ತುಮಕೂರು: ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಜೆಜೆಎಂ(ಜಲಜೀವನ್ ಮಿಷನ್) ಯೋಜನೆಯಲ್ಲಿ ಮೊದಲ ಮತ್ತು ಎರಡನೇ ಹಂತದ ಕಾಮಗಾರಿಗಳನ್ನು ಮುಂದಿನ ಮೂರು ತಿಂಗಳ ಒಳಗೆ ಪೂರ್ಣಗೊಳಿಸಿ, ಜನರಿಗೆ ಕುಡಿಯುವ ನೀರು ಕೊಡದಿದ್ದರೆ, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈಮರ್ಲ್ಯ ಇಲಾಖೆಯ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆಯುವುದಾಗಿ ಶಾಸಕ ಸುರೇಶಗೌಡ ಎಚ್ಚರಿಕೆ ನೀಡಿದ್ದಾರೆ.
ನಗರದ ತಾ.ಪಂ.ಸಭಾAಗಣದಲ್ಲಿAದು ಆಯೋಜಿಸಿದ್ದ ತ್ರೆöÊಮಾಸಿಕ ಕರ್ನಾಟಕ ಅಭಿವೃದ್ದಿಯೋಜನೆ)ಕೆಡಿಪಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡುತಿದ್ದ ಅವರು,ಮೊದಲನೇ ಹಂತದಲ್ಲಿ ೬ ಹಾಗೂ ಎರಡನೇ ಹಂತದಲ್ಲಿ ೯ ವರ್ಕ್ಗಳು ಇಂದಿಗೂ ಆರಂಭವಾಗಿಲ್ಲ.ಯೋಜನೆ ಪ್ರಾರಂಭವಾಗಿ ಐದು ವರ್ಷ ಕಳೆದರೂ ಪ್ರತಿ ಮನೆಗೆ ನಲ್ಲಿ ನೀರು ಎಂಬ ಸರಕಾರದ ಘೋಷಣೆಯಂತೆ ನೀರು ನೀಡಲು ಸಾಧ್ಯವಾಗಿಲ್ಲ.ಹೀಗಾದರೆ ಸರಕಾರದ ಮೇಲೆ ಜನರಿಗೆ ವಿಶ್ವಾಸ ಬರುವುದಾದರೂ ಹೇಗೆ ಎಂದು ಪ್ರಶ್ನಿಸಿದ ಶಾಸಕರು,ಮೊದಲ ಮತ್ತು ಎರಡನೇ ಹಂತದ ಬಾಕಿ ಇರುವ ಕಾಮಗಾರಿಗಳನ್ನು ಮುಂದಿನ ಕೆಡಿಪಿ ಸಭೆಯೊಳಗೆ ಮುಗಿಸಿ, ಪಂಚಾಯಿತಿಗಳಿಗೆ ವಹಿಸಬೇಕು.ಅಲ್ಲದೆ ಮೂರನೇ ಹಂತದಲ್ಲಿ ಪ್ರಗತಿಯಲ್ಲಿರುವ ೧೧೯ ಕಾಮಗಾರಿಗಳಲ್ಲಿ ಶೇ೫೦ರಷ್ಟನ್ನು ಪೂರ್ಣಗೊಳಿಸಬೇಕು.ಅಲ್ಲದೆ ನಾಲ್ಕನೇ ಹಂತದ ಕಾಮಗಾರಿಗಳನ್ನು ಸಹ ಮುಂದಿನ ಕೆಡಿಪಿ ಸಭೆಯೊಳಗೆ ಪೂರ್ಣಗೊಳಿಸದಿದ್ದರೆ, ನೊಟೀಷ್ ನೀಡಿ ಸರಕಾರಕ್ಕೆ ಶಿಫಾರಸ್ಸು ಮಾಡುವುದು ಅನಿವಾರ್ಯ ಎಂದರು.
