ತುಮಕೂರು: ಬ್ರಿಟಿಷರ ವಿರುದ್ಧ ರಾಷ್ಟçಪಿತ ಮಹಾತ್ಮಗಾಂಧಿ ೧೯೪೨ರ ಆಗಸ್ಟ್ ೦೯ ರಂದು ಕರೆ ನೀಡಿದ ಕ್ವಿಟ್ ಇಂಡಿಯಾ ಚಳುವಳಿ ಭಾರತೀಯ ಸ್ವಾತಂತ್ರ÷್ಯ ಹೋರಾಟದಲ್ಲಿ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ಅಭಿಪ್ರಾಯ ಪಟ್ಟಿದ್ದಾರೆ.
ನಗರದ ಸರಕಾರಿ ಜೂನಿಯರ್ ಕಾಲೇಜು ಮೈಧಾನದ ಗಾಂಧಿ ಸ್ಮಾರಕ ಭವನದ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕ್ವಿಟ್ ಇಂಡಿಯಾ ನೆನಪಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ಕ್ವಿಟ್ ಇಂಡಿಯಾ ಚಳವಳಿ ಭಾರತೀಯ ಸ್ವಾತಂತ್ರ÷್ಯ ಹೋರಾಟಗಾರರ ಪಾಲಿಗೆ ಮಾಡು ಇಲ್ಲವೇ ಮಡಿ ಹೋರಾಟವಾಗಿತ್ತು ಎಂದರು
೧೯೪೨ ರ ಆಗಸ್ಟ್ ೦೯ ರ ಕ್ವಿಟ್ ಇಂಡಿಯಾ ಭಾರತೀಯ ಕಾಂಗ್ರೆಸ್ ಪಾಲಿಗೆ ಅವಿಸ್ಮರಣೀಯ ದಿನ. ಸುಮಾರು ೨೦೦ ವರ್ಷಗಳ ಕಾಲ ಭಾರತವನ್ನು ತಮ್ಮ ವಸಾಹತುವನ್ನಾಗಿ ಮಾಡಿಕೊಂಡು ಆಡಳಿತ ನಡೆಸಿದ ಬ್ರಿಟಿಷ್ ಅಧಿಕಾರಿಗಳಿಗೆ ಭಾರತ ಬಿಟ್ಟು ತೊಲಗಿ ಎಂದು ಅಂತಿಮ ಎಚ್ಚರಿಕೆ ನೀಡಿದ ದಿನ .ಕಾಂಗ್ರೆಸ್ ಪಕ್ಷವನ್ನು ಹೊರತು ಪಡಿಸಿ ಉಳಿದ ಪಕ್ಷಗಳಿಗೆ ನಾವು ಸ್ವಾತಂತ್ರ ಹೋರಾಟಗಾರರು ಎಂದು ಹೇಳಿಕೊಳ್ಳುವ ಯಾವುದೇ ನೈತಿಕತೆ ಇಲ್ಲ. ಹಾಗಾಗಿ ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರು ಹೆಮ್ಮೆ ಪಡುವ ವಿಚಾರ ಇದಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರ ಗೌಡ ತಿಳಿಸಿದರು.
