ಚಿಕ್ಕನಾಯಕನಹಳ್ಳಿ: ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸುಮಾರು ೧೫ಕೋಟಿ ೩೦ಲಕ್ಷ ವೆಚ್ಚದ ಕಾಮಗಾರಿಗಳಿಗೆ ಶಾಸಕ ಸಿ.ಬಿ.ಸುರೇಶ್ ಬಾಬು ಗುದ್ದಲಿ ಪೂಜೆ ನೆರೆವೆರಿಸಿದರು.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ವಿವಿಧ ಕಡೆಗಳಲ್ಲಿ ಸಿಸಿ ರಸ್ತೆ ಹಾಗೂ ಚೆಕ್ ಡ್ಯಾಂ ಕಾಮಗಾರಿಗೆ ಗುದ್ದಲಿ ಪೂಜೆ ನೆರೆವೆರಿಸಿ ಮಾತನಾಡಿದ ಅವರು ಹರಿಯುವ ನೀರನ್ನು ನಿಲ್ಲುವಂತೆಯು ನಿಲ್ಲುವಂತಹ ನೀರನ್ನು ಹಿಂಗುವAತೆ ಮಾಡುವ ಮೂಲಕ ಅಂತರ್ಜಲದ ಮರುಪೂರಣಕ್ಕಾಗಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಲಾಗುತ್ತದೆ ಈಗಾಗಲೇ ತಾಲ್ಲೂಕಿನ ಹಲವಾರು ಹಳ್ಳಗಳ ಕಡೆಗಳಲ್ಲಿ ಚೆಕ್ ಡ್ಯಾಂ ಗಳನ್ನು ನಿರ್ಮಿಸಿ ಸಾಕಷ್ಟು ನೀರು ಪೋಲಾಗಿ ಹರಿಯುವುದನ್ನು ನಿಲ್ಲಿಸುವಂತಹ ಕೆಲಸ ಮಾಡಲಾಗುತ್ತಿದೆ ನನ್ನ ಈ ಹಿಂದಿನ ಅವಧಿಯಲ್ಲಿ ತೀರ್ಥಪುರ ಯರೇಕಟ್ಟೆ ವಜ್ರದಬಳಿ ಒಂದು ಕೋಟಿ ವೆಚ್ಚದಲ್ಲಿ ಚೆಕ್ ಡ್ಯಾಂ ನಿರ್ಮಿಸಲಾಗಿತ್ತು ಅದೇ ರೀತಿ ಈ ಬಾರಿ ಒಂದು ಕೋಟಿ ವೆಚ್ಚದಲ್ಲಿ ಅಕ್ಕನಹಳ್ಳಿ ಚೆಕ್ ಡ್ಯಾಂ ನಿರ್ಮಿಸಲು ಗುದ್ದಲಿ ಪೂಜೆ ನೆರೆವರೆರಿಸಿದ್ದು ಇದರ ಮೂಲಕ ನೀರು ಹರಿಯುವದಲ್ಲಿ ನಿಲ್ಲಿಸಿ ಅಂತರ್ಜಲ ಹೆಚ್ಚುವಂತೆ ಇದುಅನುಕೂಲವಾಗಲಿದೆ ಇದೇ ರೀತಿ ಗಣಿಬಾದಿತ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಈಗಾಗಲೇ ಬಿಡುಗಡೆಯಾಗಿರುವಂತಹ ೧೨೦೦ಕೋಟಿ ಯಲ್ಲಿ ಈ ಭಾಗದಲ್ಲಿ ದೊಡ್ಡರಾಂಪುರ ಗ್ರಾಮದಿಂದ ಚಿಕ್ಕರಾಂಪುರ, ಚಿಕ್ಕರಾಂಪುರ ಗೊಲ್ಲಹಟ್ಟಿಯವರಿಗೆ ೯೩೮ಲಕ್ಷದಲ್ಲಿ ಸಿಸಿ ರಸ್ತೆ ಮಾಡುವ ಮೂಲಕ ನಮ್ಮ ಗಡಿಭಾಗದ ರಸ್ತೆಯನ್ನು ಅಭಿವೃದ್ದಿ ಪಡಿಸಲಾಗುತ್ತಿದೆ ಅದೇ ರೀತಿ ತಾಲ್ಲೂಕಿನ ಪ್ರವಾಸಿ ತಾಣ ಹಾಗೂ ತೀರ್ಥಕ್ಷೇತ್ರವಾದ ಯರೇಕಟ್ಟೆ ಶ್ರೀ ತೀರ್ಥರಾಮೇಶ್ವರ ವಜ್ರಕ್ಷೇತ್ರದಲ್ಲಿ ೫ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆಯನ್ನು ಮಾಡಲಾಗುತ್ತದೆ ಇದನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಹಾಗೂ ಕಾಮಗಾರಿಯ ವೇಳೆ ಗಮನಹರಿಸಿ ಗುಣಮಟ್ಟದಲ್ಲಿರುವಂತೆ ನೋಡಿಕೊಳ್ಳುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ಲೋಕೊಪಯೋಗಿ ಇಲಾಖೆಯ ಇಂಜಿನಿಯರ್ ಮನೋಹರ್ ಬಿ.ಜಿ ಮಾತನಾಡಿ ಗಣಿ ಬಾದಿತ ಪ್ರದೇಶಾಭಿವೃದ್ದಿಅನುದಾನದಲ್ಲಿ ದೊಡ್ಡರಾಂಪುರ ದಿಂದ ಚಿಕ್ಕರಾಂಪುರ , ಚಿಕ್ಕರಾಂಪುರ ಗೊಲ್ಲರಹಟ್ಟಿಯ ವರೆಗೆ ೯ಕೋಟಿ ೩೦ಲಕ್ಷ ವೆಚ್ಚದಲ್ಲಿ ೫.೫ಮೀಟರ್ ಅಗಲ ಹಾಗೂ ೪.೨ಕಿ.ಮೀ. ಉದ್ದ ಸಿಸಿ ರಸ್ತೆ ನಿರ್ಮಾಣಮಾಡಲಾಗುತ್ತಿದ್ದು ಇದು ಗ್ರಾಮಗಳ ಬಾಗದಲ್ಲಿಸಿಸಿ ಚರಂಡಿಗಳನ್ನೊಳಗೊAಡಿರುತ್ತದೆ ಅದೇ ರೀತಿ ತೀರ್ಥಪುರ ಗ್ರಾಮದಿಂದ ವಜ್ರದವರೆಗೆ ಯರೇಕಟ್ಟೆ ಮಾರ್ಗವಾಗಿ ೫ಕೋಟಿ ವೆಚ್ಚದಲ್ಲಿ ೩.೭೫ಮೀಟರ್ ಅಗಲ ಹಾಗೂ ೩.೨ಕಿ.ಮೀ ಉದ್ದ ಸಿಸಿ ರಸ್ತೆಯನ್ನು ನಿರ್ಮಿಸಲಾಗುತ್ತಿದ್ದು ಇದರಲ್ಲೂ ಸಹ ಗ್ರಾಮಗಳ ಭಾಗಳಲ್ಲಿ ಸಿಸಿ ಚರಂಡಿಗಳನ್ನು ನಿರ್ಮಿಸಲಾಗುವುದು ರಸ್ತೆ ಹಾಗೂ ಚರಂಡಿ ಗಳನ್ನು ನಿರ್ಮಿಸುವವೇಳೆ ಸಾರ್ವಜನಿಕರು ಸಹಕಾರ ನೀಡಿ ಗುಣಮಟ್ಟದ ಕಾಮಗಾರಿಗೆ ಅನುಕೂಲಮಾಡಿಕೊಡುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತೀರ್ಥಪುರ ಗ್ರಾ.ಪಂ.ಅಧ್ಯಕ್ಷ ಕಲ್ಪನಾ, ಉಪಾದ್ಯಕ್ಷ ಲತಾ, ಸದಸ್ಯರಾದ ಚಂದ್ರಶೇಖರ್, ರಾಮನಹಳ್ಳಿ ಆರ್.ಕುಮಾರ್, ಮಾಜಿ ಅಧ್ಯಕ್ಷ ದೊಡ್ಡರಂಗಯ್ಯ, ಮೋಹನ್ ಕುಮಾರ್, ವಿಎಸ್ ಎಸ್ ಎನ್ ಅಧ್ಯಕ್ಷ ಪ್ರಸನ್ನಕುಮಾರ್, ಸದಸ್ಯ ವೇಧಮೂರ್ತಿ ಸೇರಿದಂತೆ ಇತರರು ಇದ್ದರು.

(Visited 1 times, 1 visits today)