ಸಭೆಗೆ ಉತ್ತರ ನೀಡಿದ ಎಇಇ ಕೃಷ್ಣಕಾಂತ್, ಕ್ಷೇತ್ರದ ೪೪೬ ಜೆಜೆಎಂ ಕಾಮಗಾರಿಗಳಲ್ಲಿ ೪೧೫ ಪ್ರಾರಂಭಗೊAಡಿದ್ದು, ಇವುಗಳಲ್ಲಿ ೨೧೬ ಪೂರ್ಣಗೊಂಡಿವೆ.೧೬೩ ಪ್ರಗತಿಯಲ್ಲಿದ್ದು,೫೮ ಟೆಂಡರ್ ಹಂತದಲ್ಲಿವೆ.ಮೊದಲ ಮತ್ತು ಎರಡನೇ ಹಂತದಲ್ಲಿ ಕಾಮಗಾರಿಗಳಲ್ಲಿ ಕೊಂಚ ಏರುಪೇರಾದ ಕಾರಣ,ಹೆಚ್ಚುವರಿ ೫ ಕೋಟಿಗಳ ಅನುಧಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಗುತ್ತಿಗೆದಾರರ ಕಳ್ಳಾಟದಿಂದ ಕಾಮಗಾರಿಗಳು ವಿಳಂಭವಾಗುತ್ತಿದ್ದು,ಮುAದಿನ ಕೆಡಿಪಿ ಸಭೆಯೊಳಗೆ ೧&೨ನೇ ಹಂತದ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ.ಉಳಿದವುಗಳನ್ನು ೨೦೨೫ರ ಕೊನೆಯೊಳಗೆ ಪೂರ್ಣಗೊಳಿಸಿ,ಪಂಚಾಯಿತಿಗೆ ಹ್ಯಾಂಡ್‌ಓವರ್ ಮಾಡುವುದಾಗಿ ತಿಳಿಸಿದರು.
ತಾ.ಪಂ. ಇಓ ಹರ್ಷಕುಮಾರ್ ಮಾತನಾಡಿ,ಜೆಜೆಎಂ ಕಾಮಗಾರಿಗಳಿಗೆ ಅನುದಾನದ ಕೊರತೆಯಿಲ್ಲ.ಆದರೆ ಕೆಲ ಗುತ್ತಿಗೆದಾರರು ಅರ್ಧಂಬರ್ಧ ಕೆಲಸ ಮಾಡಿ ಬಿಟ್ಟು ಹೋದ ಪರಿಣಾಮ ಅವರನ್ನು ಕಾನೂನು ಪ್ರಕಾರ ಹಿಡಿದು ಕೆಲಸ ಮಾಡಿಸುವುದು ತಡವಾಗುತ್ತಿದೆ.ಶಾಸಕರು ನೀಡಿದ ನಿಗಧಿತ ಅವಧಿಯೊಳಗೆ ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ತಿಳಿಸಿದರು.
ಕಳೆದ ೧೫ ದಿನಗಳ ಹಿಂದೆ ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿರುವ ಸುಮಾರು ೧೮೪ ಹಾಡಿ,ಗೊಲ್ಲರಹಟ್ಟಿ, ತಾಂಡಗಳನ್ನು ಗುರುತಿಸಿ, ಅವುಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ತಹಶೀಲ್ದಾರ್, ಅರಣ್ಯ,ತಾ.ಪಂ. ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ನಿರ್ಣಯ ಕೈಗೊಂಡಿದ್ದರೂ ಇದುವರೆಗೂ ಒಂದು ಗ್ರಾಮವನ್ನು ಘೋಷಣೆ ಮಾಡಿಲ್ಲ.ಹಕ್ಕುಪತ್ರ ನೀಡಿಲ್ಲ.ಇದು ತಾಲೂಕು ಆಡಳಿತ ಕುಸಿದು ಬಿದ್ದಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ತಹಶೀಲ್ದಾರರ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಬಿ.ಸುರೇಶಗೌಡ,ನಿಮ್ಮ ರೀತಿ ಕೆಲಸ ಮಾಡಿದರೆ ಸರಕಾರದ ಗುರಿ ಒಂದು ಲಕ್ಷ ಜನರಿಗೆ ಹಕ್ಕು ಪತ್ರ ನೀಡಲು ಶತಮಾನಗಳೇ ಬೇಕಾಗಬಹುದು.ಯುದ್ದೋಪಾದಿಯಲ್ಲಿ ಕೆಲಸ ಮಾಡಿ,೧೮೪ ಗ್ರಾಮಗಳ ಸುಮಾರು ೧೫ ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ವಿತರಿಸಬೇಕೆಂದು ತಾಕೀತು ಮಾಡಿದರು.
