ತುಮಕೂರು: ರಾಜ್ಯದ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಕೆಲಸ ಮಾಡುತ್ತಿರುವ ಬಿಸಿಯೂಟ ಅಕ್ಷರದಾಸೋಹ ನೌಕರರನ್ನು ಸ್ಕಿಂ ನೌಕರರೆಂದು ಪರಿಗಣಿಸದೆ ಸರಕಾರದ ಕಾರ್ಮಿಕರೆಂದು ಪರಿಗಣಿಸಬೇಕು.ಕನಿಷ್ಠ ವೇತನ ಜಾರಿ ಮಾಡಬೇಕೆಂದು ಒತ್ತಾಯಿಸಿ ಇಂದು ಸಂಸದ ವಿ.ಸೋಮಣ್ಣ ಅವರಿಗೆ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ವತಿಯಿಂದ ಮನವ ಸಲ್ಲಿಸಲಾಯಿತು.
ಎ.ಐ.ಟಿ.ಯು.ಸಿ ಸಂಯೋಜಿತ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಬಿಸಿಊಟ ತಯಾರಕರ ಫೆಡರೇಷನ್ ರಾಜ್ಯ ಸಮಿತಿಯ ಕರೆ ಮೇರೆಗೆ ತುಮಕೂರು ಜಿಲ್ಲೆಯ ಬಿಸಿಊಟ ತಯಾರಕರ ಸಂಘಟನೆಯಿ0ದ ಬಿಸಿ ಊಟ ತಯಾರಕರಿಗೆ ವೇತನ ಹೆಚ್ಚಿಸುವಂತೆ ಮತ್ತು ಇತರೆ ಸೌಲತ್ತುಗಳನ್ನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸಿದ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಎಐಟಿಯುಸಿಯ ಗಿರೀಶ್, ಕಳೆದ ೨೪ ವರ್ಷಗಳಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳ ಅನುದಾನದ ಅಡಿಯಲ್ಲಿ ಬಿಸಿಊಟ ತಯಾರಕರಿಗೆ ಗೌರವ ಅನುಪಾತದ ಸಂಭಾವನೆಯಾಗಿ ಕೇಂದ್ರ ಸರಕಾರ ರೂ.೬೦೦/- ಹಾಗೂ ರಾಜ್ಯ ಸರಕಾರ ರೂ.೪೦೦/-ಕೂಡುವುದು ಜಾರಿಯಲ್ಲಿದೆ ಎಂದರು.
ಬಿಸಿಯೂಟ ತಯಾರಕರನ್ನು ನೌಕರರೆಂದು ಪರಿಗಣಿಸುವ ಜೊತೆಗೆ, ಅವರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು,ಸೇವೆಯನ್ನು ಖಾಯಂಗೊಳಿಸಬೇಕು.ಒ0ದು ಶಾಲೆಯಲ್ಲಿ ೭೦ಕ್ಕಿಂತ ಹೆಚ್ಚು ಮಕ್ಕಳಿದ್ದಲ್ಲಿ ಅಡುಗೆಯವರ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸುವುದು,ನಿವೃತ್ತಿ ನಂತರ ಮಾಸಿಕ ೬ ಸಾವಿರ ಪಿಂಚಿಣಿ, ಅಪಘಾತಗಳಲ್ಲಿ ಮರಣ ಹೊಂದಿದರೆ ೧೦ ಲಕ್ಷ ರೂ ಪರಿಹಾರ ನೀಡಬೇಕೆಂಬುದು ಎಐಟಿಯುಸಿಯ ಒತ್ತಾಯವಾಗಿದೆ. ಸರಕಾರ ಈ ನಿಟ್ಟಿನಲ್ಲಿ ಸಕಾರಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ಸಹಕರಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ ಎಂದು ಗಿರೀಶ್ ನುಡಿದರು.
ಮುಖಂಡರಾದ ಕೆಂಬೇಗೌಡ ಮಾತನಾಡಿ,ಕಳೆದ ೨೪ ವರ್ಷಗಳಿಂದ ಸಂಘಟನೆ ನೇತೃತ್ವದಲ್ಲಿ ಗೌರವ ಸಂಭಾವನೆಯನ್ನು ಹೆಚ್ಚಿಸುವಂತೆ ಸರಕಾರಗಳಿಗೆ ಒತ್ತಾಯ, ಹೋರಾಟ, ಚಳುವಳಿ ಗಳನ್ನು ಮಾಡಿದ ಕಾರಣ, ಕರ್ನಾಟಕ ರಾಜ್ಯ ಸರಕಾರವು ಮಾತ್ರ ರೂ.೪೦೦ರ ಬದಲಿಗೆ ಹಂತ ಹಂತವಾಗಿ ಹೆಚ್ಚಳ ಮಾಡಿ ಈಗ ಹೆಚ್ಚುವರಿಯಾಗಿ ರೂ.೪೧೦೦/-ಕೊಡುತ್ತಿದೆ.ಕೇಂದ್ರ ಸರಕಾರ ಪ್ರಾರಂಭದ ಅನುಪಾತ ರೂ. ೬೦೦ ಮಾತ್ರ ಕೊಡುತ್ತಿದೆ. ಆದ್ದರಿಂದ ತಾವುಗಳು ಬರುವ ಚಳಿಗಾಲದ ಸಂಸತ್ ಅಧಿವೇಶನದಲ್ಲಿ ಸಂಸದರಾದ ತಾವು ಕೇಂದ್ರ ಸರಕಾರದ ಗಮನ ಸೆಳೆದು ಬಿಸಿಊಟ ತಯಾರಕ ಮಹಿಳೆಯರಿಗೆ ವೇತನ ಹೆಚ್ಚಿಸುವುದು ಸೇರಿದಂತೆ ಈ ಕೆಳಗಿನ ಸವಲತ್ತುಗಳನ್ನು ಕೊಡಿಸಿಕೊಡಲು ಮುಂದಾಗಬೇಕೆ0ದು ನಮ್ಮ ಮನವಿಯಾಗಿದೆ ಎಂದರು.
ನಿಯೋಗದಲ್ಲಿ ಬಿಸಿಯೂರ ನೌಕರರ ಫೆಡರೇಷನನ್ನ ಮಂಜುಳ, ಚಿಕ್ಕಮ್ಮ, ಮಂಗಳಮ್ಮ, ರುದ್ರಮ್ಮ, ಸರಸ್ವತಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

(Visited 1 times, 1 visits today)