ಹುಳಿಯಾರು: ವರ್ಷಕ್ಕೆ ಎರಡ್ಮೂರು ಬಾರಿ ಹುಳಿಯಾರು ಪಟ್ಟಣ ಪಂಚಾಯ್ತಿಯ ವಾಣಿಜ್ಯ ಮಳಿಗೆಗಳ ವಿಚಾರ ಮುನ್ನೆಲೆಗೆ ಬರುತ್ತದೆ. ಕಳೆದ ವರ್ಷ ಹರಾಜು ಹಾಕುವ ನೆಪವೊಡಿ ಏಕಾಏಕಿ ಮಳಿಗೆಗಳಿಗೆ ಬೀಗ ಹಾಕಿ ಮರುದಿನವೇ ಹಾಕಿದ್ದ ಬೀಗವನ್ನು ಪಂಚಾಯ್ತಿ ಅಧಿಕಾರಿಗಳೇ ತೆಗೆದು ಸುದ್ದಿಯಾಗಿತ್ತು. ಕಳೆದ ಐದಾರು ತಿಂಗಳ ಹಿಂದಷ್ಟೆ ಕೆಲ ಮಳಿಗೆಗಳನ್ನು ದುರಸ್ಥಿ ಮಾಡುವ ನಿಟ್ಟಿನಲ್ಲಿ ತೆರವು ಮಾಡುವಂತೆ ನೋಟಿಸ್ ನೀಡಿ ಸುದ್ದಿಯಾಗಿತ್ತು. ಈಗ ಬಾಡಿಗೆ ಬಾಕಿ ವಸೂಲಿಗೆ ಬೀಗ ಸಮೇತ ಬಂದು ಮತ್ತೊಮ್ಮೆ ಸುದ್ದಿಯಾಗಿದೆ.
ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ನಾಗಭೂಷಣ್ ಹಾಗೂ ಆರ್‌ಐ ಶೃತಿ ಬನಾರ ಅವರ ನೇತೃತ್ವದಲ್ಲಿ ಬೀಗಗಳ ಸಮೇತ ಪೌರಕಾರ್ಮಿಕರು ದಂಡು ಕರೆದುಕೊಂಡು ಬುಧವಾರ ಬೆಳಗ್ಗೆಯಿಂದಲೇ ಬಾಡಿಗೆ ವಸೂಲಿಗೆ ಮುಂದಾಗಿತ್ತು. ಮಳಿಗೆಗಳನ್ನು ಪಡೆದು ವ್ಯಾಪಾರ ವಹಿವಾಟು ಮಾಡಿ ಅನುಕೂಲ ಮಾಡಿಕೊಂಡಿರುವ ಬಾಡಿಗೆದಾರರೇ ಸ್ವಯಂ ಪ್ರೇರಣೆಯಿಂದ ಬಾಡಿಗೆ ಕಟ್ಟಬೇಕು. ಆದರೆ ಸಿಬ್ಬಂದಿಯೇ ಎಷ್ಟು ಬಾರಿ ಅಲೆದರೂ ಬಾಡಿಗೆ ಕಟ್ಟದೆ ಸತಾಯಿಸುತ್ತಿದ್ದಾರೆ. ಕೆಲವರದ್ದು ಮರ‍್ನಲ್ಕು ವರ್ಷಗಳಿಂದ ಬಾಕಿ ಇದೆ ಎಂದು ಆರೋಪಿಸಿ ಬಾಡಿಗೆ ಕೊಡಿ ಇಲ್ಲವಾದಲ್ಲಿ ಬೀಗ ಹಾಕುತ್ತೇವೆಂದು ಎಚ್ಚರಿಸಿದರು.
