ತುಮಕೂರು: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೂಲ ಮಂತ್ರ ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದು ಎಂದರೆ ನನಗೆ ಇನ್ನಿಲ್ಲದ ಪ್ರೀತಿ ಎಂದು ಹೇಳಿದ ಶಾಸಕರು ಅಭಿವೃದ್ಧಿ ವಿಚಾರದಲ್ಲಿ ಮತ್ತು ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳುವಂತಹ ಸ್ವಭಾವ ನನ್ನದಲ್ಲ. ಹಿಡಿದ ಕೆಲಸವನ್ನು ನಿಗದಿತ ಕಾಲ ಮಿತಿಯಲ್ಲಿ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳ್ಳುವವರೆಗೂ ಕೂಡ ಕಾಮಗಾರಿಯ ಹಿಂದೆ ಇರುತ್ತೇನೆ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ. ಸುರೇಶ್ ಗೌಡ ತಿಳಿಸಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಸಬಾ ಹೋಬಳಿ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದೂರು ಗ್ರಾಮದಲ್ಲಿ ಇಂದು ರೂ೧೨ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಜೆಪಿ ಶಾಸಕರಾದ ಬಿ. ಸುರೇಶ್ ಗೌಡ ಹಾಗೂ ಜ್ಯೋತಿಗಣೇಶ್ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ತುಮಕೂರು ಗ್ರಾಮಾಂತರ ಹಾಗೂ ನಗರ ವಿಧಾನಸಭಾ ಕ್ಷೇತ್ರಗಳನ್ನು ಸಂಪರ್ಕಿಸುವ ದೇವರಾಯಪಟ್ಟಣದಿಂದ ಮಾರನಾಯಕನಪಾಳ್ಯ ಮಾರ್ಗವಾಗಿ ಕುಂದೂರು, ಕುಂದೂರು ಕ್ರಾಸ್ ಗೆ ಸಂಪರ್ಕಿಸುವ ರಸ್ತೆಯನ್ನು ೧೦ ಕೋಟಿಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ಇದರಲ್ಲಿ ನಗರ ವಿಧಾನಸಭಾ ಕ್ಷೇತ್ರದ ರಸ್ತೆಯು ಸೇರ್ಪಡೆ ಆಗಿರುವುದರಿಂದ ನಗರ ಬಿಜೆಪಿ ಶಾಸಕ ಜ್ಯೋತಿ ಗಣೇಶ ಅವರು ಹಾಗೂ ನಾನು ಸೇರಿ ಇಬ್ಬರು ಒಟ್ಟಿಗೆ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಂಕಲ್ಪಿಸಿರುವುದಾಗಿ ಹೇಳಿದರು.
ಈ ರಸ್ತೆ ಅಭಿವೃದ್ಧಿಗಾಗಿ ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದಲೂ ಕೂಡ ಒಂದು ಕೋಟಿ ಅನುದಾನವನ್ನು ಒದಗಿಸಲಾಗಿದೆ ಎಂದು ಶಾಸಕ ಜ್ಯೋತಿ ಗಣೇಶ ಹೇಳಿದರು.
ಈ ಭಾಗದ ಬಹುದಿನಗಳ ಬೇಡಿಕೆಯಾಗಿರುವ ಕುಡಿಯುವ ನೀರು ಮತ್ತು ಕಸ ವಿಲೇವಾರಿ ಸೇರಿದಂತೆ ಯುಜಿಡಿ ಸಂಪರ್ಕ ಕಲ್ಪಿಸಿಕೊಡಲು ಅನೇಕ ದಿನಗಳಿಂದ ಜನರು ಮನವಿಗಳನ್ನು ನೀಡುತ್ತಿರುವುದು ನಮ್ಮ ಇಬ್ಬರ ಗಮನಕ್ಕೆ ಬಂದಿದೆ ಇದಕ್ಕೆ ಆದಷ್ಟು ಬೇಗ ಮುಕ್ತಿ ಕಲ್ಪಿಸಿ ಕೊಡುವುದಾಗಿ ಸುರೇಶ್ ಗೌಡ ಹೇಳಿದರು.
