ಶಿರಾ: ಬಾಲ್ಯದಿಂದ ೩೫ ವರ್ಷಗಳ ವರಗೆ ಅಂಗವಿಕಲತೆಯಿAದ ಬಳಲುತ್ತಿದ್ದ ಶಿರಾ ತಾಲೂಕಿನ ಬೇವಿನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ೩೫ ವರ್ಷದ ಯುವತಿ ಪುಷ್ಪಲತಾ ರವರ ಕಷ್ಟಕ್ಕೆ ಸ್ಪಂದಿಸಿದ ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಬುಧವಾರ ಪುಷ್ಪಲತಾ ರವರನ್ನು ಭೇಟಿ ಮಾಡಿ ಕುಶಲೋಪರಿ ವಿಚಾರಿಸಿ ಆರ್ಥಿಕ ಸಹಾಯ ಮಾಡುವುದರ ಮೂಲಕ ಮಾನವೀಯತೆಯ ಮೌಲ್ಯ ಹೆಚ್ಚಿಸಿದರು.
ಈ ಬಗ್ಗೆ ಮಾತನಾಡಿದ ಶಿವು ಚಂಗಾವರ ೩೫ ವರ್ಷಗಳಿಂದ ಅಂಗವಿಕಲೆಯಾಗಿ ಮನೆಯ ಲ್ಲಿಯೇ ಇರುವ ಪುಷ್ಪಲತಾ ರವರ ಸೇವೆ, ಅವರ ತಾಯಿ ಗೌರಮ್ಮ ನಿತ್ಯ ಮಾಡುತ್ತಿರುವುದು ಅಮ್ಮ ಎನ್ನುವ ಪದಕ್ಕೆ ನಿಜಾರ್ಥ ದೊರೆತಂತಾಗಿದೆ.
ಉಳ್ಳವರು ಇಂತಹವರಿಗೆ ಸಹಾಯ ಮಾಡುವ ಮೂಲಕ ಸೇವೆಯಲ್ಲಿ ಭಗವಂತನನ್ನು ಕಾಣಬೇಕು.
೧. ವರ್ಷದಿಂದ ಸರ್ಕಾರ ನೀಡುವ ಅಂಗವಿ ಕಲರ ವೇತನ ನೀಡದ ಕಾರಣ ಕುಟುಂಬ ಕಂಗಾಲಾಗಿದೆ, ಎಂಬ ಮನವಿಗೆ ಸ್ಪಂದಿಸಿ ಶಿರಾ ಕ್ಷೇತ್ರದ ಶಾಸಕರಾದ ಟಿ.ಬಿ.ಜಯಚಂದ್ರ ಕರೆ ಮಾಡಿ ಪುಷ್ಪಲತಾ ರವರ ಪಿಂಚಣಿ ಸಮಸ್ಯೆ ಬಗ್ಗೆ ಶಿರಾ ದಂಡಾಧಿಕಾರಿಗಳು ವಿಶೇಷ ಮುತುವರ್ಜಿ ವಹಿಸುವಂತೆ ಮನವಿ ಮಾಡಿದರು.
ಕರೆಗೆ ಸ್ಪಂದಿಸಿದ ಶಾಸಕ ಟಿ.ಬಿ.ಜಯಚಂದ್ರ ಅವರು ಪುಷ್ಪಲತಾ ರವರ ಪಿಂಚಣಿ ಸಮಸ್ಯೆ ತಕ್ಷಣ ಬಗೆಹರಿಸುವಂತೆ ಅಧಿಕಾರಿಗಳಿಗೆ ಸೂಚಿ ಸಿದರು. ಅಂಗವಿಕಲರು, ವೃದ್ಧರು, ವಿಧವೆಯರ ಪಿಂಚ ಣಿ ಬಗ್ಗೆ ಯಾವುದೇ ಸಮಸ್ಯೆ ಬಾರದಂತೆ ನೋಡಿಕೊಂಡು ಸಮಸ್ಯೆಗಳು ಬಂದಲ್ಲಿ ತಕ್ಷಣ ಸ್ಪಂದಿಸಬೇಕು ಎಂದರು. ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ರವರ ಮಾನವೀಯ ಸೇವೆ ಜನ ಮೆಚ್ಚುಗೆಗೆ ಪಾತ್ರವಾಯಿತು. ಪುಷ್ಪಲತಾ ತಾಯಿ ಗೌರಮ್ಮ, ಮುಖಂಡರಾದ ದೇವರಾಜು ಇತರರು ಇದ್ದರು.

(Visited 1 times, 1 visits today)