
ತುಮಕೂರು: ನಗರದ ಸಾಹೇ ವಿಶ್ವವಿದ್ಯಾಲಯದ ಶ್ರೀ ಸಿದ್ಧಾ ರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ಮೆಕ್ಯಾನಿಕಲ್, ಕಂಪ್ಯೂಟರ್, ಮಾಹಿತಿ ವಿಜ್ಞಾನ, ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿAಗ್‌ನ ನಾಲ್ಕು ವಿಭಾಗಗಳಿಗೆ ಇತ್ತೀಚೆಗೆ ಎನ್‌ಬಿಎ (ರಾಷ್ಟಿçÃಯ ಮಾನ್ಯತಾ ಮಂಡಳಿ) ಭೇಟಿ ನೀಡಿ ೨೦೨೭-೨೦೨೮ನೇ ಸಾಲಿನವರೆಗೆ ಎನ್‌ಬಿಎ ಮಾನ್ಯತೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಸಾಹೇ ವಿವಿ ಕುಲಾಧಿಪತಿ ಡಾ.ಜಿ.ಪರಮೇಶ್ವರ ಅವರು ನಾಲ್ಕು ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಭೋದಕ ಮತ್ತು ಭೋದಕೇತರರಿಗೆ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸಲ್ಲಿಸಿ ಮಾತನಾಡಿದ ಅವರು, ಎನ್‌ಬಿಎ ಇಂಜಿನಿಯರಿAಗ್ ಕಾಲೇಜಿನ ನಾಲ್ಕು ವಿಭಾಗಗಳಿಗೆ ಮಾನ್ಯತೆ ನೀಡಿದೆ, ಪ್ರಾಧ್ಯಾಪಕರು ಮತ್ತು ಉಪನ್ಯಾಸಕರು ಹೆಚ್ಚು ಸಂಶೋ ಧನೆಗೆ ಒತ್ತು ನೀಡಬೇಕು, ಮುಂದಿನ ಮೂರು ವರ್ಷಗಳಿಗೆ ಬೇಕಿರುವ ಮಾನ್ಯತೆಗೆ ಎಲ್ಲಾ ಅರ್ಹ ಮಾಹಿತಿಯನ್ನು ಈಗಿನಿಂ ದಲೇ ದಾಖಲೆ ಮಾಡಬೇಕು, ಹಾಗೂ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ನೀಡಬೇಕೆಂದು ಸಲಹೆ ನೀಡಿದರು.
ರಾಷ್ಟಿçÃಯ ಮತ್ತು ಅಂತಾರಾಷ್ಟಿçÃಯ ಮಟ್ಟದಲ್ಲಿ ಸಂಶೋಧನಾ ಲೇಖನಗಳು, ಕಾರ್ಯಾಗಾರಗಳು, ಸಮ್ಮೇಳನಗಳಿಗೆ ಉಪನ್ಯಾ ಸಕರು ಭಾಗವಹಿಸಬೇಕು. ಇತ್ತೀಚಿನ ತಾಂತ್ರಿಕ ಕೌಶಲ್ಯ ಪ್ರವೃತ್ತಿ ಗಳನ್ನು ಮತ್ತು ಮಾಹಿತಿಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊ ಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಾರ್ಚ್ ೨೮ರಂದು ಎನ್‌ಬಿಎ (ರಾಷ್ಟಿçÃಯ ಮಾನ್ಯತಾ ಮಂಡಳಿ) ಭೇಟಿ ನೀಡಿತ್ತು. ತಾಂತ್ರಿಕ ಶಿಕ್ಷಣ ಗುಣಮಟ್ಟದ ಬಗ್ಗೆ ಮಾನ್ಯತೆ ನೀಡುವ ಈ ಮಂಡಳಿಯು ಅಧ್ಯಕ್ಷರು ಸೇರಿದಂತೆ ಮೂವರು ಪರಿಣಿತರನ್ನು ಒಳಗೊಂಡಿದ್ದು, ತಂಡ ಕಾಲೇಜಿನಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಪರಿಶೀಲನೆ ನಡೆಸಿತ್ತು.
ತಾಂತ್ರಿಕ ಪ್ರಯೋಗಾಲಯ ಮತ್ತು ಅಗತ್ಯ ಇರುವ ಸೌಲಭ್ಯ ಗಳನ್ನು ಪರಿಶೀಲಿಸಿ, ಪ್ರಾಧ್ಯಾಪಕರೊಂದಿಗೆ ತಾಂತ್ರಿಕ ಶಿಕ್ಷಣದ ಕೌಶಲ್ಯ, ಸಂಶೋಧನಾ ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಸಿಗುತ್ತಿರುವ ಶಿಕ್ಷಣ ಮತ್ತು ಸೌಲಭ್ಯಗಳನ್ನು ಪರಿಶೀಲಿಸಿದ್ದರು.
ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾ ಲರಾದ ಡಾ.ಎಂ.ಎಸ್.ರವಿಪ್ರಕಾಶ ಅವರು, ಎನ್‌ಬಿಎ ಮಾನ್ಯತೆ ಯ ಬಗ್ಗೆ ಹರ್ಷ ವ್ಯಕ್ತಪಡಿಸಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ, ನುರಿತ ಪ್ರಾಧ್ಯಾಪಕರು, ಸಂಶೋಧಕರು, ಡಿಜಿಟಲ್ ಲೈಬ್ರರಿ, ವೈಫೈ ಕ್ಯಾಂಪಸ್ ಸೇರಿದಂತೆ ಉತ್ತಮ ಸೌಲಭ್ಯ, ಕಲಿಕಾ ಬೋಧನೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ಜೊತೆಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಉತ್ತಮ ತಾಂತ್ರಿಕ ಕಲಿಕಾ ಬೋಧನೆ ರೂಪಿಸಿಕೊ ಳ್ಳಲು ನೆರವಾಗುತ್ತಿz್ದೆÃವೆ. ಇಂಜಿನಿಯರಿAಗ್ ಕಾಲೇಜಿನ ಸಿಎಸ್‌ಇ, ಐಎಸ್‌ಇ, ಇಸಿಇ ಮತ್ತು ಎಂಇ ನಾಲ್ಕು ವಿಭಾಗಗಳಿಗೆ ಎನ್‌ಬಿಎ ಮಾನ್ಯತೆ ಪಡೆದಿದೆ ಎಂದು ತಿಳಿಸಿದರು. ಮೆಕ್ಯಾನಿಕಲ್ ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ. ಹೇಮಂತಕುಮಾರ್, ಕಂಪ್ಯೂಟರ್ ಸೈನ್ಸ್ (ಸಿಎಸ್) ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಡಾ.ರೇಣುಕಾಲತಾ, ಮಾಹಿತಿ ವಿಜ್ಞಾನ(ಐಎಸ್) ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥೆ ಡಾ. ಅನ್ನಪೂರ್ಣ ಹಾಗೂ ಎಲೆಕ್ಟಾçನಿಕ್ಸ್ ಮತ್ತು ಕಮ್ಯುನಿಕೇಷನ್ (ಇಸಿ) ಎಂಜಿನಿಯರಿAಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಸಿ. ಚಂದ್ರಶೇಖರ್ ಎನ್‌ಬಿಎ ಸಂಯೋಜಕರಾದ ಡಾ.ಶ್ರೀನಿಧಿ ಮತ್ತು ಎಲ್ಲಾ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

 
									 
					


