
ತುಮಕೂರು: ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಹಾಗೂ ಶಿಸ್ತು ಕಲಿಸುವಲ್ಲಿ ಎನ್‌ಎಸ್‌ಎಸ್ ಶಿಬಿರ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಹೇಳಿದರು.
ತಾಲ್ಲೂಕಿನ ನಾಗವಲ್ಲಿ ಸಮೀಪದ ಬಿದರಕಟ್ಟೆ ಯಲ್ಲಿರುವ ತುಮಕೂರು ವಿಶ್ವವಿದ್ಯಾನಿಲಯದ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ಹಾಗೂ ತುಮಕೂರು ವಿವಿ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ರಾಷ್ಟಿçÃಯ ಸೇವಾ ಯೋಜನೆ ಘಟಕದ-೨೦೨೪-೨೫ನೇ ಸಾಲಿನ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಶಿಕ್ಷಣದ ಜತೆಗೆ ಸಾಧನೆಗೈಯಲು ರಾಷ್ಟಿçÃಯ ಸೇವಾ ಯೋಜನೆ ದಾರಿ ಮಾಡಿಕೊಡುತ್ತದೆ ಎಂದು ಹೇಳಿದರು.
ಮುಂದಿನ ಒಂದು ವರ್ಷದ ಅವಧಿಯಲ್ಲಿ ಜ್ಞಾನಸಿರಿ ಕ್ಯಾಂಪಸ್‌ನ್ನು ಉದ್ಯಾನವನವಾಗಿ ಮಾಡಲು ದೃಢಸಂಕಲ್ಪ ಮಾಡಿರುವುದಾಗಿ ಅವರು ತಿಳಿಸಿದರು.
ನಮ್ಮ ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ನಡೆದ ಮೊದಲ ಎನ್‌ಎಸ್‌ಎಸ್ ಶಿಬಿರ ಇದಾಗಿದೆ. ಪರಿಸರದ ಸಂರಕ್ಷಣೆ ಕಾಳಜಿಯನ್ನು ಹೊಂದಿ ರುವ ಶ್ರೀ ಕೃಷ್ಣ ಮಹಾವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ ಎಂದರು.
ಶ್ರೀ ಕೃಷ್ಣ ಶಿಕ್ಷಣ ಸಂಸ್ಥೆಯ ಮರಿಚೆನ್ನಮ್ಮ ಮಾತನಾಡಿ, ಶ್ರೀ ಕೃಷ್ಣ ಶಿಕ್ಷಣ ಮಹಾವಿದ್ಯಾಲಯ ತುಮಕೂರು ವಿವಿ ಸಹಯೋಗದಲ್ಲಿ ಒಂದು ವಾರ ಕಾಲ ರಾಷ್ಟಿçÃಯ ಸೇವಾ ಯೋಜನೆ ಶಿಬಿರ ವನ್ನು ಜ್ಞಾನಸಿರಿ ಕ್ಯಾಂಪಸ್‌ನಲ್ಲಿ ಯಶಸ್ವಿಯಾಗಿ ನಡೆಸಿದೆ. ಇದಕ್ಕೆ ಸಹಕಾರ ನೀಡಿದ ತುಮಕೂರು ವಿವಿಯ ಕುಲಪತಿಗಳು ಸೇರಿದಂತೆ ಎಲ್ಲರಿಗೂ ಧನ್ಯವಾದ ಎಂದರು.
ವೃಕ್ಷ ಮಿತ್ರ ಸಂಸ್ಥಾಪಕರಾದ ಪ್ರೊಯ ಸಿದ್ದಪ್ಪ ಮಾತನಾಡಿ, ನಾವೆಲ್ಲರೂ ಭ್ರಾತೃತ್ವ ಮತ್ತು ಭಾವೈಕ್ಯತೆಯಿಂದ ಪ್ರೀತಿ-ಸಹಕಾರವನ್ನು ಬೆಳೆಸಿ ಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟಿçÃಯ ಸೇವಾ ಯೋಜನೆ ಘಟಕದ ನಿರ್ದೇಶಕರು ಹಾಗೂ ಪ್ರಾಂಶುಪಾಲರಾದ ಡಾ. ಮೋಹನ್‌ಕುಮಾರ್ ಅವರು ಎನ್‌ಎಸ್‌ಎಸ್ ಕಾರ್ಯ ಚಟುವಟಿಕೆ ವರದಿಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಲತಾ, ಸಹ ಶಿಬಿರಾಧಿಕಾರಿ ಶ್ವೇತಾ ಕೆಂಪರಾಜು, ಪ್ರಿಯಾಂಕ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





