ತುಮಕೂರು: ಜಿಲ್ಲೆಯ ಬೆಳ್ಳಾವಿ ಗ್ರಾಮದ ೪೨ ರ‍್ಷದ ಲಕ್ಷ್ಮೀದೇವಿ ಕಾಣೆಯಾದ ಪ್ರಕರಣ ಕೊಲೆ ಪ್ರಕರಣವಾಗಿ ಬದಲಾದಿದ್ದು, ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಸಮೀಪ ೧೯ ಸ್ಥಳಗಳಲ್ಲಿ ಮೃತಳ ದೇಹದ ತುಂಡುಗಳು ಪತ್ತೆಯಾಗಿವೆ. ಈ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಪೊಲೀಸರ ವಿಶೇಷ ಪತ್ತೆ ತಂಡ ಈ ಕುರಿತು ಮಾಹಿತಿ ನೀಡಿತು.
ಘಟನೆಯ ವಿವರ
ಆಗಸ್ಟ್ ೩ ರಂದು ಮಧ್ಯಾಹ್ನ ೩ ಗಂಟೆಗೆ “ಮಗಳಾದ ತೇಜಸ್ವಿಯನ್ನು ನೋಡಿಕೊಂಡು ಬರುತ್ತೇನೆ” ಎಂದು ಹೇಳಿ ಮನೆಬಿಟ್ಟ ಲಕ್ಷ್ಮೀದೇವಿ, ರಾತ್ರಿ ವಾಪಾಸಾಗದೆ ಕಾಣೆಯಾಗಿದ್ದಳು. ಪತಿ ಬಸವರಾಜು ಬೆಳ್ಳಾವಿ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಮೊ.ನಂ ೭೩/೨೦೨೫ರಲ್ಲಿ “ಹೆಂಗಸು ಕಾಣೆ” ಪ್ರಕರಣ ದಾಖಲಾಗಿತ್ತು.
ಆಗಸ್ಟ್ ೭ ರಂದು ಚಿಂಪುಗಾನಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ಮತ್ತು ಮುತ್ಯಾಲಮ್ಮ ದೇವಸ್ಥಾನದ ಬಳಿ ಮಾನವ ದೇಹದ ಭಾಗಗಳು ಪತ್ತೆಯಾದ ಬಗ್ಗೆ ಸ್ಥಳೀಯ ಜಗದೀಶ್ ಕೊರಟಗೆರೆ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಮೊ.ನಂ ೧೬೬/೨೦೨೫ರಲ್ಲಿ ಪ್ರಕರಣ ದಾಖಲಾಯಿತು.
ಪತ್ತೆ ಕರ‍್ಯಾಚರಣೆ
ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಸಿ. ಗೋಪಾಲ್ ಮತ್ತು ಎಂ.ಎಲ್. ಪುರುಷೋತ್ತಮ್ ಮರ‍್ಗರ‍್ಶನದಲ್ಲಿ, ಡಿ.ಎಸ್.ಪಿ. ಮಂಜುನಾಥ್ (ಮಧುಗಿರಿ), ಡಿ.ಎಸ್.ಪಿ. ಬಿ.ಕೆ. ಶೇಖರ್ (ಶಿರಾ), ಡಿ.ಎಸ್.ಪಿ. ಚಂದ್ರಶೇಖರ್ ಕೆ.ಆರ್. (ತುಮಕೂರು), ಪಿ.ಐ. ಅನಿಲ್ ಆರ್.ಪಿ. (ಕೊರಟಗೆರೆ) ಮತ್ತು ಇತರ ಅಧಿಕಾರಿಗಳಿಂದ ವಿಶೇಷ ಪತ್ತೆ ತಂಡ ರಚಿಸಲಾಯಿತು.
೧೯ ಸ್ಥಳಗಳಲ್ಲಿ ಮೃತಳ ದೇಹದ ತುಂಡುಗಳನ್ನು ವಶಪಡಿಸಿಕೊಂಡು, ಕುಟುಂಬದವರು ಅವುಗಳನ್ನು ಲಕ್ಷ್ಮೀದೇವಿಯದ್ದೇ ಎಂದು ಗುರುತಿಸಿದರು.
ಬಂಧಿತರು
೧. ರಾಮಚಂದ್ರಯ್ಯ ಎಸ್ (೪೭), ಕುರುಬ ಜನಾಂಗ, ದಂತ ವೈದ್ಯರು, ಕುವೆಂಪು ನಗರ, ತುಮಕೂರು.
೨. ಸತೀಶ್ ಕೆ.ಎನ್ (೩೮), ವಕ್ಕಲಿಗ, ರೈತ, ಕಲ್ಲಹಳ್ಳಿ, ರ‍್ಡಿಗೆರೆ ಹೋಬಳಿ.
೩. ಕಿರಣ್ ಕೆ.ಎಸ್ (೩೨), ವಕ್ಕಲಿಗ, ರೈತ, ಕಲ್ಲಹಳ್ಳಿ, ರ‍್ಡಿಗೆರೆ ಹೋಬಳಿ.
ಪೊಲೀಸ್ ವಿಚಾರಣೆಯಲ್ಲಿ, ಆರೋಪಿ ರಾಮಚಂದ್ರಯ್ಯ ಮೃತಳ ಕಿರಿಯ ಮಗಳನ್ನು ಮದುವೆಯಾಗಿದ್ದರೂ, ಮೃತಳ ನಡವಳಿಕೆ ಬಗ್ಗೆ ಅನುಮಾನಗೊಂಡು ಕೊಲೆ ಮಾಡಿ, ದೇಹವನ್ನು ತುಂಡು ಮಾಡಿ ಪ್ಲಾಸ್ಟಿಕ್ ಕವರ್‌ಗಳಲ್ಲಿ ಹಾಕಿ ವಿವಿಧ ಕಡೆ ಎಸೆಯಲಾಗಿದೆ ಎಂದು ಒಪ್ಪಿಕೊಂಡಿದ್ದಾರೆ.
ಪೊಲೀಸರ ಪ್ರಶಂಸೆ
ಘಟನೆಯ ಪತ್ತೆಗೆ ಹಗಲಿರುಳು ಶ್ರಮಿಸಿದ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಇಲಾಖೆ ಪ್ರಶಂಸೆ ವ್ಯಕ್ತಪಡಿಸಿದೆ.