ತುಮಕೂರು: ಸರಕಾರಿ ಶಾಲೆಗಳನ್ನು ಗುಣಮಟ್ಟದ ಶಿಕ್ಷಣದ ಜೊತೆಗೆ ಮೂಲಭೂತ ಸೌಕರ್ಯಗಳು ಮಕ್ಕಳಿಗೆ ದೊರೆಯುವಂತೆ ಮಾಡಿ, ಸರಕಾರಿ ಶಾಲೆಗಳನ್ನು ಉಳಿಸುವ ಗುರುತರಜವಾಬ್ದಾರಿ ಶಿಕ್ಷಕರು, ಪೋಷಕರು, ಹಳೆಯ ವಿದ್ಯಾರ್ಥಿಗಳ ಸಂಘ ಮತ್ತು ಎಸ್.ಡಿ.ಎಂ.ಸಿ ಸದಸ್ಯರುಗಳ ಮೇಲಿದೆ ಎಂದು ಬಿಇಓ ಹನುಮಂತಪ್ಪ ತಿಳಿಸಿದ್ದಾರೆ.
ನಗರದಉತ್ತರಬಡಾವಣೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಆಯೋಜಿಸಿದ್ದ “ನಮ್ಮ ಶಾಲೆ, ನಮ್ಮಜವಾಬ್ದಾರಿ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದಅವರು,ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯತ್ತದೆ ಎಂಬ ನಂಬಿಕೆಯನ್ನು ಮಕ್ಕಳ ಪೋಷಕರಲ್ಲಿಉಂಟು ಮಾಡಿದರೆ, ತಾನಾಗಿಯೇ ಮಕ್ಕಳ ಸಂಖ್ಯೆ ಹೆಚ್ಚಳವಾಗಲಿದೆ.ಈ ನಿಟ್ಟಿನಲ್ಲಿ ಶಿಕ್ಷಕರು,ಎಸ್.ಡಿ.ಎಂಸಿ ಸದಸ್ಯರು ಮತ್ತುಇಲಾಖೆಯಜವಾಬ್ದಾರಿಯೂಇದೆಎಂದರು.
ಸರಕಾರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಬೇಕೆಂಬ ಉದ್ದೇಶದಿಂದಉಚಿತವಾಗಿ ಪುಸ್ತಕ,ಬಿಸಿಯೂಟ, ಕ್ಷೀರಭಾಗ್ಯ,ಷೂ ಭಾಗ್ಯ ನೀಡುತ್ತಿದೆ.ಅಲ್ಲದೆ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಮಕ್ಕಳಲ್ಲಿ ಅಪೌಷ್ಟಿಕತೆಯನ್ನು ನಿವಾರಿಸಲುಚಿಕ್ಕಿ, ಬಾಳೆ ಹಣ್ಣು ಮತ್ತು ಮೊಟ್ಟೆಯನ್ನು ನೀಡುತ್ತಿದೆ.ನಾನು ಕೂಡ ಶಾಲೆಯಲ್ಲಿಕೊಡುತ್ತಿದ್ದಗೋಧಿ ನುಚ್ಚಿನಉಪ್ಪಿಟ್ಟುತಿಂದುಕಲಿತವ. ಮಕ್ಕಳ ಬೌದ್ದಿಕ ಮತ್ತು ಶಾಲೆಯ ಭೌತಿಕ ಬೆಳವಣಿಗೆ ಸರಕಾರಎಲ್ಲಾರೀತಿಯ ಸಹಾಯ ಮತ್ತು ಸಹಕಾರ ನೀಡುತ್ತಾ ಬಂದಿದೆ.ಉತ್ತರ ಬಡಾವಣೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯನ್ನುಅಜಾಜ್ ಸಂಸ್ಥೆ ದತ್ತು ಪಡೆದುಅಭಿವೃದ್ದಿ ಪಡಿಸುತಿದ್ದು,ಮುಂದಿನ ಒಂದೆರಡು ವರ್ಷಗಳಲ್ಲಿ ಇಡೀ ಶಾಲೆಯಚಿತ್ರಣವೇ ಬದಲಾಗಲಿದೆ. ಹಾಗಾಗಿ ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹದಿಂದ ಹೊರಬಂದು ಸರಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಂತೆ ಪ್ರೇರೆಪಿಸಬೇಕು. ಹಾಗೆಯೇ ಎಸ್.ಡಿ.ಎಂ.ಸಿಅಧ್ಯಕ್ಷರು, ಪದಾಧಿಕಾರಿಗಳು ತಮ್ಮ ಮಕ್ಕಳನ್ನು ಸರಕಾರಿ ಶಾಲೆಗಳಿಗೆ ಸೇರಿಸಿ, ಇತರರಿಗೆ ಮಾದರಿಯಾಗಬೇಕೆಂದು ಬಿಇಓ ಹನುಮಂತಪ್ಪ ಸಲಹೆ ನೀಡಿದರು.
