ಚಿಕ್ಕನಾಯಕನಹಳ್ಳಿ: ಸಹಕಾರ ನಾಯಕತ್ವದ ಹೆಜ್ಜೆಯ ನಡೆಯನ್ನು ಇನ್ನರ್ ವಿಲ್ ಸಂಸ್ಥೆ ನೀಡಿತು ಈ ಮೂಲಕ ಪರಸ್ಪರ ಸೇವಾ ಸಹಕಾರ ನೀಡುವ ಮೂಲಕ ಮನಸುಗಳ ಸಮ್ಮಿಲನ ಕೇಂದ್ರವಾಗಿದೆ ಎಂದು ಇನ್ನರ್ವಿಲ್ ಸಂಸ್ಥೆಯ ಅಧ್ಯಕ್ಷ ಭವಾನಿ ಜಯರಾಮ್ ಹೇಳಿದರು
ರೋಟರಿ ಬಾಲಭವನದ ಕನ್ವೆನ್ಷನ್ ಹಾಲ್ ನಲ್ಲಿ ಇನ್ನರ್ವಿಲ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ನೂತನ ಅಧ್ಯಕ್ಷರ ಪದಾಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡುತ್ತಾ ಈ ಸಂಸ್ಥೆ ಸುಮಾರು ೪೪ ವರ್ಷಗಳನ್ನು ದಾಟಿದ್ದು ನಿರಂತರ ಸೇವೆಗಳನ್ನು ಮಾಡುವ ಮೂಲಕ ರೋಟರಿ ಸಂಸ್ಥೆಯ ಸಹಭಾಗತ್ವ ಸಂಸ್ಥೆಯಾಗಿ ನಿರಂತರವಾಗಿದ್ದು ಹಿರಿಯರ ಮಾರ್ಗದರ್ಶನದಲ್ಲಿ ನನ್ನ ಅವಧಿಯಲ್ಲಿ ಸಾಕಷ್ಟು ಜನಪರ ಸೇವಾ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿರಲು ನನ್ನ ಸಹಪಾಠಿಗಳ ಸಹಕಾರತ್ವವೇ ಕಾರಣವಾಗಿದೆ ಎಂದರು
ಸAಘದ ಕಾರ್ಯದರ್ಶಿ ಶ್ರೀ ಲಕ್ಷ್ಮಿ ಮಾತನಾ ಡುತ್ತಾ ಸೇವಾ ಯೋಜನೆಯ ವರದಿಯನ್ನು ನೀಡಿದರು.
ನೂತನ ಸಂಘದ ಅಧ್ಯಕ್ಷರಾಗಿ ಶಶಿಕಲಾ ಜೈದೇವ್ ಅಧಿಕಾರ ಸ್ವೀಕರಿಸಿ ಮಾತನಾಡುತ್ತಾ ನಮ್ಮ ಸಂಘದಲ್ಲಿ ಸದಸ್ಯರ ಸಂಖ್ಯೆ ಹೆಚ್ಚಿದ್ದು ಎಲ್ಲರ ಸೇವೆ ಸಹಕಾರ ಪಡೆಯುವ ಮೂಲಕ ಹೆಚ್ಚಿನ ಸೇವೆಗೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ ಈ ಮೂಲಕ ಹಲವು ಯೋಜನೆಗಳನ್ನು ರೂಪಿಸಿಕೊಂಡು ಜನಪರ ಕಾರ್ಯಕ್ರಮಗಳನ್ನು ತರುವಲ್ಲಿ ಮುನ್ನುಗ್ಗುತ್ತೇವೆ ಎಂದರು
