ತುಮಕೂರು: ನಗರದ ಶ್ರೀ ಸಿದ್ಧಾರ್ಥ ಪ್ರ ಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ‘ಪ್ಲೇಸ್ಮೆಂಟ್ ಸೆಲ್ ಮತ್ತು ಇಂಟರ್ನಲ್ ಕ್ವಾಲಿಟಿ ಅಸೂರೆನ್ಸ್ ಸೆಲ್’ (ಐಕ್ಯೂಎಸಿ) ವತಿಯಿಂದ “ಮಾಸ್ಟರಿಂಗ್ ದ ಆರ್ಟ್ ಆಫ್ ರೆಸುಮ” ಕಾರ್ಯಗಾರವನ್ನು ಹಮ್ಮಿ ಕೊಳ್ಳಲಾಗಿತ್ತು.
ಸಸಿಗೆ ನೀರೆರೆಯುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಕಾರ್ಯಗಾರದ ಅತಿಥಿ ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಕುಮುದಿನಿ, ಹಂತ ಹಂತವಾಗಿ ರೆಸು ಮ್ ತಯಾರಿ ಬಗ್ಗೆ ಹಾಗೂ
ಜಾಬ್ ಇಂಟರ್ವ್ಯೂಲ್ಲಿ ಯಾವ ರೀತಿ ಪ್ರಶ್ನೆ ಕೇಳುತ್ತಾರೆ ಹಾಗೂ ಯಾವ ರೀತಿ ಉತ್ತರಿಸಬೇ ಕೆಂದು, ಹೀಗೆ ರೆಸುಮ ತಯಾರಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಹೇಮಲತ ಪಿ ಅಧ್ಯಕ್ಷತೆ ವಹಿಸಿ ಮುಂದಿನ ದಿನಗಳಲ್ಲಿ ಕಾಲೇಜಿನಲ್ಲಿ ಕ್ಯಾಂಪಸ್ ಡ್ರೈವ್ ಹಮ್ಮಿಕೊಳ್ಳಲಾಗುತ್ತೆ ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ರೆಸುಮ್ ತಯಾರಿ ಅತಿ ಮುಖ್ಯವಾದ ಅಂಶ ಎಲ್ಲಾ ವಿದ್ಯಾರ್ಥಿಗಳು ಈ ಕಾರ್ಯಗಾರವನ್ನು ಸಂಪೂರ್ಣವಾಗಿ ಅಳವ ಡಿಸಿಕೊಂಡು ಮುಂದಿನ ದಿನಗಳಲ್ಲಿ ನಿಮ್ಮ ಭವಿ ಷ್ಯವನ್ನು ರೂಪಿಸಿಕೊಳ್ಳಲು ಯಶಸ್ವಿಯಾಗಲಿ ಎಂದು ಹೇಳಿದರು.
ಕಾರ್ಯಗಾರದಲ್ಲಿ ವಿದ್ಯಾರ್ಥಿಗಳು ಕಾರ್ಯಗಾ ರದ ಮೆಚ್ಚುಗೆಯಿಂದ ಧನಾತ್ಮಕ ಅಭಿಪ್ರಾಯಗಳನ್ನು ತಿಳಿಸಿದರು.
ಕಾರ್ಯಗಾರ ಕಾರ್ಯಕ್ರಮದಲ್ಲಿ ಐಕ್ಯೂಎಸಿ ಕೋ ಆರ್ಡಿನೆಟ್ ಆದ ಸೈಯದ್ ಬಾಬು ಹೆಚ್.ಬಿ, ಬಿಕಾಂ ವಿಭಾಗದ ಮುಖ್ಯಸ್ಥರಾದ ವಿನಯ್ ಕುಮಾರ್ ಎಂ, ಕನ್ನಡ ವಿಭಾಗದ ಮುಖ್ಯಸ್ಥರಾದ ರಮೇಶ್ ಮಣ್ಣೆ, ಉಪನ್ಯಾಸಕರುಗಳಾದ ವಿನೋದ್ ಕೆ, ಶಿಲ್ಪಶ್ರೀ ಜಿ.ಸಿ, ನಾಗಲಕ್ಷ್ಮಿ, ಹಾಗೂ ಎಲ್ಲಾ ವಿಭಾಗದ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಜೊತೆಗೆ ಎಲ್ಲಾ ವಿಭಾಗದ ತೃತೀಯ ವರ್ಷದ ವಿದ್ಯಾರ್ಥಿಗಳು (ಃಂ,Bsಛಿ,BಅA,Bಛಿom,ಒಛಿom) ಭಾಗಿಯಾಗಿದ್ದರು.
(Visited 1 times, 1 visits today)