ಶಿರಾ: ಪ್ರಪ0ಚದಲ್ಲಿ ಹಿರಿಯ ನಾಗರೀಕರ ಸಂತತಿ ಹೆಚ್ಚಾಗುತ್ತಿದೆ ನಮ್ಮ ಭಾರತ ದೇಶ ಒಂದರಲ್ಲೇ ೨೨ ಕೋಟಿ ಹಿರಿಯ ನಾಗರೀಕರಿದ್ದಾರೆ, ಆದರೆ ಅವರಲ್ಲಿ ಎರಡು ಕೋಟಿ ಜನಕ್ಕೆ ಮಾತ್ರ ನಿವೃತ್ತಿ ವೇತನ ಬರುತ್ತಿದೆ. ನಮ್ಮ ರಾಜ್ಯದಲ್ಲಿರುವ ಹಿರಿಯ ನಾಗರಿಕರ ಆರೋಗ್ಯ, ಭದ್ರತೆ , ಕಾನೂನು ಸೌಲಭ್ಯ ಹಾಗೂ ಇತರೆ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಮೂರುವರೆ ವರ್ಷದ ಕೆಳಗೆ ವಯಾ ವಿಕಾಸ್ ಸಂಸ್ಥೆ ಪ್ರಾರಂಭಿಸಲಾಯಿತು. ನೀವೆಲ್ಲರೂ ಈ ಸಂಸ್ಥೆಯ ಸದಸ್ಯತ್ವ ಪಡೆದುಕೊಳ್ಳಿ ಎಂದು ವಯಾ ವಿಕಾಸ್ ಸಂಸ್ಥೆಯ ಮುಖ್ಯ ಸಲಹೆಗಾರ ಎಚ್. ಶ್ರೀನಿವಾಸ್ ಹಿರಿಯ ನಾಗರಿಕರಿಗೆ ಕರೆ ನೀಡಿದರು.
ಗುರುವಾರದಂದು ಶಿರಾ ನಗರದ ನಿವೃತ್ತಿ ನೌಕರರ ಭವನದಲ್ಲಿ ವಯಾ ವಿಕಾಸ್ ಸಂಸ್ಥೆ, ಡಿಮನ್ಸಿಯಾ ಇಂಡಿಯಾ ಅಲಿಯನ್ಸ್ ಹಾಗೂ ಶಿರಾ ತಾಲೂಕಿನ ನೌಕರರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆಯುಷ್ಮಾನ್ ಹೆಲ್ತ್ ಕಾರ್ಡ್ ವಿತರಣೆ ಹಾಗೂ ಸ್ಪರ್ಶ ಹಾಸ್ಪಿಟಲ್ ವೈದ್ಯರಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಂತ ಈಗಾಗಲೇ ಒಂದು ಲಕ್ಷದ ಇಪ್ಪತ್ತೆöÊದು ಸಾವಿರ ಸದಸ್ಯರನ್ನು ನೋಂದಣಿ ಮಾಡಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ್ಯಂತ ಕಾರ್ಯಕ್ರಮ ರೂಪಿಸಿ ನೊಂದಣಿ ಮಾಡಿಕೊಳ್ಳಲಾಗುತ್ತದೆ. ನಮ್ಮ ಸಂಸ್ಥೆಯು ಸರ್ಕಾರದಿಂದ ಹಿರಿಯ ನಾಗರಿಕರಿಗೆ ನೀಡುವ ಸೌಲಭ್ಯ ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ತಲುಪುವಂತೆ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಉಚಿತ ಕಣ್ಣಿನ ತಪಾಸಣೆ ಹಾಗೂ ಸಾಮಾನ್ಯವಾಗಿ ಹಿರಿಯ ನಾಗರಿಕರಿಗೆ ಕಾಡುವ ಮರೆವಿನ ಕಾಯಿಲೆ ಬಗ್ಗೆ ಸ್ಕಾö್ಯನಿಂಗ್ ಮಾಡಲಾಯಿತು.
ಈ ಸಂದರ್ಭದಲ್ಲಿ ವಯಾ ವಿಕಾಸ್ ಕೇಂದ್ರದ ಹಿರಿಯ ಸಲಹೆಗಾರ ಶ್ರೀನಿವಾಸ್ ಎಂ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಣಿಕಂಡನ್, ಸ್ಪರ್ಶ ಹಾಸ್ಪಿಟಲ್ ವಿವೇಕ್, ಡಿಮೆನ್ಸಿಯಾ ಇಂಡಿಯಾ ಅಲಯನ್ಸ್ ಮುಖ್ಯ ಸಂಪರ್ಕ ಅಧಿಕಾರಿ ಆನಂದ್, ಡಾಕ್ಟರ್ ಪ್ರಿಯ ,ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೆ. ಹನುಮಂತ ರಾಯಪ್ಪ, ಉಪಾಧ್ಯಕ್ಷ ಕೃಷ್ಣಮೂರ್ತಿ, ಕಾರ್ಯದರ್ಶಿ ಶ್ರೀನಿವಾಸ್, ಎಸ್ ನಾಗರಾಜು, ನಾನ ನಾಯಕ್, ಗೋವಿಂದರಾಜು, ಎಚ್ ದಶರಥ್, ಮುಂತಾದವರು ಉಪಸ್ಥಿತರಿದ್ದರು.
(Visited 1 times, 1 visits today)