ತುರುವೇಕೆರೆ: ಕಾಶ್ಮೀರದಲ್ಲಿನ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರರು ಮತ್ತು ಅವರಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಮೇಲೆ ಭಾರತ  ಸಿಂಧೂರ್ ಆಫರೇಷ್ ನಡೆಸಿ ಯಶಸ್ವಿಯಾಗಿವ ಕಾರಣ  ಇದರ ಕ್ರೆಡಿಟ್ ಅನ್ನು  ಪ್ರಧಾನಿಯವರಿಗೆ ನೀಡದೆ ಸೈನಿಕರಿಗೆ ನೀಡಬೇಕು  ಎನ್ನುವ  ಮುಖ್ಯ ಮಂತ್ರಿಗಳ  ನಿಲುವು ಖಂಡನೀಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಸಂಜೆ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಯುದ್ದದ ಮೂಲಕ ಭಾರತ ಪಾಕಿಸ್ತಾನದ ತಪ್ಪನ್ನು ಮನವರಿಕೆ ಮಾಡಿಕೊಟ್ಟಿದೆ. ಜೊತೆಗೆ ಪಾಕಿಸ್ತಾನದ ಪ್ರಧಾನಿಯವರು ಯುದ್ದವನ್ನು ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿದ ಕಾರಣ ಪ್ರಧಾನಿ ನೇಂದ್ರ ಮೋದಿಯವರು ತಾತ್ಕಾಲಿಕವಾಗಿ ಕದನ ವಿರಾಮ ಘೋಷಣೆ  ಮಾಡಿದ್ದರೂ ಸಹ ಸಂಪೂರ್ಣವಾಗಿ ಯುದ್ದ ನಿಂತಿಲ್ಲ. ಭಾರತೀಯ ಸೈನಿಕರು ಉಗ್ರರನ್ನು ಹುಡುಕಿ ಸದೆಬಡಿದಿದ್ದಾರೆ. ಆದರೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಿಂಧೂರ್ ಆಫರೇಷ್  ಗೆಲುವಿನ ಕ್ರೆಡಿಟ್ ಅನ್ನು ಯಾರಿಗೂ ನೀಡದೆ  ಹೋರಾಡಿದ ಸೈನಿಕರಿಗೆ ನೀಡಬೇಕು ಎನ್ನುತ್ತಾರೆ ಇದನ್ನೂ ಒಪ್ಪೊಣ. ಆದರೆ  ಶತ್ರುಗಳೊಂದಿಗೆ ಯುದ್ದ ನಡೆಸುವ ಮಹತ್ವದ ತೀರ್ಮಾನ  ತೆಗೆದುಕೊಳ್ಳುವುದು ಪ್ರಧಾನ  ನರೇಂದ್ರ ಮೋದಿ ಮತ್ತು ಅವರ ಸಂಸತ್  ಸದಸ್ಯರು. ಇವರಿಗೆ ಈ ಯುದ್ದದ ಗೆಲುವಿನ ಕ್ರೆಡಿಟ್ ಕೊಡಬೇಕು.   ರಾಜ್ಯದ ಮುಖ್ಯ ಮಂತ್ರಿಯವರು  ಕೇಂದ್ರ ಸರ್ಕಾರದ  ಏಳಿಗೆ ಸಹಿಸದೆ ವಿಷಕಾರುತ್ತಿದ್ದಾರೆಂದು ದೂರಿದರು.
ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ  ತಂದಿದೆ.  ಪ್ರತಿದಿನ  ಈ ಬಗ್ಗೆ ಜಾಹೀರಾತು ಕೂಡ ನೀಡುತ್ತಿದ್ದಾರೆ. ರಾಜ್ಯದ ತೆರಿಗೆದಾರರ ಹಣದಿಂದಲೇ  ಈ ಯೋಜನೆಗಳು ನಡೆಯುತ್ತಿವೆ  ಹೊರೆತು  ಮುಖ್ಯ ಮಂತ್ರಿಗಳ ಹಣದಿಂದಾಗಲಿ ಅಥವಾ ಕಾಂಗ್ರೆಸ್ ಪಕ್ಷದ ಫಂಡ್ ನಿಂದ  ನಡೆಯುತ್ತಿಲ್ಲ.  ಹೀಗಿರುವಾಗ ಗ್ಯಾರಂಟಿಗಳ ಯಶಸ್ಸಿನ ಕೊಡುಗೆಯನ್ನು ರಾಜ್ಯದ ತೆರಿಗೆದಾರರಿಗೆ ನೀಡಬೇಕೆ ವಿನಃ ಸಿದ್ದರಾಮಯ್ಯನವರಿಗಲ್ಲ ವೆಂದು ಪ್ರಶ್ನಿಸಿದರು?.
