ತುಮಕೂರು: ನಗರದ ಶ್ರೀರಾಮನಗರದಲ್ಲಿ ರುವ ಅಂದರೆ ಅಮಾನಿಕೆರೆ ಮುಖ್ಯದ್ವಾರದ ಮುಂಭಾಗದಲ್ಲಿರುವ ಸರ್ಕಾರಿ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ಕರ್ನಾಟಕ ಪಿಂಜಾರ/ನದಾಫ್ ಜನಾಂಗದ ಕ್ಷೇಮಾಭಿವೃದ್ಧಿ ರಾಜ್ಯ ಸಂಘದ ರಾಜ್ಯದಕ್ಷರು ಹಾಗೂ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಬಷೀರ್ ಅಹಮದ್‌ರವರು ರಾಜ್ಯ ಶಿಕ್ಷಣ ಸಚಿವರಿಗೆ ಸೇರಿದಂತೆ ಸ್ಥಳೀಯ ಶಿಕ್ಷಣ ಅಧಿಕಾರಿಗಳು, ಬಿ.ಇ.ಓ. ರವರುಗಳಿಗೆ ಮನವಿ ಯನ್ನು ಸಲ್ಲಿಸಿದ್ದಾರೆ.
ತಮ್ಮ ಮನವಿಯಲ್ಲಿ ವಿವರಿಸಿರುವಂತೆ ಶ್ರೀರಾಮನಗರ ಸರ್ಕಾರಿ ಶಾಲೆಯು ಒಂದರಿAದ ಏಳನೇ ತರಗತಿವರೆಗೂ ತರಗತಿಗಳು ನಡೆಯುತ್ತಿರುತ್ತವೆ, ಈ ಶಾಲೆಯು ಪ್ರಸ್ತುತ ಕನ್ನಡ ಮೀಡಿಯಂ ಶಾಲೆಯಾಗಿರುತ್ತದೆ, ಆದರೆ ಕೆಲವು ವರ್ಷಗಳಿಂದ ಇಲ್ಲಿನ ಸ್ಥಳೀಯ ನಿವಾಸಿಗಳು ಹಾಲಿ ಶಾಲೆಯನ್ನು ಇಂಗ್ಲಿಷ್ ಮೀಡಿಯಂ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕು ಎಂದು ಒತಾಯಿಸಿಕೊಂಡು ಬರುತ್ತಿದ್ದೇವೆ, ಜೊತೆಗೆ ಇತ್ತೀಚೆಗೆ ಸ್ಥಳೀಯ ಬಿ.ಇ.ಓ. ಸೇರಿದಂತೆ ಇಲಾಖಾ ಉಪ-ನಿರ್ದೇಶಕರಿಗೆ ಮನವಿಯನ್ನು ಸಹ ಸಲ್ಲಿಸಿರುತ್ತೇವೆ, ಈ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಿದರೆ ಅನುಕೂಲವಾಗುತ್ತದೆ ಜೊತೆಗೆ ಈ ಶಾಲೆಯು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿದ್ದು ಪ್ರತಿಯೊಬ್ಬರೂ ಸಹ ಸುಶಿಕ್ಷಿ ತರಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ ಈ ಶಾಲೆಯು ಇನ್ನೂ ಕನ್ನಡ ಮಾಧ್ಯಮದಲ್ಲಿಯೇ ವಿದ್ಯಾಭ್ಯಾಸ ನೀಡಲಾಗುತ್ತಿದೆ, ಈಗಲಾದರೂ ಈ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಿದಲ್ಲಿ ಅತೀ ಹೆಚ್ಚಿನ ಮಕ್ಕಳು ಈ ಸರ್ಕಾರಿ ಶಾಲೆಯಲ್ಲಿ ಓದುವಂತೆ ಆಗುತ್ತದೆ ಇದನ್ನು ಮನದಟ್ಟು ಮಾಡಿಕೊಂಡು ಸರ್ಕಾರ ಅತೀ ಶೀಘ್ರವಾಗಿ ಎಚ್ಚೆತ್ತು ಈ ಶಾಲೆಯನ್ನು ಆಂಗ್ಲ ಮಾದ್ಯಮ ಶಾಲೆಯನ್ನಾಗಿ ಪರಿವರ್ತನೆ ಮಾಡಬೇಕೆಂದು ತಮ್ಮ ಮನವಿಯಲ್ಲಿ ಮನವಿ ಮಾಡಿರುತ್ತಾರೆ.
ಮನವಿ ಪತ್ರವನ್ನು ಸಲ್ಲಿಸುವ ಸಂದರ್ಭದಲ್ಲಿ ಮುಖಂಡರಾದ ವಸಂತ್ ಕುಮಾರ್ ಜಿ.ಎ ಸೇರಿದಂತೆ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.
(Visited 1 times, 1 visits today)