ಚಿಕ್ಕನಾಯಕನಹಳ್ಳಿ: ಪರಿಶಿಷ್ಟ ಜಾತಿಯ ಬಡವರ್ಗದವರಿಗೆ ನೀಡುವಂತಹ ಗಂಗಕಲ್ಯಾಣ ಯೋಜನೆಯ ಗುರಿಯನ್ನು ಸರ್ಕಾರ ಹೆಚ್ಚಿಸುವ ಮೂಲಕಅವರಿಗೆ ಆರ್ಥಿಕ ವಾಗಿ ಅನುಕೂಲ ಮಾಡಿಕೊಡಬೇಕಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತಾಲ್ಲೂಕು ಕ್ರೀಡಾಂಗಣದ ಆವರ ಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮದವತಿಯಿಂದ ಪಲಾನುಭವಿ ಗಳಿಗೆ ಪಂಪುಮೋಟ್ ವಿತರಣೆ ಮಾಡಿ ಮಾತನಾಡಿದ ಅವರು ಅರ್ಜಿಸಲ್ಲಿಸಿದ ಎಲ್ಲರಿಗೂ ಇದರಲ್ಲಿ ಸೌಲಭ್ಯಗಳು ಸಿಗುತ್ತಿಲ್ಲ ಕಾರಣ ಸರ್ಕಾರ ಇಂತಿಷ್ಟು ಎಂದು ಗುರಿಪಡಿಸಿದ್ದು ಅಷ್ಟು ಮಾತ್ರ ಬರುತ್ತಿವೆ ಅದರಲ್ಲೂ ಆರ್ಥಿಕವಾಗಿ ಹಿಂದುಳಿದಿರುವವರನ್ನು ಗುರುತಿ ಅವರಿಗೆ ಈ ಸೌಲಭ್ಯವನ್ನು ನೀಡಲಾಗುತ್ತಿದ್ದು ಇದರ ಮೂಲಕ ಅವರು ಸೌಲಭ್ಯ ಸದ್ಬಳಕೆ ಮಾಡಿಕೊಂಡು ತಮ್ಮ ಭೂಮಿಯನ್ನು ಉತ್ತಮ ನೀರಾವರಿಯ ಮೂಲಕ ಆರ್ಥಿಕವಾಗಿ ಸಬಲರಾಗಬೇಕಾಗಿದೆ ಇಂದು ೧೫ಜನ ಪಲಾನುಭವಿಗಳಿಗೆ ಒಟ್ಟು ೨೭ಲಕ್ಷದ ೬೦ಸಾವಿರ ವೆಚ್ವದ ಪಂಪು ಮೋಟಾರ್ ವಿತರಣೆ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭಧಲ್ಲಿ ತಹಸೀಲ್ದಾರ್ ಪುರಂದರ ಕೆ, ಅಂಬೇಡ್ಕರ್ ಅಭಿವೃದ್ದಿ ನಿಗಮದ ತಾಲ್ಲೂಕು ಅಭಿವೃದ್ದಿ ಅಧಿಕಾರಿ ಮಹೇಂದ್ರ ಸೇರಿದಂತೆ ಮಾಜಿ ಜಿ.ಪಂ.ಸದಸ್ಯ ರಾಮಚಂದ್ರಯ್ಯ ಹಾಗೂ ಇತರರು ಇದ್ದರು.

(Visited 1 times, 1 visits today)