ತುಮಕೂರು: ತುಮಕೂರಿನಿಂದ ಜೋಗ್ ಫಾಲ್ಸ್ ವಿಶೇಷ ಪ್ರವಾಸ ಪ್ಯಾಕೇಜ್ ಸಾರಿಗೆ ಬಸ್ ಸಂಚಾರಕ್ಕೆ ಕೆಎಸ್ಸಾರ್ಟಿಸಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್.ಆರ್. ಶ್ರೀನಿವಾಸ್ ಇಂದು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಗರದ ಡಿ. ದೇವರಾಜು ಅರಸು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಈ ವಿಶೇಷ ಪ್ರವಾಸ ಪ್ಯಾಕೇಜ್ ಸಾರಿಗೆ ಬಸ್ ಸಂಚಾರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ವಿಶ್ವ ವಿಖ್ಯಾತ ಜೋಗ್‌ಪಾಲ್ಸ್ ವೀಕ್ಷಣೆಗೆ ಪ್ರವಾಸಿಗರು ಹಾಗೂ ಸಾರ್ವಜನಿಕರು ತೆರಳುತ್ತಿದ್ದು, ಇವರ ಅನುಕೂಲಕ್ಕಾಗಿ ತುಮಕೂರಿನಿಂದ ಈ ವಿಶೇಷ ಪ್ರವಾಸ ಪ್ಯಾಕೇಜ್ ಸಾರಿಗೆ ಸಂಚಾರವನ್ನು ಆರಂಭಿಸಲಾಗಿದೆ ಎಂದರು.
ಈ ವಿಶೇಷ ಪ್ಯಾಕೇಜ್ ಪ್ರವಾಸ ಸಾರಿಗೆ ಬಸ್‌ನಲ್ಲಿ ವಯಸ್ಕರಿಗೆ ೮೦೦ ರೂ. ಮತ್ತು ಮಕ್ಕಳಿಗೆ ೫೦೦ ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಅಶ್ವಮೇಧ ಬಸ್‌ಗಳಲ್ಲಿ ಈ ಸೌಲಭ್ಯವನ್ನು ತುಮಕೂರು ಕೆಎಸ್ಸಾರ್ಟಿಸಿ ವಿಭಾಗದ ವತಿಯಿಂದ ಕಲ್ಪಿಸಲಾಗಿದೆ ಎಂದರು.
ಸಾರಿಗೆ ಸಂಸ್ಥೆ ನೌಕರರ ವೇತನ ಪರಿಷ್ಕರಣೆಯನ್ನು ೨೦೧೬ ರಲ್ಲಿ ಮಾಡಲಾಗಿತ್ತು. ಬಳಿಕ ೨೦೨೦ ರಲ್ಲಿ ವೇತನ ಪರಿಷ್ಕರಣೆ ಮಾಡಬೇಕಾಗಿತ್ತು. ಆದರೆ ಕೊರೊನಾ ಬಂದಿದ್ದರಿAದ ಆ ಸಂದರ್ಭದಲ್ಲಿ ಸರ್ಕಾರದಿಂದಲೇ ಸಂಸ್ಥೆಯ ನೌಕರರಿಗೆ ವೇತನ ಕೊಡಲಾಗಿತ್ತು. ಆ ಸಂದರ್ಭದಲ್ಲೂ ಸಹ ನೌಕರರು ಪ್ರತಿಭಟನೆ ಮಾಡಿದ್ದರು. ಆಗ ಶೇ. ೧೫ ರಷ್ಟು ವೇತನ ಹೆಚ್ಚಳ ಮಾಡಿ ಸರ್ಕಾರ ಆದೇಶ ಮಾಡಿತ್ತು ಎಂದ ಅವರು, ವೇತನ ಪರಿಷ್ಕರಣೆಗೆ ೧-೩-೨೦೦೩ರಲ್ಲಿ ನೋಟಿಫಿಕೇಷನ್ ಆಗಿತ್ತು. ಆದರೆ ೨೦೨೦ ರಿಂದ ೨೪ಕ್ಕೆ ಪರಿಷ್ಕರಣೆ ಮಾಡಬೇಕು ಎಂಬುದು ನೌಕರರ ಬೇಡಿಕೆಯಾಗಿದೆ. ಅಂದು ನೌಕರರ ಸಂಘದವರು ೧-೩-೨೦೦೩ ರಲ್ಲಿ ವೇತನ ಪರಿಷ್ಕರಣೆ ಒಡಂಬಡಿಕೆ ಮಾಡಿಕೊಂಡಿದ್ದರು. ಇದರ ಪ್ರಕಾರ ನಮ್ಮ ಸರ್ಕಾರ ೧-೩-೨೦೨೭ಕ್ಕೆ ವೇತನ ಪರಿಷ್ಕರಣೆ ಮಾಡಬೇಕಾಗಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