ತಹಶೀಲ್ದಾರರು ಕೆಲ ದಿನಗಳ ಕಾಲ ಇತರೆ ಕೆಲಸಗಳನ್ನು ಬದಿಗಿಟ್ಟು,ವಿ.ಎ, ಆರ್,ಐ, ಡಿ,ಟಿ ಹಾಗೂ ಎಡಿಎಲ್‌ಅರ್ ಅವರುಗಳ ಜೊತೆ ಒಂದು ತಂಡವಾಗಿ ಕೆಲಸ ಮಾಡಿದರೆ ಮಾತ್ರ ಸಾಧ್ಯ. ಕಂದಾಯ ಇಲಾಖೆ ಕಂದಾಯ ಗ್ರಾಮ ಘೋಷಣೆ, ಆಶ್ರಯ ನಿವೇಶನ ಹಂಚಿಕೆ ಮತ್ತು ಬಗರಹುಕ್ಕಂ ಸಾಗುವಳಿ ಪತ್ರ ಇವುಗಳನ್ನು ಅಧ್ಯತೆಯಾಗಿ ತೆಗೆದುಕೊಂಡು ಕೆಲಸಮಾಡಬೇಕಿದೆ. ಅರ್ಜಿ ಸಲಿಸಿ ಜನರು ಕಚೇರಿಗೆ ಅಲೆಯುವಂತಾಗಿದೆ.ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಇವುಗಳ ಬಗ್ಗೆ ವಿಶೇಷ ಆಂದೋಲನ ನಡೆಸಬೇಕು.ಕ್ಷೇತ್ರದಲ್ಲಿ ಬಾಕಿ ಇರುವ ಸುಮಾರು ೮೬ ಶಾಲೆಗಳ ಜಾಗವನ್ನು ಹದ್ದುಬಸ್ತು ಮಾಡಿ, ಶಾಲೆಯ ಹೆಸರಿಗೆ ದಾಖಲೆಗಳನ್ನು ಮಾಡಿಕೊಡುವಂತೆ ಶಾಸಕ ಸುರೇಶಗೌಡ ಸಲಹೆ ನೀಡಿದರು.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ವಾಸವಾಗಿರುವ ಶಿಳ್ಳೆಕ್ಯಾತ ಮತ್ತು ಸುಡುಗಾಡು ಸಿದ್ದರು ಎಂಬ ಎರಡು ಸಮುದಾಯಗಳು ವಾಸಿಸುತ್ತಿರುವ ಜಾಗಗಳಲ್ಲಿ ವಿದ್ಯುತ್ ಇಲ್ಲ.ಒಂದು ಟಿ.ಸಿ ಹಾಕಿ ಅವರ ಗುಡಿಸಲುಗಳಿಗೆ ವಿದ್ಯುತ್ ಒದಗಿಸಲು ೫.೫೦ ಲಕ್ಷ ರೂ ಬೇಕು.ಆದರೆ ಒಂದು ವರ್ಷದಿಂದ ಹೇಳುತ್ತಿದ್ದರು ಅವರಿಗೆ ವಿದ್ಯುತ್ ನೀಡಲು ಅಧಿಕಾರಿಗಳು ಮುಂದಾಗಿಲ್ಲ.ಇದು ಸರಕಾರದ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ.ಸರಕಾರದ ಪ್ರಕಾರ ಎಸ್ಸಿಪಿ ಮತ್ತು ಟಿಎಸ್ಪಿ ಅನುದಾನ ೪೦ ಸಾವಿರ ಕೋಟಿ.ಆದರೆ ಅದು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ.ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗಮನಹರಿಸದಿದ್ದರೆ ಮೇಲಾಧಿಕಾರಿಗಳಿಗೆ ದೂರು ನೀಡದೆ ವಿಧಿಯಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ತಾ.ಪಂ. ಇಓ ಹರ್ಷಕುಮಾರ್,ತಹಶೀಲ್ದಾರ್ ರಾಜೇಶ್ವರಿ,ನ್ಯಾಮಿನಿ ಸದಸ್ಯರಾದ ಕೆ.ಜಿ.ಪ್ರಕಾಶ್, ತನ್ವಿರ್, ಕಲ್ಪನ, ರುದ್ರೇಶ್ ಹಾಗೂ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

 

(Visited 1 times, 1 visits today)