ಚಿಕ್ಕನಾಯಕನಹಳ್ಳಿ: ಸರ್ಕಾರಿ ಯೋಜನೆಗಳು ನೈಜ ಪಲಾನುಭವಿಗಳಿಗೆ ತಲುಪಿದಾಗ ಮಾತ್ರ ಆ ಯೋಜನೆ ರೂಪಿಸಿದ್ದಕ್ಕು ಸಾ ರ್ಥಕ ರೈತರು ಇಂತಹ ಯೋಜನೆಗಳನ್ನು ಸದ್ಬ ಳಕೆ ಮಾಡಿಕೊಂಡು ಕೃಷಿಯಲ್ಲಿ ಸ್ವಾವಲಂಬಿ ಸಾಧಿ ಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ತೀನಂಶ್ರೀ ಭವನದ ಆವರಣದಲ್ಲಿ ಸೋಮವಾರ ಕೃಷಿ ಇಲಾಖೆಯವತಿಯಿಂದ ರೈತರಿಗೆ ಬಿತ್ತನೆ ಕೂರಿಗೆಗಳನ್ನು ವಿತರಿಸಿ ಮಾತನಾಡಿದ ಅವರು ನಮ್ಮ ಹಳೆಯ ವ್ಯವಸಾಯ ಪದ್ದತಿಯಿಂದ ನಮ್ಮ ದೇಶದಲ್ಲಿ ಆಹಾರದ ಸಮಸ್ಯೆ ಉಂಟಾದ ಸಂದರ್ಭದಲ್ಲಿ ಹಸಿರು ಕ್ರಾಂತಿಯ ಮೂಲಕ ಅತ್ಯಾದುನಿಕ ತಂತ್ರಜ್ಞಾನಗಳನ್ನು ಬಳಸಿ ಆಹಾರ ಸಮಸ್ಯೆಯನ್ನು ಬಗೆಹರಿಸಲಾಯಿತು ಇಂದು ನಮ್ಮ ದೇಶ ಆಹಾರದ ಉತ್ಪಾದನೆಯಲ್ಲಿ ಸ್ವವಲಂಬಿ ಸಾಧಿಸುವುದರೊಂದಿಗೆ ಬೇರೆ ರಾಷ್ಟ್ರಗಳಿಗೆ ಕೇಲವು ಆಹಾರದ ವಸ್ತುಗಳನ್ನು ರಪ್ತು ಮಾಡುತ್ತಿದೆ ಈ ನಿಟ್ಟಿನಲ್ಲಿ ನಮ್ಮ ರೈತರು ಇಂತಹಅದುನಿಕ ತಂತ್ರಾಜ್ಞಾನ ಕೂರಿಗೆ ಯಂತ್ರಗಳನ್ನು ನೀಡಿದ್ದು ಇವುಗಳನ್ನು ಬಳಸಿಕೊಂಡು ಬಿತ್ತನೆ ಮಾಡಿ ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಸ್ವಾವ ಲಂಬಿಗಳಾಗಿ ಎಂದರು.
ಈ ಸಂದರ್ಭದಲ್ಲಿ ಸಹಾಯಕ ಕೃಷಿ ನಿರ್ದೆಶಕ ಶಿವರಾಜ್ ಕುಮಾರ್ ಮಾತನಾಡಿ ಇಂದು ವಿತರಿಸುವಂತಹ ಬಿತ್ತನೆ ಕೂರಿಗೆಗಳಿಂದ ಅನೇಕ ಉಪಯೋಗಗಳಿದ್ದು ಇವುಗಳಿಂದ ಏಕಕಾಲ ದಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಭೂಮಿಗೆ ಹಾಕಬಹುದು. ನಿಗದಿತ ಆಳ ಹಾಗೂ ಅಳತೆಯಲ್ಲಿ ಬಿತ್ತುವುದರಿಂದ ಉತ್ತಮ ಮೊಳಕೆ ಪ್ರಮಾಣವನ್ನು ಪಡೆಯಬಹುದು, ಒಂದೇ ಉಪಕರಣದ ಸಹಾಯದಿಂದ ಬಿತ್ತನೆ ಬೀಜ ಹಾಗೂ ರಸಗೊಬ್ಬರವನ್ನು ಬಿತ್ತುವುದರಿಂದ ಮಾನವರ ಅವಲಂಬನೆ ಕಡಿಮೆ ಮಾಡಬಹುದಾಗಿದೆ. ಹಾಗೂ ಸಮಯ ಉಳಿತಾ ಯವಾಗುತ್ತದೆ. ಹಾಗೂ ಕಳೆ ನಿರ್ವಹಣೆಗೆ ಸಹಕಾರಿಯಾಗುತ್ತದೆ. ಈ ಯಂತ್ರವು ೯ ಹಲ್ಲಿನ ಟ್ರ‍್ಯಾಕ್ಟರ್ ಚಾಲಿತ ಬಿತ್ತನೆ ಕೂರಿಗೆಯಾಗಿದ್ದು ಇದರ ವೆಚ್ಚ ರೈತರ ವಂತಿಕೆ ೬೬೦೦೦/- ರೂಗಳಾಗಿದ್ದು, ಸರ್ಕಾರದ ಸಹಾಯಧನ ರೂ ೫೫೦೦೦/- ರೂಗಳಾಗಿದ್ದು ಇದನ್ನು ಪಡೆಯಲು ರೈತರು ಅರ್ಜಿ ನಮೂನೆ ಯೊಂದಿಗೆ ಜಮೀನಿನ ಪಹಣಿ ಜೆರಾಕ್ಸ್ ಪ್ರತಿ, ಆಧಾರ್ ಜೆರಾಕ್ಸ್ ಪ್ರತಿ, ಛಾಪಾ ಕಾಗದ (೧೦೦ರೂ), ಪಾಸ್ ಪೋರ್ಟ್ ಸೈಜ್ ಪೋಟೋ, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್, ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಾಗಿದ್ದಲ್ಲಿ ಜಾತಿ ಪ್ರಮಾಣ ಪತ್ರ, ಟ್ರ‍್ಯಾಕ್ಟರ್ ಆರ್.ಸಿ ಬುಕ್ ಜೆರಾಕ್ಸ್ ಪ್ರತಿ ದಾಖಲೆಗಳನ್ನು ಈ ಯಂತ್ರ ಅವಶ್ಯವಿರುವ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಸಲ್ಲಿಸಬಹುದಾಗಿದೆ ಯಂತ್ರಗಳನ್ನು ಅರ್ಜಿಯ. ಜೇಷ್ಠತೆಯ ಆಧಾರದ ಮೇಲೆ ಉಪಕರಣವನ್ನು ನೀಡಲಾಗುವುದು.ಎಂದರು.
ಈ ಸಂದರ್ಭಧಲ್ಲಿ ಗ್ರೇಡ್-೨ ತಹಸೀಲ್ದಾರ್ ಕೀರ್ತಿ, ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

(Visited 1 times, 1 visits today)