ತುಮಕೂರು: ನೂತನ ಪಠ್ಯವಸ್ತುವಿನಲ್ಲಿ ಕನ್ನಡ ಭಾಷೆಯಲ್ಲಿರುವ ಹಳಗನ್ನಡ ಕಾವ್ಯಗಳ, ಕವಿಗಳ ಪರಿಚಯವಾಗಬೇಕಾಗಿದೆ. ಪ್ರಾಚೀನ ಶಾಸ್ತಿçÃಯ ಕಲೆಯಾದ ಗಮಕದಿಂದ ಮಾತ್ರ ಸಾಧ್ಯ ಎಂದು ತುಮಕುರು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಿಕ್ಕಬೆಳ್ಳಾವಿ ಶಿವಕುಮಾರ್ ಅಭಿಪ್ರಾಯಪಟ್ಟರು.
ಬೆಳ್ಳಾವಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ೮, ೯ ಮತ್ತು ೧೦ನೇ ತರಗತಿಯ ಕನ್ನಡ ಪದ್ಯಗಳನ್ನು ಗಮಕ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಭಾಷೆಯ ಸಾವಿರಾರು ವರ್ಷಗಳ ಇತಿಹಾಸದಲ್ಲಿ ನೂರಾರು ಕವಿಗಳ, ನೂರಾರು ಕೃತಿಗಳ ಪರಿಚಯ ಇಂದು ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಪರಿಚಯ ನೀಡಿದಾಗ ನಮ್ಮ ನಾಡು ನುಡಿಯ, ಕವಿ ಕಾವ್ಯಗಳ ಬಗ್ಗೆ ಅಭಿಮಾನ ಮೂಡುತ್ತದೆ ಎಂದರು. `ಕಸಾಪ ನಡೆ ಶಾಲೆಗಳ ಕಡೆ’ ಕಾರ್ಯಕ್ರಮದಡಿ ತಾಲ್ಲೂಕಿನ ಶಾಲೆಗಳಲ್ಲಿ ಈ ಯೋಜನೆ ಆರಂಭಿಸಲಾಗಿದೆ ಎಂದರು.
ಪಠ್ಯ ವಿಷಯದ ಪದಗಳಿಗೆ ಸುಶ್ರಾವ್ಯ ವಾಚನ ಮಾಡಿ ವಿವಿಧ ಶಾಸ್ತಿçÃಯ ರಾಗಗಳನ್ನು ಅಳವಡಿಸಿಕೊಂಡು ಗಮಕ ವಾಚನ ಮಾಡಿದ ನಗರದ ಸಪ್ತಗಿರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಗಮಕ ಪೂರ್ಣಿಮಾ ವೆಂಕಟೇಶ್‌ರವರ ವಾಚನಕ್ಕೆ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಗಮಕಿ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಪದ್ಯಗಳಿಗೆ ತಕ್ಕಂತೆ ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ವ್ಯಾಖ್ಯಾನ ನೀಡಿದರು. ಅಲ್ಲಮನ ವಚನಗಳು, ಸೋಮೇಶ್ವರ ಶತಕದ ಪದ್ಯಗಳು, ಕನ್ನಡ ನಾಡು ನುಡಿಯ ಬಗ್ಗೆ ಸವಿಸ್ತಾರವಾಗಿ ತಿಳಿಸಿದರು. ೧೦ನೇ ತರಗತಿಯ ಕುಮಾರವ್ಯಾಸ ಭಾರತದ `ಕೌರವೇಂದ್ರನ ಕೊಂದೆ ನೀನು’ ಕೃತಿಯ ಕರ್ಣ ಕೃಷ್ಣರ ಸಮಾಗಮದ ಬಗ್ಗೆ ಸಾಹಿತ್ಯಿಕವಾಗಿ ನೆರವೇರಿಸಿದ ಈ ಕಾರ್ಯಕ್ರಮ ವಿದ್ಯಾರ್ಥಿಗಳ ಗಮನ ಸೆಳೆಯಿತು. ಪ್ರಾಂಶುಪಾಲರಾದ ಫತೇ ಅಹಮದ್ ಉಪಸ್ಥಿತರಿದ್ದರು.
ಅಧ್ಯಕ್ಷತೆೆ ವಹಿಸಿದ್ದ ಉಪ ಪ್ರಾಂಶುಪಾಲರಾದ ರೇಖಾವತಿರವರು ಮಾತನಾಡಿ, ನಮ್ಮ ನಾಡಿನ ಸಂಸ್ಕೃತಿ ಪರಂಪರೆ ಉಳಿಸಲು ಗಮಕ ಒಂದು ಉತ್ತಮ ಮಾಧ್ಯಮ. ಪ್ರಚಾರ ಮಾಡುತ್ತಿರುವ ಕಸಾಪದ ಕಾರ್ಯ ಶ್ಲಾಘನೀಯವಾದುದೆಂದರು. ಪ್ರೊ. ಶಶಿಕುಮಾರ್‌ರವರು ಭಾವಗೀತೆ, ಜನಪದ ಗಿತೆ ಹಾಡಿ ರಂಜಿಸಿದರು. ವಿದ್ಯಾರ್ಥಿನಿಯರು ಗಮಕ ಕಲೆಯ ಬಗ್ಗೆ ಅನಿಸಿಕೆ ನೀಡಿದರು.
ವೇದಿಕೆಯಲ್ಲಿ ಕನ್ನಡ ಸೇವಾಕರ್ತರಾದ, ಪತ್ರಕರ್ತ ನವರತ್ನ ಕುಮಾರ್‌ರವರನ್ನು ಗೌರವಿಸ ಲಾಯಿತು. ಮೊದಲಿಗೆ ಶಾಲಾ ಮಕ್ಕಳು ಪಾ ರ್ಥನೆ ಮಾಡಿದರು. ಶಿಕ್ಷಕ ಶಿವಣ್ಣ ಸ್ವಾಗತಿಸಿದರೆ, ಕನ್ನಡ ಶಿಕ್ಷಕ ಜಯಣ್ಣ ನಿರೂಪಿಸಿದರೆ, ಮಾರುತಿ ವಂದಿಸಿದರು. ಇಡೀ ಕಾರ್ಯಕ್ರಮದಲ್ಲಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

(Visited 1 times, 1 visits today)