ತುಮಕೂರು: ಮಹಾ ನಗರಪಾಲಿಕೆಯ ನೌಕರರಿಗೂ ಏಳನೇ ವೇತನ ಆಯೋಗದ ಸೌಲಭ್ಯಗಳನ್ನು ವಿಸ್ತರಿಸಬೇಕು, ಅನುದಾನವನ್ನುಆರ್ಥಿಕಇಲಾಖೆಯಿಂದಲೇ ಬಿಡುಗಡೆ ಮಾಡಬೇಕು, ನಿಯಮದಂತೆ ವೃಂದ ಮತ್ತು ನೇಮಕಾತಿ ನಿಯಮಾವಳಿಗಳಿಗೆ ಸೂಕ್ತ ತಿದ್ದುಪಡಿತರಬೇಕು ಹಾಗೂ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ ೦೮ ರಿಂದ ಬೆಂಗಳೂರಿನ ಪ್ರಿಡಂ ಪಾರ್ಕಿನಲ್ಲಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗಿದೆ ಎಂದುಕರ್ನಾಟಕರಾಜ್ಯ ಮಹಾನಗರಪಾಲಿಕೆ ನೌಕರರ ಸಂಘಗಳ ಪರಿಷತ್‌ನರಾಜ್ಯಾಧ್ಯಕ್ಷಅಮೃತರಾಜ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದಅವರು, ಈ ಸಂಬAಧರಾಜ್ಯ ಸರಕಾರಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅನಿವಾರ್ಯವಾಗಿಜುಲೈ ೦೮ ರಿಂದ ಮಹಾನಗರಪಾಲಿಕೆಗಳ ನೌಕರರುತನ್ನೆಲ್ಲಾ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಿ ಮುಷ್ಕರದಲ್ಲಿ ಪಾಲ್ಗೊಳ್ಳತಿದೆ ಎಂದರು.
ನಿಯಮಾವಳಿಗಳ ಪ್ರಕಾರ ಪ್ರತಿ ಮೂರು ವರ್ಷಕ್ಕೊಮ್ಮೆ ವೃಂದ ಮತ್ತು ನೇಮಕಾತಿ ನಿಮಯಗಳ ತಿದ್ದುಪಡಿ ಮಾಡಬೇಕಾಗಿದೆ. ಆದರೆ ೧೫ ವರ್ಷ ಕಳೆದರೂ ತಿದ್ದುಪಡಿ ಸಾಧ್ಯವಾಗಿಲ್ಲ.ಇದರಿಂದ ಮಹಾನಗರಪಾಲಿಕೆಯಲ್ಲಿ ಕೆಲಸ ಮಾಡುವ ನೌಕರರಿಗೆ ಮುಂಬಡ್ತಿ,ನೇರ ನೇಮಕಾತಿಗಳನ್ನು ಸಾಕಷ್ಟು ಅನ್ಯಾಯವಾಗಿದೆ.ಬಹುತೇಕ ಹುದ್ದೆಗಳಿಗೆ ಎರವಲು ಸೇವೆಯನ್ನೇ ಬಳಸಿ ಕೊಳ್ಳುವುದರಿಂದ ಹತ್ತಾರು ವರ್ಷಗಳಿಂದ ಒಂದೇ ಹುದ್ದೆಯಲ್ಲಿ ಕೆಲಸ ಮಾಡುವುದಲ್ಲದೆ,ವೇತನದಲ್ಲಿ ಸಾಕಷ್ಟು ವೆತ್ಯಾಸಕಂಡು ಬಂದಿದೆ.ಇದರ ಬಗ್ಗೆ ಹಲವಾರು ಬಾರಿ ಸರಕಾರಕ್ಕೆ, ಸಂಬAಧಪಟ್ಟ ಮಂತ್ರಿಗಳಿಗೆ,ಎಲ್ಲಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.ಕಪ್ಪು ಪಟ್ಟಿ ಧರಿಸಿ ಕಾರ್ಯನಿರ್ವಹಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದರೂ ಪ್ರಯೋಜನವಾಗಿಲ್ಲ.ಹಾಗಾಗಿ ಹೋರಾಟವೊಂದೇ ನಮ್ಮ ಮುಂದಿರುವದಾರಿಯಾಗಿದೆಎAದುಅಮೃತರಾಜ್ ನುಡಿದರು.