ಕೂಡಲೇ  ಇಂತಹ ಅಪಪ್ರಚಾರಗಳನ್ನು ರಾಜ್ಯ ಸರ್ಕಾರ ನಿಲ್ಲಿಸಬೇಕು ಎಂದು ಒತ್ತಾಯಿಸಿದ ಅವರು ಈ ಸರ್ಕಾರ ಅನುದಾನ ನೀಡದ ಕಾರಣ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಸಿದ್ದರಾಮಯ್ಯನವರ ಚರ್ಮ ದಪ್ಪನಾಗಿದೆ. ಏನೇ ಭೈದರೂ ಅವರಿಗೆ ಅರ್ಥವಾಗೋದಿಲ್ಲ.  ಜನರ ತೆರಿಗೆ ಹಣವನ್ನು ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುವ ಮೂಲಕ ಹಣ ದುರುಪಯೋಗವಾಗುತ್ತಿದೆಂದು  ಆರೋಪಿಸಿದರು.
ಮೇ೨೦ರಂದು ಹೊಸಪೇಟೆಯಲ್ಲಿ ನಡೆಯುವ ಸಮರ್ಪಣೆ ಸಂಕಪಲ್ಪ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಗಳನ್ನು ಸರ್ಕಾರ ಹಿಡಿತಕ್ಕೆ ತೆಗೆದುಕೊಂಡು ಸರ್ಕಾರದ ಹಣದಲ್ಲಿ ಜನರಿಗೆ ತಲಾ ೨೫೦ ರೂಪಾಯಿಗಳ ಹಣ ಕೊಟ್ಟು ಕರೆದುಕೊಂಡು ಹೋಗುತ್ತಿರುವುದು ನಾಚಿಕೆಗೇಡಿನ ಸಂಗತಿ. ಒಟ್ಟಾರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಿವಾಳಿಯಾಗಿದೆಂದು ಲೇವಡಿಗೈದರು.
ಪಟ್ಟಣದ ಪಿಎಲ್.ಡಿ ಬ್ಯಾಂಕ್ ನ ಚುನಾವಣೆ ಸಮೀಪಿಸುತ್ತಿರುವ  ಬೆನ್ನಲ್ಲೇ  ಸದಸ್ಯರಿಗೆ ಸ್ಪಷ್ಟ ಕಾರಣ ನೀಡದೇ ಸುಮಾರು ೮೨೦೦ ಮತದಾರರುಗಳನ್ನು ವಜಾಮಾಡಿದ್ದು. ಇದು ಕಾನೂನು ಬಾಹಿರವಾಗಿದ್ದು ಈ ಬಗ್ಗೆ  ಡಿಸ್ಟಿಕ್ ರಿಜಿಸ್ಟಾರ್ ಆಫ್ ಕೋ ಆಫರೇಟೀವ್ ಸೊಸೈಟಿ ಅಧಿಕಾರಿಗಳಿಗೆ ಪತ್ರ ಬರೆದು,  ಸಮಗ್ರ ತನಿಖೆ ಮಾಡಿ ವಜಾ ಆಗಿರುವ ಮತದಾರರಿಗೆ ನ್ಯಾಯ ಒದಗಿಸಿಕೊಡುವಂತೆ ಒತ್ತಾಯಿಸುವುದಾಗಿ ಹೇಳಿದರು.
ಸುದ್ದಿ ಗೋಷ್ಠಿಯಲ್ಲಿ ಮುಖಂಡರುಗಳಾದ   ಮಂಗಿಕುಪ್ಪೆ ಬಸವರಾಜು, ರಾಮಡಿಹಳ್ಳಿ ದೇವರಾಜು  ಇದ್ದರು.
(Visited 1 times, 1 visits today)