ಸರಕಾರಿ ಶಾಲೆಗಳ ಬೌದ್ದಿಕ ಮತ್ತು ಬೌತಿಕ ಬೆಳವಣಿಗೆಗೆ ಸರಕಾರೇತರ ಸಂಸ್ಥೆಗಳು ಕೈಜೋಡಿಸುವಂತೆ ಮಾಡುವಗುರುತರಜವಾಬ್ದಾರಿ ಪೋಷಕರು ಮತ್ತು ಎಸ್.ಡಿ.ಎಂ.ಸಿಯ ಮೇಲಿದೆ.ಅಲ್ಲದೆ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರುಗಳು ತಮ್ಮ ಸುತ್ತಮುತ್ತಇರುವಕಾರ್ಪೋರೇಟ್ ಕಂಪನಿಗಳಿಗೆ ಪ್ರಾಸ್ತಾವನೆ ಸಲ್ಲಿಸಿ, ಸಹಾಯ ನೀಡುವಂತೆ ಮಾಡಬೇಕಿದೆ.ಇಲಾಖೆ ಬಹಳ ದೂರದೃಷ್ಟಿಇಟ್ಟುಕೊಂಡು ಈ ಯೋಜನೆಯನ್ನುಜಾರಿಗೆತಂದಿದೆ.ಇದುಒAದು ಶಾಲೆಯಅಭಿವೃದ್ದಿಗೆ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಅವರನ್ನು ಒಳಗೊಳ್ಳುವಂತೆ ಮಾಡುವ ಪ್ರಕ್ರಿಯೆಯಾಗಿದೆ.ಶಿಕ್ಷರ ಜವಾಬ್ದಾರಿಯಜೊತೆಗೆ, ಪೋಷಕರಅಸಡ್ಡೆತನವನ್ನು ಹೋಗಲಾಡಿಸಲುಇರುವ ಮಾರ್ಗವಾಗಿದೆಎಂದು ಬಿಇಓ ಹನುಮಂತಪ್ಪ ನುಡಿದರು.
ಮಹಾನಗರಪಾಲಿಕೆ ಮಾಜಿಕೌನ್ಸಿಲರ್ ಮಂಜುನಾಥ್ ಮಾತನಾಡಿ,ಒಂದು ಶಾಲೆಯ ಬೆಳವಣಿಗೆಗೆ ಎಲ್ಲರ ಪಾತ್ರವೂ ಮುಖ್ಯ.೨೦೧೮ರಿಂದಲೂ ಈ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯನಾಗಿಕಾರ್ಯನಿರ್ವಹಿಸುತ್ತಾ, ಶಾಲೆಯ ಬೌತಿಕ ಬೆಳವಣಿಗೆಗೆ ಹಲವು ಸಹಕಾರ ನೀಡಿದ್ದೇವೆ.ಸರಕಾರಕೂಡ ಶಾಲೆಯಲ್ಲಿರುವ ಶಿಕ್ಷಕರ ಕೊರತೆಯನ್ನು ನೀಗಿಸಬೇಕು.ಗುಣಮಟ್ಟದ ಶಿಕ್ಷಣದ ಭರವಸೆಯನ್ನು ಶಿಕ್ಷಕರು ಮೂಡಿಸಬೇಕಿದೆ.ವಿದ್ಯೆಯಜೊತೆಗೆ ಮಕ್ಕಳಿಗೆ ಮಾನವೀಯ ಗುಣಗಳನ್ನು ಕಲಿಸಬೇಕಿದೆಎಂದು ಸಲಹೆ ನೀಡಿದರು.
ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ, ಉತ್ತರ ಬಡಾವಣೆಯ ಪದವಿಧರ ಮುಖ್ಯ ಶಿಕ್ಷಕ ಡಿ.ಶಿವಸ್ವಾಮಿ ಮಾತನಾಡಿ,ಈ ಕಳೆದ ಮೂರು ವರ್ಷಗಳಿಂದ ನಮ್ಮ ಶಾಲೆಯಲ್ಲಿ ದಾನಿಗಳ ಸಹಕಾರದಿಂದಅAಗ್ಲಮಾಧ್ಯಮದಲ್ಲಿಎಲ್.ಕೆ.ಜಿ., ಯುಕೆಜಿ ನಡೆಸುತ್ತಿದ್ದು, ಈ ವರ್ಷದಿಂದಇಲಾಖೆವತಿಯಿAದಎಲ್.ಕೆ.ಜಿ. ಮಂಜೂರಾಗುವ ಸಾಧ್ಯತೆಇದೆ.ಇದರಜೊತೆಗೆ ಶಿಕ್ಷಕರ ಕೊರತೆಇದೆ. ಈ ಎರಡು ವಿಚಾರವಾಗಿ ಸೋಮವಾರಡಿಡಿಪಿಐಅವರಿಗೆ ಮನವಿ ಸಲ್ಲಿಸುವ ಕೆಲಸವನ್ನು ಮಾಡಲಾಗುವುದು.ನಮ್ಮ ಶಾಲೆಯಲ್ಲಿ ಪ್ರಸ್ತುತಒಂದರಿAದ ೮ನೇ ತರಗತಿಯವರೆಗೆಕನ್ನಡ ಮತ್ತುಇಂಗ್ಲಿಷ್ ಮಾಧ್ಯಮದಲ್ಲಿ ೪೬೫ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಇವುಗಳ ಸಂಖ್ಯೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾದ್ಯತೆಇದ್ದು,ಹೆಚ್ಚುವರಿ ಮಕ್ಕಳಿಗೆ ಅಗತ್ಯವಿರುವಕೊಠಡಿ ಮತ್ತಿತರ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರುಗಳ ಸಹಕಾರದಿಂದಅಗತ್ಯಕ್ರಮ ಕೈಗೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿಅಕ್ಷರದಾಸೋಹ ಸಹಾಯಕ ನಿರ್ದೇಶಕಗಂಗಾಧರ್, ಅಕ್ಷರದಾಸೋಹಅಧಿಕಾರಿ ಸುಧಾಕರ್, ಎಸ್.ಡಿ.ಎಂ.ಸಿ ಅಧ್ಯಕ್ಷರಾದಓಬಯ್ಯ, ಉಪಾಧ್ಯಕ್ಷರಾದಜಭೀನಾಭಾನು, ಹಳೆಯ ವಿದ್ಯಾರ್ಥಿಗಳ ಸಂಘದಅಧ್ಯಕ್ಷ ಪ್ರಸನ್ನಕುಮಾರ್,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದತಾಲೂಕುಅಧ್ಯಕ್ಷತಿಮ್ಮೇಗೌಡ, ಎಸ್.ಡಿ.ಎಂ.ಸಿ ಸದಸ್ಯರುಗಳು,ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಪೋಷಕರುಗಳು ಭಾಗವಹಿಸಿದ್ದರು.