ಈ ಸಂದರ್ಭದಲ್ಲಿ ಕಿರುತೆರೆಯ ಮಹಾನಟಿ ಕಾರ್ಯಕ್ರಮದ ಸ್ಪರ್ಧಿಯಾಗಿರುವ ದೀಪಿಕಾ ಇವರನ್ನು ಸಮಾರಂಭದಲ್ಲಿ ಸನ್ಮಾನಿಸುವ ಮೂಲಕ ಗೌರವಿಸಿದರು ಸನ್ಮಾನ ಸ್ವೀಕರಿಸಿದ ದೀಪಿಕಾ ಮಾತನಾಡುತ್ತಾ ಇಂತಹ ಸಂಘ ಸಂಸ್ಥೆಗಳು ಸಾಧಕರ ಬೆನ್ನೆಲುಬಾಗಿ ಇರಲು ಇನ್ನು ಹೆಚ್ಚು ಹೆಚ್ಚು ಹುಟ್ಟುಕೊಳ್ಳಬೇಕು ಇಂತಹ ಸಹಕಾರ ಮನೋಭಾವ ಪ್ರತಿ ಹಳ್ಳಿಗಳಿಗೂ ಮುಟ್ಟುವ ರೀತಿಯಲ್ಲಿ ಮುನ್ನಡೆಯಬೇಕು ಸ್ನೇಹ ಸಹಕಾರದ ನಡುವೆ ಸೇವೆ ನಡೆದುಕೊಂಡು ಹೋಗುತ್ತಿದೆ ಇಂತಹ ಉತ್ತಮ ಸಂಘ ಸಂಸ್ಥೆಗಳಲ್ಲಿ ನಾವು ಕೂಡ ಗುರುತಿಸಿಕೊಂಡು ಮುಂದಿನ ಯುವ ಪೀಳಿಗೆಗೆ ಮಾರ್ಗಸೂಚಿಯಾಗ ಬೇಕು ಎಂದರು
ನೂತನ ಕಾರ್ಯದರ್ಶಿ ಚಂದ್ರಿಕಾ ಕೃಷ್ಣ ಮೂರ್ತಿ ವಾರ್ಷಿಕ ವರದಿ ನೀಡುವ ಮೂಲಕ ಸಂಸ್ಥೆಯ ಉದ್ದೇಶಗಳನ್ನು ಬಹಿರಂಗಪಡಿಸಿದರು
ಸಮಾರAಭದಲ್ಲಿ ಇನ್ನರ್ವಿಲ್ ಸಂಸ್ಥೆಯ ಸಂಸ್ಥಾಪಕರುಗಳಾದ ಗಾಯಿತ್ರಿಧ್ರುವಕುಮಾರ್ ನಾಗರತ್ನ ನಾಗರಾಜ್ ರಾವ್ ಪುಷ್ಪ ಶಿವಣ್ಣ ರೋಟರಿ ಅಧ್ಯಕ್ಷ ಮಹಾಲಿಂಗಯ್ಯ ಖಜಾಂ ಚಿಯಾದ ಶಿಲ್ಪ ಧರ್ಣೀಶ್ ಕೃಪಾದೇವಿ ಮಮತಾ ರೇಣುಕಾಸಣ್ಣ ಮುದ್ದಯ್ಯ ವೀಣಾ ಶಂಕರ್ ರಾಧಾಸಣ್ಣಪ್ಪ ತೇಜಾವತಿ ಎನ್ನು ಮೊದಲಾದವರು ಉಪಸ್ಥಿತರಿದ್ದರು
ಕಿರುತೆರೆಯ ನಟಿ ದೀಪಿಕಾ ಅವರನ್ನು ಇನ್ನರ್ ವಿಲ್ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಿದ ಸಂದರ್ಭದಲ್ಲಿ ಇನ್ನರ್ ವಿಲ್ನ ನೂತನ ಅಧ್ಯಕ್ಷ ಶಶಿಕಲಾ ಜಯದೇವ್ ಭವಾನಿ ಜೈರಾಮ್ ರೋಟರಿ ಅಧ್ಯಕ್ಷ ಮಾಲಿಂಗಯ್ಯ ಸಂಸ್ಥಾಪಕರಾದ ಗಾಯತ್ರಿ ನಾಗರತ್ನ ಮುಂತಾದವರು ಇದ್ದರು.
(Visited 1 times, 1 visits today)