ಇದಕ್ಕೆ ಬಾಡಿಗೆದಾರು ಆಕ್ಷೇಪ ವ್ಯಕ್ತಪಡಿಸಿ. ಬಾಡಿಗೆ ಕಟ್ಟಿಸಿಕೊಳ್ಳಲು ಬರುವ ನಿಮ್ಮ ಸಿಬ್ಬಂದಿಯ ಬಳಿ ಮಳಿಗೆಗಳ ಬಾಡಿಗೆ ಬಾಕಿಯ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಅಲ್ಲದೆ ಈ ಹಿಂದೆ ನಾವು ಕಟ್ಟಿದ ಬಾಡಿಗೆ ಪುಸ್ತಕದಲ್ಲಿ ಜಮೆ ಆಗಿಲ್ಲ. ಮರ‍್ನಲ್ಕು ವರ್ಷದ್ದು ಬಾಕಿ ಇದೆ ಎಂದು ಚೀಟಿಯಲ್ಲಿ ಬರೆದುಕೊಡುತ್ತಾರೆ. ನಾವು ಈ ವರ್ಷ ಇಷ್ಟು ಹಣ ಕಟ್ಟಿದ್ದೇವೆಂದರೆ ರಸೀದಿ ಕೊಡಿ ಎಂದು ನಮ್ಮನ್ನೇ ಕೇಳುತ್ತಾರೆ. ರಸೀದಿ ಕೊಟ್ಟರೆ ಜಮೆ ಮಾಡಿಕೊಂಡು ಉಳಿದಿದನ್ನು ಕೊಡಿ ಎನ್ನುತ್ತಾರೆ. ಹಾಗಾದರೇ ರಸೀದಿ ಕಳೆದುಕೊಂಡವರ ಪಾಡೇನು ಎಂದು ಪ್ರಶ್ನಿಸಿ ನಿಮ್ಮ ಮೇಲಧಿಕಾರಿಗಳನ್ನು ಕರೆದುಕೊಂಡು ಬಾ ಎಂದು ಕಳಿಸಿದ್ದೇವೆ. ಅಲ್ಲದೆ ಆರ್‌ಐ ಮೇಡಂಗೆ ಡಿಸಿಬಿ ಪುಸ್ತಕ ತೆಗೆದುಕೊಂಡು ಬನ್ನಿ ಬಾಡಿಗೆ ಕಟ್ಟುತ್ತೇವೆಂದು ಪೋನ್ ಮಾಡಿದ್ದೇವೆ. ಆದರೆ ಇಷ್ಟು ವರ್ಷಗಳ ಕಾಲ ಬಂದು ಬಾಡಿಗೆ ಕಟ್ಟಿಸಿಕೊಳ್ಳದೆ ಈಗ ಏಕಾಏಕಿ ಬೀಗ ಹಿಡಿದುಕೊಂಡು ಬಂದು ನಮ್ಮನ್ನು ಅವಮಾನ ಮಾಡುತ್ತಿದ್ದೀರಿ ಎಂದರು.
ಇದಕ್ಕೆ ಮುಖ್ಯಾಧಿಕಾರಿ ನಾಗಬೂಷಣ್ ಅವರು ನಾನೇ ಖುದ್ದು ಬಂದಿದ್ದರೂ ಬಾಡಿಗೆ ಕಟ್ಟಿಲ್ಲ. ಹಾಗಾಗಿ ಕಟ್ಟುನಿಟ್ಟಾಗಿ ವಸೂಲಿಗೆ ಬಂದಿದ್ದೇವೆ. ಪಂಚಾಯ್ತಿಯಲ್ಲಿ ಸಿಬ್ಬಂದಿಯ ಸಮಸ್ಯೆ ಇರುವುದರಿಂದ ಎಂಟ್ರಿಯಲ್ಲಿ ತೊಂದರೆಯಾಗಿದೆ. ನಿಮ್ಮಲ್ಲಿ ಇರುವ ರಸೀದಿ ತೋರಿಸಿ ಬಾಕಿಯಲ್ಲಿ ಅದನ್ನು ಜಮೆ ಮಾಡಿ ಉಳಿದ ಬಾಕಿ ಹಣ ಪಾವತಿಸಿ ಎಂದರು. ಕೆಲವರ ಬಳಿ ರಸೀದಿ ಕಳೆದುಕೊಂಡಿದ್ದಾರೆ. ಅಲ್ಲದೆ ಕೆಲವರ ರಸೀಧಿಯನ್ನು ಆಡಿಟ್‌ಗೆ ಬಂದಿದ್ದಾರೆAದು ಬಿಲ್ ಕಲೆಕ್ಟರ್ ರಾಜಣ್ಣ ಕಲೆಕ್ಟ್ ಮಾಡಿಕೊಂಡು ಹೋಗಿದ್ದಾರೆ. ಹೋದವರು ಜಮೆ ಮಾಡದೆ ನಿರ್ಲಕ್ಷಿö್ಯಸಿದ್ದಾರೆ. ಹಾಗಾಗಿ ಬ್ಯಾಂಕ್ ಸ್ಟೇಟ್‌ಮೆಂಟ್ ತೆಗೆಸಿ ಅದರಲ್ಲಿ ಪಾವತಿಯಾಗಿರುವಂತೆ ಬಾಡಿಗೆ ಜಮೆ ಮಾಡಿಕೊಂಡು ಉಳಿದ ಬಾಕಿ ತಿಳಿಸಿದರೆ ಕಟ್ಟುತ್ತೇವೆ ಎಂದರು. ಕೆಲವರು ಬಾಡಿಗೆ ಕಟ್ಟಲು ಕಾಲವಕಾಶ ಕೇಳಿದರು. ಕೆಲವರು ಸ್ಥಳದಲ್ಲೇ ಚೆಕ್ ಬರೆದು ಬಾಡಿಗೆ ಕಟ್ಟಿದರು.

(Visited 1 times, 1 visits today)