ಕೊರಟಗೆರೆ: ೨೦೧೮ರಿಂದ ೨೦೨೫ರವರೆಗೆ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡ ಶಿವಗಂಗಾ ಚಿತ್ರಮಂದಿರದ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿ ವರ್ಗ ಶುಕ್ರವಾರ ಬಿಗ್ ಶಾಕ್ ನೀಡಿದ್ದು ಚಿತ್ರಮಂದಿರ, ಕಲ್ಯಾಣಮಂಟಪ, ಹೋಟೆಲ್ ಜಪ್ತಿ ಮಾಡಿ ೩ದಿನದ ಒಳಗೆ ಕಂದಾಯ ಪಾವತಿ ಮಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಕೊರಟಗೆರೆ ಪಟ್ಟಣ ಪಂಚಾಯಿತಿಯ ವಾರ್ಡ್ ನಂ.೧ರ ಗಂಗಾಧರಯ್ಯ ಬಿನ್ ಬಸೇಟಪ್ಪ ಖಾತೆ ನಂ.೩೭/೩೭ರ ಬಾಕಿ ಇರುವ ಆಸ್ತಿ ತೆರಿಗೆಯನ್ನು ೧೯೬೪ರ ಕಲಂ ಪುರಸಭಾ ಕಾಯ್ದೆ ಮತ್ತು ಸ್ವಯಂ ಘೋಷಣೆ ತೆರಿಗೆ ಪದ್ಧತಿಯಂತೆ ನಿಯಾಮನುಸಾರ ಪಾವತಿಸಬೇಕು. ಪ.ಪಂಚಾಯ್ತಿಯಿAದ ಈಗಾ ಗಲೇ ತೆರಿಗೆ ಪಾವತಿಸುವಂತೆ ೨೦೧೮ರಿಂದ ೨೦೨೨ರವರೆಗೆ ೬ಬಾರಿ ತಿಳುವಳಿಕೆ ನೋಟಿಸ್ ನೀಡಿದ್ದು ಅಂತಿಮವಾಗಿ ನೋಟಿಸ್ ರಿಜಿಸ್ಟರ್ ಮೂಲಕ ಕಳುಹಿಸಲಾಗಿತ್ತು. ತಿಳುವಳಿಕೆ ಪತ್ರ ಸ್ವೀಕರಿಸದೆ ತಿರಸ್ಕೃತ ಮಾಡಿದ ಕಾರಣ ಶಿವಗಂಗಾ ಚಿತ್ರಮಂದಿರಕ್ಕೆ ಮತ್ತು ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿ ಮಾಲೀಕನಿಗೆ ಪ.ಪಂಚಾಯಿತಿ ಅಧಿಕಾರಿಗಳು ಶುಕ್ರವಾರ ಬಿಗ್ ಶಾಕ್ ನೀಡಿದ್ದು, ಪಾವತಿಸಬೇಕಾಗಿರುವುದು ತಪ್ಪಿದಲ್ಲಿ ೧೪೩ರಂತೆ ಕ್ರಮ ಕೈಗೊಳ್ಳಲಾಗುವುದು ಎಂಬ ಅಂಶವನ್ನು ಅಂತಿಮ ತಿಳುವಳಿಕೆ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಉಮೇಶ್, ಆರೋಗ್ಯ ನಿರೀಕ್ಷಕ ಹಿಸೇನ್, ಆರ್.ಐ ವೇಣುಗೋಪಾಲ್ ಸೇರಿದಂತೆ ಇತರರು ಇದ್ದರು.
ತೆರಿಗೆ ಆಸ್ತಿ ಬಾಕಿ ವಿವರ: ಶಿವಂಗಾ ಚಿತ್ರಮಂದಿರದ ಮಾಲೀಕನಿಗೆ ಆಸ್ತಿ ತೆರಿಗೆ ಪಾವತಿ ಮಾಡುವಂತೆ ಈಗಾಗಲೇ ಪ.ಪಂ ೬ಬಾರಿ ನೋಟಿಸ್ ನೀಡಿದೆ. ಅಂತಿಮ ತಿಳುವಳಿಕೆ ನೋಟಿಸ್ ತಿರಸ್ಕೃತ ಮಾಡಿದ ಕಾರಣ ಚಿತ್ರಮಂದಿರ, ಕಲ್ಯಾಣ ಮಂಟಪ, ಹೋಟೆಲ್ ಜಪ್ತಿ ಮಾಡಿದ್ದು ಬಾಕಿ ಉಳಿಸಿಕೊಂಡ ೧೦ಲಕ್ಷಕ್ಕೂ ಹೆಚ್ಚಿನ ಹಣ ೩ದಿನದ ಒಳಗೆ ಪಾವತಿಸುವಂತೆ ಪ.ಪಂಚಾಯಿತಿ ತಿಳುವಳಿಕೆ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.

(Visited 1 times, 1 visits today)