ತುಮಕೂರು: ಸೈಬರ್ ಭದ್ರತಾ ಆಡಳಿತ ಘಟಕ ಸ್ಥಾಪನೆ ಸಾಮಾಜಿಕ ಜಾಲತಾಣದ ಸೈಬರ್ ಅಪರಾಧ ನಿಯಂತ್ರಣ ಸೇರಿದಂತೆ ಹಲವು ಯೋಜನೆಗಳಿಗೆ ಸಾಹೇ ವಿಶ್ವವಿದ್ಯಾಲಯ, ಸ್ಮಾರ್ಟ್ ಸಿಟಿ ತುಮಕೂರು, ಹಸ್ತಾಕ್ಷ ಲ್ಯಾಬ್ ಸಹಯೋಗದೊಂದಿಗೆ ಸೈಬರ್ ಭದ್ರತಾ ಆಡಳಿತ ಕೋಶದ ಸ್ಥಾಪನೆ, ಸೈಬರ್ ಭದ್ರತಾ ಉಪಕ್ರಮಗಳಿಗೆ ಭದ್ರತಾ ಲೆಕ್ಕಪರಿಶೋಧಕರು, ಮತ್ತು ಸೈಬರ್ ತಜ್ಞರನ್ನು ಸಕ್ರಿಯಗೊಳಿಸುವುದು, ಇಂಟರ್ನ್ಶಿಪ್‌ಗಳು ಮತ್ತು ಜಂಟಿ ಯೋಜನೆಗಳು ಸೇರಿದಂತೆ ಇತ್ಯಾದಿ ವಿಷಯಗಳನ್ನು ಕುರಿತಂತೆ ಒಡಂಬಡಿಕೆಗೆ ಗುರುವಾರ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಾಯಿತು.
ನಗರದ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಗುರುವಾರದಂದು ಏರ್ಪಟ್ಟ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ವಿ ಅಶೋಕ್ ಅವರು ತಂತ್ರಜ್ಞಾನದ ಸರಿಯಾದ ಬಳಕೆಯಿಂದ ಮಾನವ ಸಮಾಜವು ಸುಸಂಸ್ಕೃತವಾಗುತ್ತಾ ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿದೆ, ಆದರೆ ಅಪರಾಧ ಪ್ರವೃತ್ತಿಯ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಸಮಾಜಕ್ಕೆ ಹಾನಿ ಮಾಡುತ್ತಿದ್ದಾರೆ. ಸಮಾಜದ ಭದ್ರತೆಗೆ ಸುಧಾರಿತ ತಂತ್ರಜ್ಞಾನ ವ್ಯವಸ್ಥೆಯನ್ನು ಅಳವಡಿಸಿಕೊಂಡು ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ತಿಳಿಸಿದರು.
ಕಳ್ಳತನ ವಂಚನೆ ಅಪರಾಧಗಳು ಈಗ ಡಿಜಿಟಲ್ ರೂಪದಲ್ಲಿದ್ದು ಇದರಿಂದ ಎಲ್ಲ ವರ್ಗದ ನಾಗರಿಕರು ಎಚ್ಚರಿಕೆಯಿಂದ ತಂತ್ರಜ್ಞಾನವನ್ನು ಬಳಸುವಂತಹಹಾಗಬೇಕು ಫೇಸ್ಬುಕ್, ಇಮೇಲ್, ಟ್ವಿಟ್ಟರ್, ಇನ್ಸ್ಟಾಗ್ರಾಮ್, ವಾಟ್ಸಾಪ್ ಗ್ರೂಪ್ ಗಳಲ್ಲಿ ಬರುವ ಯಾವುದೇ ಲಿಂಕ್ಗಳನ್ನು ಪರಾಮರ್ಶೆ ಪರಿಶೀಲನೆ ಮಾಡದೆ ಓಪನ್ ಮಾಡಬಾರದು ಇದಕ್ಕಾಗಿ ಸುರಕ್ಷಿತವಾದ ತಂತ್ರಜ್ಞಾನದ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಬೇಕು ಎಂದು ಅವರು ಕಿವಿ ಮಾತು ಹೇಳಿದರು.
