ಚಿಕ್ಕನಾಯಕನಹಳ್ಳಿ: ಎಸ್ ಸಿ ಎಸ್ ಟಿ ಜನಾಂಗದವರಲ್ಲಿನ ಬಡವರ ಆರ್ಥಿಕ ಸದೃಡತೆಗಾಗಿ ಪಶುಸಂಗೋಪನಾ ಇಲಾಖೆಯವತಿಯಿಂದ ಕುಕ್ಕುಟಪಾಲನೆಗಾಗಿ ಉಚಿತವಾಗಿ ನಾಟಿಕೋಳಿ ಮರಿಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಪಶುಸಂಗೋಪನಾ ಇಲಾಖೆಯಲ್ಲಿ ಶುಕ್ರವಾರ ಕುಕ್ಕುಟಪಾಲನೆಗಾಗಿ ಅರ್ಹ ಪಲಾನುಭವಿಗಳಿಗೆ ಕೋಳಿಮರಿಗಳನ್ನು ನೀಡಿ ಮಾತನಾಡಿದ ಅವರು ತಾಲ್ಲೂಕಿನಲ್ಲಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಬಡವರನ್ನು ಗುರುತಿಸಿ ತಾಲ್ಲೂಕಿನ ೬೭ಜನ ಮಹಿಳಾ ಪಲಾನು ಭವಿಗಳಿಗೆ ಒಬ್ಬರಿಗೆ ೨೧ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡುತ್ತಿದ್ದು ಇದನ್ನು ಮಹಿಳೆಯರು ಚೆನ್ನಾಗಿ ಬೆಳೆಸಿ ಮೊಟ್ಟೆಗಳನ್ನು ಮಾರಾಟ ಮಾಡುವುದು ಹಾಗೂ ತಿನ್ನುವ ಮೂಲಕ ಉತ್ತಮ ಆರೋಗ್ಯ ಪಡೆಯಿರಿ ಕೋಳಿಯನ್ನು ಉತ್ತಮವಾಗಿ ಸಾಕಿ ಅವುಗಳನ್ನೇ ಕುಯ್ದುಕೊಂಡು ತಿನ್ನಬೇಡಿ ನಿಮ್ಮ ಕೌಟುಂಬಿಕ ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು.
ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರೆ.ಮ.ನಾಗಭೂಷಣ್ ಮಾತನಾಡಿ ತುಮಕೂರು ಜಿಲ್ಲಾಪಂಚಾಯತಿ ವತಿಯಿಂದ ಕುಕ್ಕುಟಪಾಲನೆಗಾಗಿ ಕೋಳಿ ಮರಿಗಳನ್ನು ಅರ್ಹ ಪಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆಮಾಡಲಾಗಿದೆ ಬಡ ರೈತ ಮಹಿಳೆಯರಿಗಾಗಿ ಇದ್ದು ಚೆನ್ನಾಗಿ ಸಾಕಿ ಇದನ್ನು ನೋಡಲು ಬರುತ್ತೆವೆ ಉತ್ತಮವಾಗಿ ಸಾಕಿ ಯಶೋಗಾಥೆಯಲ್ಲಿ ತಿಳಿಸಿ ಈ ಕೋಳಿ ಮರಿಗಳನ್ನು ಸಾಕಿ ಎಂದರು.
ಈ ಸಂದರ್ಭದಲ್ಲಿ ಪುರಸಭಾ ಉಪಾದ್ಯಕ್ಷ ಸಿ.ಎಂ.ರಾಜಶೇಖರ್, ಸ್ಥಾಯಿಸಮಿತಿ ಅಧ್ಯಕ್ಷ ಸಿ.ಡಿ.ಸುರೇಶ್, ಸದಸ್ಯ ಮಂಜುನಾಥಗೌಡ, ಕಸಬಾ ವಿವಿಎಸ್ ಅಧ್ಯಕ್ಷ ಪ್ರಸನ್ನಕುಮಾರ್ ಹೊನ್ನೇ ಬಾಗಿ ಸೇರಿದಂತೆ ಇತರರು ಇದ್ದರು.

(Visited 1 times, 1 visits today)