
ಕುಣಿಗಲ್: ಹುಲಿಯೂರುದುರ್ಗ ಅರಣ್ಯ ಇಲಾಖೆಯ ಅಧಿಕಾರಿಗಳು ರೈತರ ಜಮೀನುಗಳಿಂದ ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮವನ್ನು ಖಂಡಿಸಿ ನೂರಾರು ರೈತರು ಮಹಿಳೆಯರು ಪ್ರತಿಭಟನೆ ಧರಣಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಹುಲಿಯೂರುದುರ್ಗ ಅರಣ್ಯ ಕಚೇರಿಯ ಮುಂಭಾಗ ನೂರಾರು ಮಹಿಳೆಯರು ರೈತ ಮುಖಂಡರು ಸೇರಿದಂತೆ ವಿವಿಧ ಪಕ್ಷ ಗಳು ಮತ್ತು ಸಂಘಟನೆಗಳ ಬೆಂಬಲದೊ0ದಿಗೆ ಅರಣ್ಯಾಧಿಕಾರಿಗಳ ಮತ್ತು ಕಂದಾಯ ಇಲಾಖೆಯವರ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾಧ್ಯಕ್ಷ ಬಿ.ಆರ್. ಯೋಗೇಶ್ (ಕರಿಗೌಡ) ನೇತೃತ್ವದಲ್ಲಿ ಪ್ರತಿಭಟನೆ ಧರಣಿ ನಡೆಸಿ
ಮಾತನಾಡುತ್ತ ಕಳೆದ ೬೦ ವರ್ಷಗಳಿಂದ ರೈತರು ತಾಲೂಕಿನ ಕಾಚಿಹಳ್ಳಿ ,ಎಲೆಕಡುಕುಲು, ಕೆ. ಬ್ಯಾಡರಹಳ್ಳಿ ೭೮ ಎಕರೆ ಸೌತ್ ಎಕ್ಸ್ಟೆಂಶನ್ ಎಂದು ಗುರುತಿಸಿದ್ದು ಕೆ ಹೆಚ್ ಹಳ್ಳಿ ೩೪ ಎಕರೆ, ರಾಜ್ಯ ಅರಣ್ಯ ಎಂದು ಗುರುತಿಸಲ್ಪಟ್ಟಿದ್ದು ಕಾಡುಬೋರನಹಳ್ಳಿ,ಹಿತ್ತಲಪುರ, ಉಜ್ಜಿನಿ ಸೇರಿದಂತೆ ತಾಲೂಕಿನ ಹಲವಾರು ಪ್ರದೇಶದಲ್ಲಿ ಈಗಾಗಲೇ ೬೦ ರಿಂದ ೭೦ ವರ್ಷಗಳಿಂದ ಈ ಪ್ರದೇಶಗಳಲ್ಲಿ ಜಮೀನುಗಳನ್ನ ಉಳಿಮೆ ಮಾಡಿಕೊಂಡು ಮನೆ ಕಟ್ಟಿ ತೋಟ ಮಾಡಿಕೊಂಡು ಜೀವನ ನಡೆಸುತ್ತಿರುವಾಗ ಈ ಎಲ್ಲ ಜಮೀನುಗಳಿಗೆ ಸರ್ಕಾರದ ನಿಯಮ ದಂತೆ ಖಾತೆ ಪಹಣಿ ಉಳುಮೆ ಚೀಟಿ ತಾಲೂಕು ಭೂ ಮುಂಜೂರಾತಿ ಸಮಿತಿಯಿಂದ ಕಾನೂನು ಬದ್ಧವಾಗಿ ಜಮೀನುಗಳನ್ನು ಮಂಜೂರು ಮಾಡಿಕೊಟ್ಟಿದ್ದು ಅಲ್ಲದೆ ಅರಣ್ಯ ಇಲಾಖೆಯವರು ಸಹ ಹಲವು ವರ್ಷಗಳಿಂದೆ ಈಗಾಗಲೇ ಗಡಿ ಭಾಗವನ್ನು ಗುರ್ತಿಸಿದ್ದರು, ಆದರೆ ಪುನಹ ಈಗ ರೈತರು ಉಳುಮೆ ಮಾಡುತ್ತಿರುವ ಪ್ರದೇಶಗಳಿಗೆ ಗಡಿ ಗುರುತು ಮಾಡಲು ಮುಂದಾಗಿರುವ ಅರಣ್ಯ ಇಲಾಖೆಯ ಕ್ರಮ ಖಂಡನೀಯ ಹೀಗಾದರೆ ರೈತರು ಎರಡು ಮೂರು ತಲೆಗಳಿಂದ ಹುಳುಮೆ ಮಾಡಿಕೊಂಡು ಬಂದವರು ಎಲ್ಲಿ ಹೋಗಬೇಕು ಎಂದು ಕಿಡಿಕಾರಿದ ಅವರು ಈ ಭಾಗದ ರೈತರಿಗೆ ಯಾವುದೇ ಕಾರಣಕ್ಕೂ ಅನ್ಯಾಯವಾಗಲು ಬಿಡುವುದಿಲ್ಲ ಕಂದಾಯ ಇಲಾಖೆಯ ಅರಣ್ಯ ಇಲಾಖೆಯವರು ಸಮರ್ಪಕವಾಗಿ ತನಿಖೆ ನಡೆಸಲಿ ಇಲ್ಲವಾದರೆ ರಾಜ್ಯ ಸರ್ಕಾರವೇ ಎಸ್‌ಐಟಿ ರಚನೆ ಮಾಡಿ ಅಮಾಯಕ ರೈತರಿಗೆ ಸರಿಯಾದ ನ್ಯಾಯ ನೀಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು ಯಾವುದೇ ಕಾರಣಕ್ಕೂ ರೈತರನ್ನ ಜಮೀನುಗಳಿಂದ ಒಕ್ಕಲಿಬ್ಬರಿಸಲು ಬಿಡುವುದಿಲ್ಲ ಎಂದು ತಿಳಿಸಿದರು
ರೈತ ಮುಖಂಡರು ಜಿಲ್ಲಾ ಅಮ್ಮಾದ್ಮಿ ಪಕ್ಷದ ಅಧ್ಯಕ್ಷ ಹೆಚ್. ಎಂ. ಜಯರಾಮಯ್ಯ ತಲೆ ತಲೆಮಾರುಗಳಿಂದ ಭೂಮಿಯನ್ನು ನಂಬಿಕೊ0ಡು ಜೀವನ ಸಾಗಿಸುತ್ತಾ ಬಂದಿರುವ ರೈತರಿಗೆ ಏಕಾಏಕಿ ಭೂಮಿ ಕೈತಪ್ಪಿ ಹೋಗುತ್ತದೆ ಎಂಬ ವಿಚಾರದಿಂದ ರೈತಪಿ ಜನರು ಕಂಗಾಲಾಗಿದ್ದಾರೆ ಸರ್ಕಾರ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಯಾವುದೇ ರೀತಿಯ ಅನ್ಯಾಯವಾಗದಂತೆ ರೈತರಿಗೆ ನ್ಯಾಯ ನೀಡುವ ಮೂಲಕ ಅವರ ಭೂಮಿಯನ್ನು ರಕ್ಷಿಸಿ ಕೊಡಬೇಕೆಂದು ಆಗ್ರಹಿಸಿದರು.
ರಾಜ್ಯ ಕೆಆರ್ ಎಸ್ ಪಕ್ಷದ ರಘು ಜಾಣಗೆರೆ ಬಡ ರೈತರ ಭೂಮಿಯನ್ನು ಸಮರ್ಪಕವಾಗಿ ಹದ್ದುಬಸ್ತು ಮಾಡಿ ಕೊಡುವ ಬದಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯನ್ನು ಬಳಸಿಕೊಂಡು ಸರ್ಕಾರ ಭೂಮಿ ಕಬಳಿಸಲು ನೋಡುತ್ತಿರುವುದು ಬಹಳ ಅನ್ಯಾಯ ರೈತರ ಭೂಮಿಯನ್ನು ಯಾವುದೇ ಕಾರಣಕ್ಕೂ ಕಬಳಿಸುವ ಕೆಲಸವಾಗಬಾರದು ಸೂಕ್ತ ನ್ಯಾಯ ನೀಡಬೇಕೆಂದು ಒತ್ತಾಯಿಸಿದರು.