ಸುಧಾರಿತ ತಂತ್ರಾ0ಶವನ್ನು ಸರ್ಕಾರದ ಪೋಲಿಸ್ ಇಲಾಖೆ ಸೇರಿದಂತೆ ಎಲ್ಲಾ ಇಲಾಖೆಗಳು ಅಳವಡಿಸಿಕೊಂಡಿದ್ದು ನಾವು ಅಪರಾಧಿಗಳ ಪತ್ತೆಹಚ್ಚಲು ಅನೇಕ ವಿಧಾನದಲ್ಲಿ ಪ್ರಯತ್ನಿಸುತ್ತೇವೆ ಅದೇ ರೀತಿಯಾಗಿ ಸಾರ್ವಜನಿಕರು ಕೂಡ ಸುಧಾರಿತವಾದ ತಂತ್ರಾAಶವನ್ನು ತಾವು ಬಳಸುವ ಮೊಬೈಲ್, ಕಂಪ್ಯೂಟರ್ ಇತರ ಸಾಧನಗಳಲ್ಲಿ ಅಳವಡಿಸಿಕೊಂಡರೆ ಸೈಬರ್ ಅಪರಾಧವನ್ನು ತಡೆಗಟ್ಟಬಹುದಾಗಿದೆ, ಇಂದಿನ ಯುವ ಜನರು ವಿವಿಧ ರೀತಿಯ ತರಹೇವಾರಿ ರೀಲ್ಸ್ ï, ಫೋಟೋ ಡಿಸೈನ್ ಸೇರಿದಂತೆ ಇತರೆ ಬಳಸುವ ಮುನ್ನ ಮುಂಜಾಗ್ರತೆಯ ಕ್ರಮಗಳನ್ನು ಅನುಸರಿಸುವುದು ಸೂಕ್ಷ್ಮವಾಗಿರುವ ವಿಚಾರವಾಗಿದೆ ಎಂದು ಕೆ.ವಿ.ಆಶೋಕ್ ತಿಳಿಸಿದರು.
ತುಮಕೂರು ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಸ್ಮಾರ್ಟ್ ಸಿಟಿ ತುಮಕೂರಿನ ನಿರ್ದೇಶಕರಾದ ಬಿವಿ ಅಶ್ವಿಜಾ ಅವರು ಮಾತನಾಡಿ ಭಾರತದಲ್ಲಿ ತುಮಕೂರು ನಗರ ಏಳನೇ ಸ್ಮಾರ್ಟ್ ಸಿಟಿಯಾಗಿ ಹೊರಹೊಮ್ಮಿ ಅನೇಕ ಮಹತ್ತರವಾದ ಸಾಧನೆಗಳನ್ನು ಮಾಡಿದೆ ಇಂದು ತುಮಕೂರು ನಗರವನ್ನ ಡಿಜಿಟಲ್ ರೂಪದಲ್ಲಿ ಸಂರಕ್ಷಣೆ ಮಾಡುತ್ತಿದ್ದು ನಗರದ ಹೊರವಲಯ ಸೇರಿದಂತೆ ನಗರಕ್ಕೆ ಬರುವ ರಸ್ತೆಗಳಲ್ಲಿ ಹೈಜೆನಿಕ್ ಕ್ಯಾಮೆರಾ ಗಳನ್ನು ಅಳವಡಿಸಿ ಪ್ರತಿಯೊಂದು ಕಾರ್ಯ ಚಟುವಟಿಕೆಗಳನ್ನ ಕಣ್ಗಾವಲಿನಲ್ಲಿ ಕಾಯಲಾಗುತ್ತಿದ್ದು ನಗರದಲ್ಲಿ ಇದರಿಂದ ಅಪರಾಧ ಪ್ರಕರಣಗಳು ಸೇರಿದಂತೆಆರೋಪಿಗಳನ್ನು ಪತ್ತೆ ಮಾಡಲು ಸುಲಭವಾದ ವಿಧಾನಗಳನ್ನು ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
ತುಮಕೂರು ಸ್ಮಾರ್ಟ್ ಸಿಟಿಯಲ್ಲಿ ರಸ್ತೆ, ವೃತ್ತ ಗಳಲ್ಲಿ ೪೦೦ಡಿಜಿಟಲ್ ಕ್ಯಾಮೆರಾ ಇದ್ದು, ಇದಕ್ಕೆ ಪೂರಕವಾದ ಧ್ವನಿ ಪ್ರಕಟಣೆ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ, ಎಲ್ಲಾ ರೀತಿಯ ಚಟುವಟಿಕೆಗಳ ಬಗ್ಗೆ ಎಚ್ಚರ ವಹಿಸಲಾಗಿದೆ, ಸಾರ್ವಜನಿಕರು ಸುರಕ್ಷೀತವಾಗಿದ್ದು ,ತುಮಕೂರು ನಗರದಲ್ಲಿ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದೆ. ತುಮಕೂರು ನಗರ ಕ್ರಿಟಿಕಲ್ ಸೈಬರ್ ಸ್ಟ್ರಕ್ಚರ್ ಆಪ್ ಇಂಡಿಯಾ ಅಡಿಯಲ್ಲಿ ಸೂರತ್,ಪೂಣೆ,ಚೆನೈ ಮತ್ತು ತುಮಕೂರು ಸೇರಿ ನಾಲ್ಕು ಸ್ಮಾರ್ಟ್ ಸಿಟಿಗಳು ಆಯ್ಕೆಯಾಗಿವೆ. ಹೊರಗಿನ ಬೇರೆ ಬೇರೆ ನಗರಗಳಲ್ಲಿ ಅಕ್ರಮ ಚಟುವಟಿಕೆ, ವ್ಯವಸ್ಥೆಗಳನ್ನ ಇಲ್ಲಿಂದಲೇ ಮಾನಿ ಟೈಸಿಂಗ್ ಮಾಡಲಾಗುತ್ತಿದ್ದು ಅಮಟ್ಟಿಗೆ ತುಮಕೂರು ತಂತ್ರಜ್ಞಾನದ ಆವಿಷ್ಕಾರಗಳನ್ನು ಅಳವಡಿಸಿಕೊಂಡಿದೆ ಎಂದು ವಿವಿರಿಸಿದರು.