ಶಾಸಕ ಜ್ಯೋತಿ ಗಣೇಶ ಮತ್ತು ಸರ್ಕಾರದೊಡನೆ ಚರ್ಚಿಸಿ ಯುಜಿಡಿ ಸಂಪರ್ಕ ಕಲ್ಪಿಸಿ ಕೊಡುವುದಾಗಿ ಶಾಸಕ ಬಿ.ಸುರೇಶ್ ಗೌಡರು ಹೇಳಿದರು
ಜ್ಯೋತಿ ಗಣೇಶ್ ಅವರ ಸರಳ ಸಜ್ಜನಿಕೆಯ ಮತ್ತು ಅಭಿವೃದ್ಧಿ ವಿಚಾರದಲ್ಲಿ ದೂರದೃಷ್ಟಿಯುಳ್ಳ ನಾಯಕತ್ವದ ಬಗ್ಗೆ ಸುರೇಶ್ ಗೌಡರು ಕೊಂಡಾಡಿದರು.
ಕೇಂದ್ರದ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ೬೫ ಲಕ್ಷಗಳಲ್ಲಿ ಬೆಳಗುಂಬ ಗ್ರಾಮದ ಪ್ರತಿ ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸುವ ಕಾಮಗಾರಿಗೂ ಚಾಲನೆ ನೀಡಿದರು.
ಈಗಾಗಲೇ ಅನೇಕ ಗ್ರಾಮಗಳಲ್ಲಿ ರಸ್ತೆಗಳನ್ನು ಅಭಿವೃದ್ಧಿಪಡಿಸಿ ರುವುದರಿಂದ ಜಲಜೀವನ್ ಮಿಷನ್ ಯೋಜನೆ ಅಡಿಯಲ್ಲಿ ಪೈಪ್ ಲೈನ್ ಹಾಕುವಾಗ ರಸ್ತೆಗೆ ತೊಂದರೆಯಾಗದAತೆ ಡ್ಯಾಮೇಜ್ ಮಾಡದಂತೆ ಪೈಪ್ ಲೈನ್ ತೆಗೆದುಕೊಂಡು ಹೋಗಲು ಶಾಸಕರು ಸೂಚಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂ ಅಧ್ಯಕ್ಷರಾದ ಶ್ರೀಮತಿ ಮಂಗಳಮ್ಮ ಚೌಡಪ್ಪ,ಉಪಾಧ್ಯಕ್ಷರಾದ ನರಸಿಂಹರಾಜು ಮಾಜಿ ಉಪ ಮೇಯರ್ ಮಂಡಿ ಮೂರ್ತಿ, ಜಹಾಂಗೀರ್ ರವಿ ಮಾಜಿ ಉಪಾಧ್ಯಕ್ಷ ಹಾಲಿ ಸದಸ್ಯರಾದ ರಾಮಚಂದ್ರಪ್ಪ,ಮರಿಯಣ್ಣ ಚಿಕ್ಕರಂಗಯ್ಯಬ್ರೆಡ್ ರಾಜಣ್ಣ, ಮಲ್ಲೇಶಣ್ಣ,ಸುರೇಶ್,ರಾಜು, ತಿಮ್ಮರಾಯಪ್ಪ, ಲೋಕೇಶ್, ಭರತ್,ಸ್ವಾಮಿ, ರಂಗಾಧಾಮಯ್ಯ ನಾಗರಾಜು.ಶಶಾಂಕ್, ಕಾರ್ಯಪಾಲಕ ಅಭಿಯಂತರರಾದ ಹರೀಶ್ ಎಇಇ ಅಪ್ಪಣ್ಣ ರವಿ ಸೇರಿದಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರು ಮಾಜಿ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು.

(Visited 1 times, 1 visits today)