ಚಿಕ್ಕನಾಯಕನಹಳ್ಳಿ: ಗುಣಮಟ್ಟದ ಆಹಾರ ವಸತಿ ವ್ಯವಸ್ಥೆ ಸೇರಿದಂತೆ ವಿದ್ಯಾರ್ಥಿಗಳಿಗೆ ಇರುವಂತಹ ಸೌಲಭ್ಯಗಳ ಬಗ್ಗೆ ಶಾಸಕ ಸಿ.ಬಿ.ಸುರೇಶ್ ಬಾಬು ವಿದ್ಯಾರ್ಥಿನಿಯಕ್ಕೆ ಬೇಟಿ ನೀಡಿ ಪರಿಶಿಲನೆ ನಡೆಸಿದರು.
ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಕೆಯ ಮೇಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಸೋಮವಾರ ಸಂಜೆ ದಿಡೀರ್ ಬೇಟಿ ನೀಡಿದ ಅವರು ಅಡುಗೆ ಕೋಣೆ , ಲೈಬ್ರೆರಿ ಸೇರಿದಂತೆ ವಿದ್ಯಾರ್ಥಿನಿಲಯವನ್ನು ವೀಕ್ಷಿಸಿದರು ಈ ಸಂದರ್ಭ ದಲ್ಲಿ ಮಾತನಾಡಿದ ಅವರು ಸರ್ಕಾರ ಬಡವರಿಗಾಗಿ ವಸತಿ ಶಾಲೆಗಳನ್ನು ತೆರೆಯುತ್ತಿದ್ದು ಅದರಲ್ಲಿ ಸೀಟ್ ಸಿಗದೇ ಇರುವಂತಹವರು ವಿದ್ಯಾರ್ಥಿನಿಲಯಗಳಲ್ಲಿದ್ದು ಕೊಂಡು ಶಿಕ್ಷಣ ಪಡೆಯುವಂತೆ ಮಾಡಿದೆ ಅದ್ದರಿಂದ ಇಂತಹ ವಿದ್ಯಾರ್ಥಿನಿಲುಯಗಳಲ್ಲಿ ಗುಣಮಟ್ಟದ ಊಟ ಹಾಗೂ ವಸತಿಯನ್ನು ಮಕ್ಕಳು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಹಾಗು ಹಾಸ್ಟೇಲ್ ನಲ್ಲಿದ್ದು ಕೊಂಡು ಓದುವಂತಹ ವಿದ್ಯಾರ್ಥಿಗಳ ಪಲಿತಾಂಶವು ಹೆಚ್ಚು ಬರಬೇಕು ಇದರತ್ತ ಗಮನಹರಿಸಬೇಕು ಎಂದಅವರು ಸಮಯವನ್ನು ಹಾಳು ಮಾಡದೇ ಪೋಷಕರ ಕನಸನ್ನು ನನಸು ಮಾಡುವಂತಹ ಉತ್ತಮವಾದ ಭವಿಷ್ಯವನ್ನು ಅದ್ಯಯನ ಮಾಡುವ ಮೂಲಕ ರೂಪಿಸಿಕೊಳ್ಳಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಹಾಸ್ಟೇಲ್ ಗೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಮಾಡುವುದಾಗಿ ತಿಳಿಸಿದರು.
ತಹಸೀಲ್ದಾರ್ ಪುರಂದರ ಕೆ ಮಾತನಾಡಿ ಹಾಸ್ಟೇಲ್ ನಲ್ಲಿ ಸ್ವಚ್ಛತೆಗೆ ಅದ್ಯತೆ ನೀಡಿ ಮಕ್ಕಳ ಆರೋಗ್ಯದ ಕಡೆ ಹೆಚ್ಚು ಗಮನನೀಡಿ ಇರುವಂತಹ ವ್ಯವಸ್ಥೆಯನ್ನು ಬಳಸಿಕೊಂಡು ಹೊಂದಿಕೊAಡು ಹೋಗಿ ನಿಮ್ಮ ನಿಲಯವನ್ನು ನಿವೇ ನಿಮ್ಮ ಮನೆಎಂದು ಭಾವಿಸಿ ಸ್ವಚ್ಛವಾಗಿರಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಉಚಿತ ಸಿಇಟಿ ತರಬೇತಿ ನೀಡುವಂತೆ ಪದವಿ ವಿದ್ಯಾರ್ಥಿಗಳಿಗಾಗಿ ಐಎಎಸ್ , ಐಪಿಎಸ್, ಕೆಎ ಎಸ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕೊಡಿಸುವಂತೆ ಮನವಿ ಮಾಡಿದರು,.
ಈ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮವಹಿಸುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ವಿದ್ಯಾರ್ಥಿನಿಲಯದ ಮೇಲ್ವಿಚಾರಕಿ ಜ್ಯೋತಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.