ತುಮಕೂರು ನಗರ ಸಂರಕ್ಷೀಸಲು ನಮ್ಮ ಸಿಬ್ಬಂದಿಗಳು ಇಪ್ಪತ್ತನಾಲ್ಕು ಗಂಟೆಗಳು ಸದಾ ಕೆಲಸ ಮಾಡುತ್ತಿದ್ದು ಯಾರಾದರೂ ತೊಂದರೆಗೆ ಒಳಾಗಾದರೆ ಕೋಡಲೇ ನಗರದ ವಿವಿಧ ಭಾಗಗಳಲ್ಲಿ ಅಳವಡಿಸುವ ಪ್ಯಾನಿಕ್ ಬಟನ್ (ಎಸ್‌ಓಎಸ್) ಒತ್ತಿ ಸಹಾಯ ಪಡೆಯಬಹುದಾಗಿದೆ ಈಗಾಗಲೆ ನಗರದಲ್ಲಿ ತೊಂದರೆಗೆ ಒಳಗಾದವರು ಈ ವ್ಯವಸ್ಥೆ ಯನ್ನ ಅಳವಡಿಸಿಕೊಂಡು ತೊಂದರೆಯಿAದ ಪರಾಗಿದ್ದಾರೆ ಇಂತಹ ಇನ್ನೂ ಅತ್ಯುನ್ನತ ತಂತ್ರಜ್ಞಾನ ವ್ಯವಸ್ಥೆಯನ್ನು ಶ್ರೀ ಸಿದ್ಧಾರ್ಥ ಇಂಜಿನಿಯರಿ0ಗ್ ಕಾಲೇಜಿನ ಸೈಬರ್ ಸೆಕ್ಯೂರಿಟಿ ವಿಭಾಗದ ಸಹಯೋಗದೊಂದಿಗೆ ಸೈಬರ್ ಭದ್ರತಾ ಆಡಳಿತ ಘಟಕ ಸ್ಥಾಪನೆ ಮಾಡಿ, ಅಲ್ಲಿ ಅಧ್ಯಯನ ನಡೆಸಲಾಗುತದೆ. ಆ ಮೂಲಕ ಇನ್ನಷ್ಟು ಸುಧಾರಿತ ತಂತ್ರಜ್ಞಾನದ ವ್ಯವಸ್ಥೆಯನ್ನು ಅಳವಡಿಸಿ ತುಮಕೂರು ನಗರವನ್ನ ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಐ ಟಿ ಪ್ರಾಂಶುಪಾಲರಾದ ಡಾ.ಎಂ.ಎಸ್ ರವಿಪ್ರಕಾಶ್, ಡೀನ್ ಡಾ.ರೇಣುಕಾಲತಾ, ಅಸ್ತಾಕ್ಷ ಲ್ಯಾಭ್ ನ ನಿದೇರ್ಶಕರಾದ ನಂದಿಧರ್ಮ ಕೀಶೋರ್, ಸ್ಟಾರ್ಟ್ ಆಫ್ ತುಮಕೂರು ಸಂಸ್ಥಾಪಕ ಸೂರತ್ ಉಜ್ಜಿನ್, ಸಿದ್ದಾರ್ಥ ಸ್ಕೂಲ್ ಆಫ್ ಇಂಜಿನಿಯAರಿ0ಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜೀವ್‌ಕುಮಾರ್ ಎಸ್, ಹೆಚ್.ಎಂ,ರಾಜೇಶ್, ತಮಕೂರು ಸ್ಮಾರ್ಟ್ ಸಿಟಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂಧಿಗಳು ವಿದ್ಯಾರ್ಥಿಗಳು, ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.