಿಬಿರಗಳು ನಡೆಯುತ್ತಿದ್ದವು. ಇತ್ತೀಚೆಗೆ ಮೊಬೈ ಲ್ ಗೀಳಿನಿಂದ ಹೊರ ತರುವ ಶಿಬಿರಗಳು ಮುಂಬೈ, ಬೆಂಗಳೂರಿನಲ್ಲಿ ನಡೆಯುತ್ತಿವೆ. ಅಂತಹ ಶಿಬಿರಗಳಲ್ಲಿ ಮಕ್ಕಳು ಅದರಿಂದ ಗುಣವಾಗುತ್ತಾರೋ ಇಲ್ಲವೋ ತಿಳಿದಿಲ್ಲ ಆ ದರೆ ಇಂತಹ ಬಣ್ಣದ ಶಿಬಿರಗಳಲ್ಲಿ ಖಂಡಿತವಾಗಿ ಆ ಗೀಳಿನಿಂದ ಹೊರಗೆ ಬರುತ್ತಾರೆ. ಆದ್ದರಿಂದ ಈ ರೀತಿಯ ಶಿಬಿರಗಳ ಪ್ರಯೋಜನ ಪಡೆದುಕೊಂಡ ಪೋಷಕರೇ ಭಾಗ್ಯವಂತರು ಎಂದು ಕೇರಿಂಗ್ ವಿಥ್ ಕರ‍್ಸ್ ಸಂಸ್ಥಾಪಕರಾದ ಡಾ. ಪ್ರಸನ್ನ ಕುಮಾರ್ ಅಭಿಪ್ರಾಯಪಟ್ಟರು.
ಇವರು ತುಮಕೂರು ತಾಲ್ಲೂಕಿನ ಮೆಳೇಹ ಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಶನಿವಾ ರ ಸಂಜೆ ಡಮರುಗ ರಂಗ ತಂಡದ ಒಂದು ತಿಂಗಳ ಚಿಣ್ಣರ ಬಣ್ಣದ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ರಾಷ್ಟಿçÃಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಧುಸೂದನ್ ರಾವ್ ಮಾತನಾಡಿ, ಪುರಾ ಣವೊಂದರ ಎಳೆ ಇಟ್ಟುಕೊಂಡು ವರ್ತಮಾನದ ಸಮಸ್ಯೆಗಳನ್ನ ಮಕ್ಕಳಿಗೆ ಪರಿಚಯಿಸುತ್ತ, ಮಕ್ಕ ಳು ಸ್ಪಷ್ಟ, ನಿಖರ ಮತ್ತು ನಿರರ್ಗಳವಾಗಿ ಮಾತ ನಾಡುವಂತೆ ಮಾಡಲು ಶಾಲೆಯಲ್ಲಿ ಶಿಕ್ಷಕರು ವರ್ಷಾನುಗಟ್ಟಲೆ ಹೆಣಗುತ್ತೇವೆ. ಆದರೆ ಇಂತಹ ರಂಗ ಶಿಬಿರಗಳಲ್ಲಿ ಒಂದೇ ತಿಂಗಳಲ್ಲಿ ಅದು ಸಾಧ್ಯ ವಾಗುತ್ತದೆ, ಅಂತಹ ಒಂದು ರೀತಿಯ ಚಮತ್ಕಾರ ರಂಗ ಶಿಕ್ಷಣಕ್ಕಿದೆ ಎಂದರು.
ತರುವಾಯ, ಕಾಡಿನ ಗೆಳೆಯರಾದ ಅಳಿಲು, ಕರಡಿ, ಕೋತಿ, ಹದ್ದು, ಇವುಗಳ ಜೊತೆ ಬೆಳೆ ಯುವ ಲವ-ಕುಶರು ಆಳುವ ವರ್ಗಗಳ ಜೊತೆ ಸೇರಿ ಪ್ರಕೃತಿಯನ್ನು ನಾಶ ಮಾಡುತ್ತಿರುವ ಧನ ವಂತರ ಅಶ್ವಮೇಧದ ಕುದುರೆ ಕಟ್ಟಲು ನಿರ್ಧರಿಸುತ್ತಾರೆ. ಅವರ ಜೊತೆ ಪ್ರಾಣಿ-ಪಕ್ಷಿಗಳು, ಕಾಡು ಜನರು, ಅರಣ್ಯಕ್ಕಾಗಿ, ನದಿ, ಹಳ್ಳ, ಕೆರೆ ಗಾಗಿ, ಬೆಟ್ಟ-ಗುಡ್ಡಗಳಿಗಾಗಿ ಹೋರಾಡಲು ನಿರ್ಧರಿಸುತ್ತಾರೆ ಎಂಬ ಸಂದೇಶ ಸಾರುವ “ಲವ-ಕುಶ” ನಾಟಕವು ಮೆಳೇಹಳ್ಳಿ ದೇವರಾಜು ರವರ ರಚನೆ ಮತ್ತು ನಿರ್ದೇಶನದಲ್ಲಿ ಪ್ರಯೋ ಗಗೊಂಡಿತು. ನಾಟಕದಲ್ಲಿ ಐವತ್ತು ಮಕ್ಕಳು ಲವಲವಿಕೆಯಿಂದ ಅಭಿನಯಿಸಿದರು.

(Visited 1 times, 1 visits today)