ತಹಸೀಲ್ದಾರ್ ಯು. ರಶ್ಮಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ರೈತರನ್ನು ಕುರಿತು ಮಾತನಾಡುತ್ತಾ ಅರಣ್ಯ ಇಲಾಖೆ ಸರ್ಕಾರದ ಆದೇಶದಂತೆ ಸೂಕ್ತ ಕ್ರಮಕ್ಕೆ ಮುಂದಾಗಿದೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಸೇರಿದಂತೆ ಜಂಟಿ ಸರ್ವೆ ಕಾರ್ಯಾಚರಣೆ ಮೂಲಕ ರೈತಪಿ ಜನರಿಗೆ ಯಾವುದೇ ರೀತಿಯ ಅನಾನುಕೂಲವಾಗದಂತೆ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ರೈತರಲ್ಲಿ ಯಾವುದೇ ಆತಂಕ ಬೇಡ ಕಾನೂನು ರೀತಿಯಲ್ಲಿ ರೈತರಿಗೆ ಅನ್ಯಾಯವಾಗಿದ್ದರೆ ಸರಿಪಡಿಸೋಣ ಯಾವುದೇ ಕಾರಣಕ್ಕೂ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲು ಸಾಧ್ಯವಿಲ್ಲ ಈ ಬಗ್ಗೆ ಕೂಲಂಕುಶವಾಗಿ ರೈತರ ಸಮ್ಮುಖದಲ್ಲಿಯೇ ಸಮರ್ಪಕ ಸರ್ವೆ ಕಾರ್ಯ ನಡೆಸುವ ಮೂಲಕ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಜಿಲ್ಲಾ ಅರಣ್ಯ ಉಪ ಸಂರಕ್ಷಣಾಧಿಕಾರಿ ಪವಿತ್ರ ಮಾತನಾಡುತ್ತಾ ರೈತರು ತಮ್ಮ ಸಮಸ್ಯೆಗಳ ಬಗ್ಗೆ ಇಲಾಖೆ ಗಮನ ಹರಿಸಿದ್ದಾರೆ ಸೂಕ್ತ ಕ್ರಮವನ್ನು ಮುಂದಿನ ದಿನಗಳಲ್ಲಿ ತೆಗೆದುಕೊಂಡು ರೈತರ ಸಮಸ್ಯೆ ಏನೆಂಬುದನ್ನು ಸರ್ಕಾರಕ್ಕೆ ಮಾಹಿತಿ ನೀಡುವ ಮೂಲಕ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಮನವಿ ಮಾಡಿಕೊಂಡರು ರೈತರು ಪ್ರತಿಭಟನೆಯನ್ನು ಕೈ ಬಿಟ್ಟರು. ಪಿಎಸ್‌ಐ ಪ್ರಶಾಂತ್, ವಲಯ ಅರಣ್ಯ ಅಧಿಕಾರಿಗಳಾದ ಜಗದೀಶ್, ನಮನೀತಾ ರೈತ ಮುಖಂಡರಾದ ಹುಲಿಯೂರ ದುರ್ಗಾ ನಟರಾಜ್, ಶಿವಲಿಂಗಯ್ಯ , ದಲಿತ ಹಕ್ಕುಗಳ ಸಮಿತಿ ರಾಜುವೆಂಕಟಪ್ಪ, ಪುಟ್ಟೇಗೌಡ, ಜಯರಾಜ್ ಸೇರಿದಂತೆ ರೈತರು ಮಹಿಳೆಯರು ಭಾಗವಹಿಸಿದ್ದರು.



