ತುಮಕೂರು: ಸಂಗೀತ, ನೃತ್ಯ, ನಾಟಕಗಳಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಮನುಷ್ಯನ ಮನಸ್ಸು, ಕೆಟ್ಟ ವಿಚಾರಗಳತ್ತ ಹೊರಳದಂತೆ ತಡೆಯುತ್ತವೆ. ಇಂತಹ ಅಭ್ಯಾಸಗಳಿಂದ ಯುವಜನರು ದುಶ್ಚಟಗಳ ದಾಸರಾಗುವುದು ತಪ್ಪುತ್ತದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದ್ದಾರೆ.
ನಗರದ ಕನ್ನಡ ಭವನದಲ್ಲಿ ಕಲಾಕಾರ್ ಇವೆಂಟ್ಸ್ ಅವರ ಆಯೋಜಿಸಿದ್ದ ರಾಜ್ಯಮಟ್ಟದ ಸ್ವರ ಶೃಂಗಾರ ಕರೋಕೆ ಗೀತಗಾಯನ ಮತ್ತು ಸ್ವರ ಶೃಂಗಾರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಸ್ವರ ಶೃಂಗಾರ ಸಂಸ್ಥೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡುತಿದ್ದ ಅವರು,ಮಾದಕ ವ್ಯಸನಗಳಿಗೆ ಬಲಿಯಾಗಿ ಯುವಜನರು ತಮ್ಮ ಜೀವನವನ್ನೇ ಕಳೆದುಕೊಳ್ಳುತ್ತಿದ್ದಾರೆ.ಶಾಲಾ, ಕಾಲೇಜುಗಳ ಯುವಜನರು ಸಂಗೀತ, ಸಾಹಿತ್ಯದಂತಹ ಸಾಂಸ್ಕೃತಿಕ ಕಲೆಗಳನ್ನು ತಮ್ಮಲ್ಲಿ ರೂಢಿಸಿಕೊಂಡರೆ ವ್ಯಸನ ಮುಕ್ತ ಜೀವನ ನಡೆಸಲು ದಾರಿಯಾಗುತ್ತದೆ. ಹಾಗಾಗಿ ಕಲಾಕಾರ್ ಈವೆಂಟ್ಸ್ ಇಂತಹ ಕಾರ್ಯಕ್ರಮಗಳನ್ನು ಹದಿಹರೆಯದ ಯುವಜನರು ಕಲಿಯುವ ಕಾಲೇಜುಗಳಲ್ಲಿ ಏರ್ಪಡಿಸಿ, ಅವರಲ್ಲಿರುವ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡಿದರೆ, ಹೊಸ ಪ್ರತಿಭೆಗಳ ಉದಯದ ಜೊತೆಗೆ, ಸಾಮಾಜಿಕ ಸಮಸ್ಯೆಯಾಗಿರುವ ದುಶ್ಚಟಗಳಿಂದ ದೂರ ಇಡಲು ಸಹಕಾರಿಯಾಗಲಿದೆ ಎಂದರು.
ಸAಗೀತಕ್ಕೆ ಎಲ್ಲರನ್ನು ಸೆಳೆಯುವ ಮಾಂತ್ರಿಕ ಶಕ್ತಿ ಇದೆ.ಹಾಗಾಗಿ ಶಿಕ್ಷಣ ಇಲಾಖೆಯ ಜೊತೆಗೆ ಸೇರಿ, ಶಾಲಾ ಕಾಲೇಜುಗಳಲ್ಲಿ ಕನಿಷ್ಠ ತಿಂಗಳಿಗೆ ಒಂದು ಇಂತಹ ಕಾರ್ಯಕ್ರಮ ನೀಡಿ,ಆಸಕ್ತ ವಿದ್ಯಾರ್ಥಿಗಳಿಗೆ ಹಾಡಲು, ನುಡಿಸಲು ಅವಕಾಶ ಒದಗಿಸಿದರೆ ಮಕ್ಕಳಲ್ಲಿ ಇರುವ ಏಕಾಗ್ರತೆಯ ಕೊರತೆಯನ್ನು ನೀಗಿಸಬಹುದಾಗಿದೆ.ಅಲ್ಲದೆ ಮಕ್ಕಳಲ್ಲಿ ಆತ್ಮಸ್ಥೆöÊರ್ಯ ತುಂಬಲು ಸಹಕಾರಿಯಾಗಲಿದೆ.ಬೆಂಗಳೂರು ನಗರದಲ್ಲಿ ಡಾ.ವಿಷ್ಣುವರ್ಧನ್ ಅವರು ಪ್ರಾರಂಭಿಸಿದ ಸ್ನೇಹಲೋಕ ಕರೋಕೆ ಟೀಂ ಪ್ರತಿ ವಾರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ನೀಡುತ್ತಾ ಬಂದಿದೆ. ನೀವು ಕೂಡ ನಿರಂತರ ಕಾರ್ಯಕ್ರಮ ನೀಡಿದರೆ ಸರಕಾರದ ಧನ ಸಹಾಯ ಪಡೆಯಲು ಸಹಕಾರಿಯಾಗಲಿದೆ ಎಂದು ಮುರುಳೀಧರ ಹಾಲಪ್ಪ ನುಡಿದರು.
ತುಮುಲ್ ನಿರ್ದೇಶಕ ಎಸ್,ಆರ್.ಗೌಡ ಮಾತನಾಡಿ,ಕಲಾಕಾರ್ ಅವರ ನಮ್ಮ ತಾಲೂಕಿನವರು. ಕಲೆಗೆ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಕಲಾವಿದರ ಜೊತೆ ಸಮಯ ಕಳೆಯುತ್ತಾ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ, ತಾವು ಬೆಳೆಯುತ್ತಾ, ಕಲಾವಿದರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.ಅವರ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರವಿದೆ ಎಂದರು.
ಡಿವೈಎಸ್ಪಿ ಮಹೇಶ್ ಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚಲಪತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜೂನಿಯರ್ ವಿಷ್ಣುವರ್ಧನ್ ಎಂದು ಖ್ಯಾತರಾದ ಜಯಶ್ರೀರಾಜ್ ಹಾಗೂ ವಿವಿಧೆಡೆಗಳಿಂದ ಆಗಮಿಸಿದ್ದ ಸುಮಾರು ೪೦ಕ್ಕೂ ಹೆಚ್ಚು ಕಲಾವಿದರು ಗೀತಗಾಯನ ನಡೆಸಿಕೊಟ್ಟರು.
(Visited 1 times, 1 visits today)