ಭಾರತದ ಇತಿಹಾಸದಲ್ಲಿ ಕಾಂಗ್ರೆಸ್ ಪಕ್ಷದ ಇತಿಹಾಸ ವಿಲೀನವಾಗಿದೆ. ಕಾಂಗ್ರೆಸ್ ಹೊರತಾಗಿ ಭಾರತದ ರಾಜಕೀಯ, ಸಾಮಾಜಿಕ,ಅರ್ಥಿಕ ಚರಿತ್ರೆಯನ್ನು ಕಟ್ಟಿಕೊಡಲು ಸಾಧ್ಯವೇ ಇಲ್ಲ. ಇದನ್ನು ನೆನಪು ಮಾಡಿಕೊಡುವ ಸಲುವಾಗಿ ಹಾಗು ಯುವಜನರಿಗೆ ಕಾಂಗ್ರೆಸ್ ಪಕ್ಷ ಭವ್ಯ ಚರಿತ್ರೆಯನ್ನು ಮನದಟ್ಟು ಮಾಡಿಕೊಡುವ ಉದ್ದೇಶದಿಂದ ಪ್ರತಿವರ್ಷ ಕಾಂಗ್ರೆಸ್ ಪಕ್ಷದಿಂದ ಸ್ವಾತಂತ್ರ÷್ಯ ಹೋರಾಟದ ಪ್ರತಿ ಹೆಜ್ಜೆ ಗಳನ್ನು ಸ್ಮರಿಸುವ ಕೆಲಸ ಮಾಡಲಾಗುತ್ತಿದೆ. ತುಮಕೂರು ಜಿಲ್ಲೆಯಲ್ಲಿ ಪ್ರತಿವರ್ಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಚಂದ್ರಶೇಖರ ಗೌಡ ನುಡಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಾಮಕೃಷ್ಣ ಮಾತನಾಡಿ,೧೯೪೨ರ ಆಗಸ್ಟ್ ೦೮ ರಂದು ಅಖಿಲಭಾರತ ರಾಷ್ಟಿçÃಯ ಕಾಂಗ್ರೆಸ್ ನ ಐವತ್ತು ಜನ ಪದಾಧಿಕಾರಿಗಳು ಸೇರಿ ತೆಗೆದುಕೊಂಡು ನಿರ್ಣಯದ ಪ್ರಕಾರ ೧೯೪೨ ಆಗಸ್ಟ್ ೦೯ ರಿಂದ ಕ್ವಿಟ್ ಇಂಡಿಯಾ ಚಳುವಳಿಯನ್ನು ಆರಂಭಿಸಲಾಯಿತು.ಚಳವಳಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಬ್ರಿಟಿಷರು ತೆಗೆದುಕೊಂಡು ಕಠಿಣ ನಿಲುವುಗಳಿಂದ ಸಾವಿರಾರು ಜನ ಮುಖಂಡರು ಬಂಧನಕ್ಕೆ ಒಳಗಾಗಿ ಸೆರೆವಾಸ ಅನುಭವಿಸಿದರು,ಆದರೆ ಈ ಐತಿಹಾಸಿಜ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ತೆಗೆಉಕೊಂಡು ಹೋಗುವಲ್ಲಿ ಗಾಂಧಿಜೀ ಅವರು ಯಶಸ್ವಿಯಾದರು. ಇದನ್ನು ನೆನಪು ಮಾಡುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ರಾಷ್ಟçದಾದ್ಯಂತ ಕ್ವಿಟ್ ಇಂಡಿಯಾ ಚಳವಳಿಯನ್ನು ನೆನಪಿಸಿಕೊಳ್ಳುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಭಾರತದ ಸ್ವಾತಂತ್ರ÷್ಯಕ್ಕಾಗಿ ಮಹಾತ್ಮಗಾಂಧಿ ಸೇರಿದಂತೆ ಹಲವರು ಒಗ್ಗೂಡಿ ಆನೇಕ ಹೋರಾಟಗಳನ್ನು ರೂಪಿಸಿದ್ದರು.ಆವುಗಳಲ್ಲಿ ೧೯೪೨ ರ ಕ್ವಿಟ್ ಇಂಡಿಯಾ ಚಳುವಳಿ ಪ್ರಮುಖವಾದುದ್ದು, ಭಾರತೀಯರ ಪಾಲಿಗೆ ಇದು ಮಾಡು ಇಲ್ಲವೇ ಮಡಿ ಹೋರಾಟ. ಗಾಂಧೀಜಿಯವರ ಒಂದು ಕರೆಗೆ ದೇಶದಾದ್ಯಂತ ಲಕ್ಷಾಂತರ ಜನ ಬೀದಿಗಿಳಿದು ಬ್ರಿಟಿಷ್ ರೇ ಭಾರತ ಬಿಟ್ಟು ತೊಲಗಿ ಎಂಬ ಘೋಷಣೆಯನ್ಬು ಕೂಗಿದರು.ಮಹಿಳೆಯರು, ಯುವಜನರು,ವಿಧ್ಯಾರ್ಥಿಗಳು, ಹಿರಿಯರು ಈ ಐತಿಹಾಸಿಕ ಹೋರಾಟದಲ್ಲಿ ಪಾಲ್ಗೊಳ್ಳುವ ಮೂಲಕ ಭಾರತ ಸ್ವಾತಂತ್ರ÷್ಯ ಗಳಿಸಲು ಮುನ್ನುಡಿ ಬರೆದರು ಎಂದರು.
