ತುಮಕೂರು :
ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಶ್ರೀಗಳು ಬೇಗ ಹುಷಾರಾಗಲಿ ಎಂದು ಬಾಹುಬಲಿ ಪ್ರಾರ್ಥನೆ ಮಾಡಿದ್ದೇವೆ ಶ್ರವಣ ಬೆಳಗೊಳದ ಚಾರುಕೀರ್ತ ಭಟ್ಟಾರಕ ಸ್ವಾಮೀಜಿ ಹೇಳಿದ್ದಾರೆ.
ಇಂದು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಶ್ರೀಗಳು ಬೇಗ ಹುಷಾರಾಗಲಿ ಎಂದು ಬಾಹುಬಲಿ ಪ್ರಾರ್ಥನೆ ಮಾಡಿ ಬಂದಿದ್ದೇವೆ, ನಾಡಿನ ಶ್ರೇಷ್ಟ ಹಿರಿಯಜ್ಜ ಸಿದ್ದಗಂಗಾ ಶ್ರೀಗಳಿಗೆ ಆರೋಗ್ಯ ಭಾಗ್ಯ ಸಿಗಲಿ ಎಂದು ತಿಳಿಸಿದ್ದಾರೆ.
ಇನ್ನೂ ಸ್ವಾಮೀಜಿಗಳ ಆರೋಗ್ಯ ನಿನ್ನೆಗಿಂತ ಇಂದು ಸುಧಾರಣೆಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಮ್ಮ ನಾಡಿನ ಶ್ರೇಷ್ಟ ಸ್ವಾಮೀಜಿಗಳಲ್ಲಿ ಸಿದ್ದಗಂಗಾ ಶ್ರೀಗಳಿಗೆ ಬಹಳ ಗೌರವ ಇದೆ. ಮಠದ ಕೊಡುಗೆ ಅರ್ಥಭರಿತ ಸಾಧನೆಯಾಗಿದೆ ಎಂದು ಹೇಳಿದ್ದಾರೆ.
(Visited 28 times, 1 visits today)