ನೌಕರರು ೧೮೦೦ ಕೋಟಿ ಹಿಂಬಾಕಿ ಇದೆ ಕೊಡಿ ಎಂದು ಕೇಳಿದ್ದಾರೆ. ಈ ಸಂಬAಧ ಸರ್ಕಾರ ಒನ್ ಮ್ಯಾನ್ ಕಮಿಟಿ ಮಾಡಿತ್ತು. ಕೋವಿಡ್ ಇದ್ದ ಸಂದರ್ಭದ ಹಿಂಬಾಕಿ ಕೊಡಲು ಕಮಿಟಿ ಒಪ್ಪಿಲ್ಲ. ಸರ್ಕಾರ ೧೪ ತಿಂಗಳ ಹಿಂಬಾಕಿ ಕೊಡಬಹುದು ಎಂದು ಕಮಿಟಿ ವರದಿಯಲ್ಲಿ ಹೇಳಿದೆ. ಹಾಗಾಗಿ ಕಮಿಟಿಯ ವರದಿ ಆಧಾರದಲ್ಲಿ ೭೧೪ ಕೋಟಿ ಕೊಡಲು ಸರ್ಕಾರ ಸಿದ್ದವಿದೆ ಎಂದು ಅವರು ಹೇಳಿದರು.
ವಿಧಾನಸಭೆ ಅಧಿವೇಶನ ಮುಗಿದ ನಂತರ ಕುಳಿತು ಚರ್ಚಿಸಲು ನೌಕರರ ಸಂಘಧ ಪದಾದಿಕಾರಿಗಳಲ್ಲಿ ಮನವಿ ಮಾಡಿದ್ದೇವೆ. ಆದರೂ ಕೂಡಾ ಅವರು ಪ್ರತಿಭಟನೆ ಮಾಡಿದ್ದಾರೆ. ಈ ಸಂಬAಧ ನ್ಯಾಯಾಲಯ ಕೂಡಾ ಆ. ೨೮ಕ್ಕೆ ತೀರ್ಪಿನ ಆದೇಶ ಮುಂದೂಡಿದೆ. ಈಗಲೂ ನೌಕರರ ಸಂಧಾನ ಸಭೆ ಮಾಡುತ್ತೇವೆ ಎಂದು ಅವರು ಹೇಳಿದರು.
ನೌಕರರ ಸಂಘದವರು ಒಪ್ಪಿಕೊಂಡರೆ ೧೪ ತಿಂಗಳ ೭೧೪ ಕೋಟಿ ಹಿಂಬಾಕಿ ಕೊಡಲು ಸರ್ಕಾರ ಸಿದ್ದವಿದೆ. ಅವರೇ ವೇತನ ಪರಿಷ್ಕರಣೆಯನ್ನು ೪ ವರ್ಷಕ್ಕೆ ಮಾಡುವುದು ಎಂದು ಒಡಂಬಡಿಕೆ ಮಾಡಿಕೊಂಡಿದ್ದಾರೆ. ಈ ಒಡಂಬಡಿಕೆ ನಮ್ಮ ಸರ್ಕಾರದಲ್ಲಿ ಆಗಿಲ್ಲ. ಒಡಂಬಡಿಕೆಯAತೆ ನಮ್ಮ ಸರ್ಕಾರ ವೇತನ ಪರಿಷ್ಕರಣೆ ಮಾಡಲಿದೆ ಎಂದರು.
ಈಗ ಕಮಿಟಿ ಹೇಳಿರುವಂತೆ ೭೧೪ ಕೋಟಿ ಕೊಡಲು ನಮ್ಮ ಸರ್ಕಾರ ಒಪ್ಪಿದೆ ಎಂದು ಅವರು ಪುನರುಚ್ಚರಿಸಿದರು.
ಈ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂ ತ್ರಣಾಧಿಕಾರಿ ಚಂದ್ರಶೇಖರ್, ತಾಂತ್ರಿಕ ಅಭಿಯಂತರರಾದ ಆಸೀಫುಲ್ಲಾ ಷರೀಫ್, ಮಂಜುನಾಥ್, ತೇಜಸ್ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)