ಭಾರತದ ಸಂವಿಧಾನ ಇಂದು ಅಪಾಯದಲ್ಲಿದೆ. ಮತಗಳ್ಳತನದ ಮೂಲಕ ಅಧಿಕಾರ ಹಿಡಿದಿರುವ ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳು ತಮ್ಮ ಅವೈಜ್ಞಾನಿಕ ಆಡಳಿತದಿಂದ ಭಾರತ ದೇಶವನ್ನು ಅದೋಗತಿಗೆ ತೆಗೆದುಕೊಂಡು ಹೋಗುತ್ತಿದೆ.ಇದರ ವಿರುದ್ದ ನಾವೆಲ್ಲರೂ ಹೋರಾಟ ರೂಪಿಸಬೇಕಿದೆ.ಹಲವರ ತ್ಯಾಗ ಬಲಿದಾನದಿಂದ ಗಳಿಸಿದ ಸ್ವಾತಂತ್ರ ಕೈತಪ್ಪಿ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನ ಮೇಲಿದೆ. ಈಗಾಗಲೇ ನಮ್ಮ ನೇತಾರರಾದ ರಾಹುಲ್ ಗಾಂಧಿ ಅವರು ಮತಗಳ್ಳತನದ ಇಂಚಿAಚು ಮಾಹಿತಿಯನ್ಬು ನೀಡಿ ನಮ್ಮನ್ನು ಎಚ್ಚರಿಸಿದ್ದಾರೆ. ನಾವುಗಳು ಸಹ ನಮ್ಮ ನಮ್ಮ ವಾರ್ಡು,ಬೂತ್ ಗಳಲ್ಲಿ ಆಗಿರುವ ಇಂತಹ ಅವ್ಯವಹಾರವನ್ನು ದಾಖಲೆ ಸಮೇತ ಬಯಲಿಗೆ ಎಳೆಯುವ ಕೆಲಸವನ್ನು ಮಾಡಲು ಸಚ್ಚಾಗಬೇಕಾಗಿದೆ ಎಂದು ಇಕ್ಬಾಲ್ ಅಹಮದ್ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಷಣ್ಮುಖಪ್ಪ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಹೇಶ್,ಫಯಾಜ್, ಒಬಿಸಿ ಘಟಕದ ಅಧ್ಯಕ್ಷ ರಾದ ಅನಿಲ್ ಕುಮಾರ್, ಮುಖಂಡರಾದ ಮೆಹಬೂಬ್ ಪಾಷ, ನಟರಾಜಶೆಟ್ಟಿ, ಸಂಜೀವ್ ಕುಮಾರ್, ಪಿ.ಶಿವಾಜಿ, ಸುಜಾತ,ವಸುಂದರ, ವೈ.ಟಿ.ನಾಗರಾಜು, ಸೇವಾದಳದ ಶಿವಾನಂದ್,ವಿವಿಧ ಮುಂಚೂಣಿ ಘಟಕಗಳ ಮುಖಂಡರು,ಕಾರ್ಯಕರ್ತರು ಉಪಸ್ಥಿತರಿದ್ದರು.

 

 

(Visited 1 times, 1 visits today)