ತುರುವೇಕೆರೆ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಲ್ಲಿ ತಾಲೂಕಿನಿಂದ ಸುಮಾರು ೨.೫೧ ಕೋಟಿಗೂ ಅಧಿಕ ಮಹಿಳೆಯರು ರಾಜ್ಯದ ವಿವಿಧೆಡೆಗೆ ಪ್ರಯಾಣ ಬೆಳೆಸಿದ್ದಾರೆಂದು ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗುಡ್ಡೇನಹಳ್ಳಿ ಪ್ರಸನ್ನ ತಿಳಿಸಿದರು.
ಶಕ್ತಿ ಯೋಜನೆಯಡಿ ೫೦೦ ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದ ಅವರು ರಾಜ್ಯ ಸರ್ಕಾರ ೧೧-೬-೨೩ ರಿಂದ ಶಕ್ತಿ ಯೋಜನೆಯನ್ನು ಜಾರಿಗೆ ತಂದಿತ್ತು. ೩೦-೫-೨೫ ರವರೆಗೆ ತುರುವೇಕೆರೆಯ ಡಿಪೋ ಬಸ್ ನಲ್ಲಿ ೩.೬೨.೦೪೯೧೨ ಮಂದಿ ಮಹಿಳೆಯರು ಮತ್ತು ಪುರುಷರು ಸೇರಿ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಇದರಲ್ಲಿ ೨.೫೧.೩೮,೬೫೨ ಮಂದಿ ಮಹಿಳೆಯರೇ ಇದ್ದಾರೆ. ಜಿಲ್ಲೆಯೊಳಗೆ ಪ್ರಯಾಣಿಸಿರುವ ಮಹಿಳೆಯರ ಸಂಖ್ಯೆ ೧,೬೨,೩೧,೦೧೦ ಮಂದಿ. ಜಿಲ್ಲೆಯ ಹೊರಗೆ ಪ್ರಯಾಣಿಸಿರುವ ಮಹಿಳೆಯರ ಸಂಖ್ಯೆ ೮೯,೦೭೬೪೨ ಮಂದಿ. ಒಟ್ಟು ಈ ಪ್ರಯಾಣದಿಂದ ಕೆ ಎಸ್ ಆರ್ ಟಿ ಸಿ ಗೆ ಸರ್ಕಾರದಿಂದ ೭,೯೭ ಕೋಟಿಗಳನ್ನು ಬೇಡಿಕೆ ಸಲ್ಲಿಸಲಾಗಿದೆ ಎಂದು ಗುಡ್ಡೇನಹಳ್ಳಿ ಪ್ರಸನ್ನ ಕುಮಾರ್ ತಿಳಿಸಿದರು. ಈ ವೇಳೆ ಡಿಪೋ ಮ್ಯಾನೇಜರ್ ತಮ್ಮಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿಯ ಸದಸ್ಯರಾದ ಜವರಪ್ಪ, ಗವಿರಂಗಯ್ಯ, ಲಕ್ಷ್ಮೀದೇವಮ್ಮ, ಕೀರ್ತಿ ರಾಜ್, ಪುರುಷೋತ್ತಮ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಪಟ್ಟಣ ಪಂಚಾಯಿತಿ ಸದಸ್ಯರಾದ ಯಜಮಾನ್ ಮಹೇಶ್, ರುದ್ರೇಶ್, ಮಾಜಿ ಸದಸ್ಯರಾದ ಟಿ.ಎನ್.ಶಶಿಶೇಖರ್, ಗುಡ್ಡೇನಹಳ್ಳಿ ನಂಜುAಡಪ್ಪ, ಡಿ.ಪಿ.ವೇಣುಗೋಪಾಲ್, ಸ್ವಾಮಿ ಸೇರಿದಂತೆ ಹಲವಾರು ಕಾಂಗ್ರೆಸ್ ಮುಖಂಡರು ಇದ್ದರು.
(Visited 1 times, 1 visits today)