ರಾಜ್ಯ ಸರಕಾರತನ್ನ ನೌಕರರಿಗೆಜಾರಿಗೆತಂದಿರುವಆರೋಗ್ಯ ಸಂಜಿವಿನಿ ಯೋಜನೆಯನ್ನು ಮಹಾನಗರಪಾಲಿಕೆ ನೌಕರರಿಗೂ ವಿಸ್ತರಿಸಬೇಕುಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ.ಜನರೊಂದಿಗೆ ಬೇರೆತು ಕೆಲಸ ಮಾಡುವ ಪಾಲಿಕೆಯಆರೋಗ್ಯ ಅಧಿಕಾರಿಗಳು, ನಿರೀಕ್ಷಕರು, ಕಂದಾಯ ಅಧಿಕಾರಿಗಳು, ಪೌರಕಾರ್ಮಿಕರುಗಳಿಗೆ ಆರೋಗ್ಯ ಸಂಜೀವಿನಿ ಯೋಜನೆಅತಿಅಗತ್ಯವಾಗಿದೆ.ಈಗಿರುವ ಮರು ಪಾವತಿಯೋಜನೆಯಲ್ಲಿಒಂದುಖರ್ಚು ಮಾಡಿದರೆ ಶೇ೩೫ ರಷ್ಟು ಮಾತ್ರ ವಾಪಸ್ ಬರುತ್ತದೆ. ಸಣ್ಣ ಪುಟ್ಟ ಹುದ್ದೆಯಲ್ಲಿ ಕೆಲಸ ಮಾಡುವ ನೌಕರರಿಗೆಇದರಿಂದ ಬಹಳ ತೊಂದರೆಯಾಗಲಿದೆ ಹಾಗಾಗಿ ನಮಗೆ ಆರೋಗ್ಯ ಸಂಜೀವಿನಿ ಯೋಜನೆಯನ್ನುತುರ್ತಾಗಿ ವಿಸ್ತರಿಸಬೇಕುಎಂದರು.
ಅದೇರೀತಿ ಸರಕಾರಿ ನೌಕರರಿಗೆಇರುವಂತೆಕೆಜಿಇಡಿ , ಜಿ.ಪಿ.ಎಫ್. ಸೌಲಬ್ಯವನ್ನು ಪಾಲಿಕೆ ನೌಕರರಿಗೆ ಜಾರಿಗೊಳಿಸಬೇಕು. ಪ್ರತಿವರ್ಷ ಸರಕಾರಿ ನೌಕರರಕ್ರೀಡಾಕೂಟದಲ್ಲಿ ಮಹಾನಗರಪಾಲಿಕೆ ನೌಕರರಿಗೂಆಯೋಜಿಸಬೇಕು.ಹಲವಾರು ವರ್ಷಗಳಿಂದ ಮುಂಬಡ್ತಿಗೆ ವಂಚಿತರಾಗಿರುವ ನೌಕರರಿಗೆ ಮುಂಬಡ್ತಿ ನೀಡಬೇಕೆಂದು ಆಗ್ರಹಿಸಿ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.ರಾಜ್ಯದ ೧೦ ಮಹಾನಗರಪಾಲಿಕೆಗಳ ನೌಕರರು ಕೆಲಸ ಸ್ಥಗಿತಗೊಳಿಸಿ ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುವ ಮುಷ್ಕರದಲ್ಲಿ ಪಾಲ್ಗೊಳ್ಳಬೇಕು.ಅನಿವಾರ್ಯ ಕಾರಣಗಳಿಂದ ಪಾಲ್ಗೊಳ್ಳಲು ಸಾಧ್ಯವಾಗದ ನೌಕರರುತಾವುಕಾರ್ಯನಿರ್ವಹಿಸುವ ಪಾಲಿಕೆಯಆಯುಕ್ತರಕಚೇರಿ ಮುಂಭಾಗದಲ್ಲಿಯೇತಮ್ಮ ಬೇಡಿಕೆಗಳ ಫಲಕಗಳೊಂದಿಗೆ ಪ್ರತಿಭಟನೆ ನಡೆಸುವಂತೆಅಮೃತರಾಜ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿಕರ್ನಾಟಕರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘಗಳ ಪರಿಷತ್ತ್(ರಿ)ನ ಉಪಾಧ್ಯಕ್ಷಜಿ.ವೆಂಕಟರಾಮ್, ಪ್ರಧಾನ ಕಾರ್ಯದರ್ಶಿ ಟಿ,ಇ.ಬಸವರಾಜಯ್ಯ,೧೦ ಪಾಲಿಕೆಗಳ ಅಧ್ಯಕ್ಷರು, ಪದಾಧಿಕಾರಿಗಳು,ಮಹಿಳಾ ಸದಸ್ಯರುಗಳು, ಪಾಲ್ಗೊಂಡಿದ್ದರು.