ದ ಪರಿಹಾರಕ್ಕೆ ಹೋರಾಟ ನಡೆಸಿದ ನೆಯ ನಡೆಸುತ್ತಿರುವ ರಾಷ್ಟ್ರೀಯ ಸಂಘಟನೆಯಾಗಿದ್ದು, ಕರ್ನಾಟಕ ದಕ್ಷಿಣ ಪ್ರಾಂತ್ಯದಲ್ಲಿ ಐದು ಸಾವಿರ ಕಾರ್ಯಕರ್ತರಿಗೆ ತರಬೇತಿ ನೀಡಿ ಬೇರುಮಟ್ಟದಲ್ಲಿ ಕೆಲಸ ಮಾಡಲು ಉತ್ತೇಜಿಸುತ್ತಿದೆ ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ತಿಳಿಸಿದ್ದಾರೆ
ಗುಬ್ಬಿ ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ರೈತ ಭವನದಲ್ಲಿ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶ,ಗುಬ್ಬಿ ತಾಲೂಕು ಘಟಕದವತಿಯಿಂದ ಆಯೋಜಿಸಿದ್ದ ತಾಲೂಕು ಹಾಗೂ ಗ್ರಾಮ ಸಮಿತಿಗಳ ಪ್ರಶಿಕ್ಷಣವರ್ಗ ಕಾರ್ಯಾಗಾರವನ್ನು ಗೋ ಪೂಜೆ ನೆರವೇರಿಸುವ ಮೂಲಕ ಉದ್ಘಾಟಿಸಿ ಮಾತನಾಡುತಿದ್ದ ಅವರು,ಸದಸ್ಯತ್ವ ಅಭಿಯಾನದಲ್ಲಿ ಕರ್ನಾಟಕದ ದಕ್ಷಿಣ ಪ್ರಾಂತ್ಯದಲ್ಲಿ ಸುಮಾರು ೪೩ ಸಾವಿರ ಜನರು ಸದಸ್ಯರಾಗಿದ್ದು, ಇವರಲ್ಲಿ ೫ ಸಾವಿರ ಜನರಿಗೆ ತರಬೇತಿ ನೀಡಲಾಗುತ್ತಿದೆ.ಈಗಾಗಲೇ ಪ್ರಾಂತೀಯ, ಜಿಲ್ಲಾ ಮಟ್ಟದ ತರಬೇತಿಗಳು ಮುಗಿದಿವೆ ಎಂದರು.
ಸ್ವಾವಲ0ಬಿ ರೈತ, ಸಂಪನ್ನ ಗ್ರಾಮ, ಸಮರ್ಥ ಭಾರತ ಇದು ಭಾರತೀಯ ಕಿಸಾನ್ ಸಂಘದ ಮೂಲ ಉದ್ದೇಶವಾಗಿದ್ದು,ರೈತರ ಸಮಸ್ಯೆಯ ಜೊತೆಗೆ, ವಿಷಮುಕ್ತ ಆಹಾರ ನೀಡುವ ಸಾವಯವ ಕೃಷಿಯ ಮೂಲಕ ಕೃಷಿ ಬಂಡವಾಳ ಕಡಿತ ಮಾಡಿ, ಲಾಭವನ್ನು ಹೆಚ್ಚು ತರುವ ನಿಟ್ಟಿನಲ್ಲಿ ಹಲವಾರು ಉಪಕ್ರಮಗಳ ಜೊತೆಗೆ,ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.ಅಲ್ಲದೆ ಸ್ಥಳೀಯವಾಗಿ ರೈತರು ಅನುಭವಿಸುತ್ತಿರುವ ಸಂಕಷ್ಷಗಳ ಪಟ್ಟಿ ಮಾಡಿ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಶಾಂತಿಯುತ ಮತ್ತು ಕಾನೂನಾತ್ಮಕ ಹೋರಾಟಗಳನ್ನು ಮಾಡುತ್ತಾ ಬಂದಿದೆ ಎಂದು ಸೋಮಶೇಖರ್ ತಿಳಿಸಿದರು.
ಕರ್ನಾಟಕ ದಕ್ಷಿಣ ಪ್ರಾಂತ್ರದಲ್ಲಿ ಸುಮಾರು ೧೪ ಜಿಲ್ಲೆಗಳಿಂದ್ದು,೭೦ ತಾಲೂಕುಗಳನ್ನು ಒಳಗೊಂಡಿದೆ.ಬೌಗೋಳಿಕವಾಗಿ ವೈವಿದ್ಯತೆ ಯನ್ನು ಹೊಂದಿದೆ.ತೆAಗು,ಅಡಿಕೆ,ಕಬ್ಬು,ಅಲೂಗಡೆ,ಶೇAಗಾ,ತೊಗರಿ,ಭತ್ತ ಹೀಗೆ ಹಲವಾರು ವೈವಿದ್ಯ ಬೆಳೆಗಳನ್ನು ಬೆಳೆಯ ಲಾಗುತ್ತಿದೆ,ಇವುಗಳಿಗೆ ಬೆಂಬಲ ಬೆಲೆ ಕೊಡಿಸುವ ನಿಟ್ಟಿನಲ್ಲಿ ಸರಕಾರದಿಂದ ದೊರೆಯುವ ಸಾಲ, ಸೌಲಭ್ಯಗಳ ಮಾಹಿತಿ ನೀಡಿ, ರೈತರನ್ನು ಎಜುಕೇಟ್ ಮಾಡುವ ಕೆಲಸ ಆಗಬೇಕಿದೆ. ಈ ನಿಟ್ಟಿನಲ್ಲಿ ಗ್ರಾಮ ಸಮಿತಿಗಳ ಪದಾಧಿಕಾರಿಗಳನ್ನು ತರಬೇತಿ ಮಾಡಿ, ಅವರ ಮೂಲಕ ಈ ಕೆಲಸವನ್ನು ಮಾಡಲು ಬಿ.ಕೆ.ಎಸ್ ಮುಂದಾಗಿದೆ ಎಂದು ಸೋಮಶೇಖರ್ ನುಡಿದರು.
ರೈತರನ್ನು ಸಧೃಡರನ್ನಾಗಿಸುವ ನಿಟ್ಟಿನಲ್ಲಿ ಸರಕಾರ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಬೇಕು.ಹೈನುಗಾರರಿಗೆ ಅನುಕೂಲವಾಗುವಂತೆ ಲೀಟರ್ ಹಾಲಿಗೆ ೪೩ ರೂ ನೀಡಬೇಕು, ಸಕಾಲಕ್ಕೆ ಬೀಜ,ವಿದ್ಯುತ್ ಟಾನ್ಸ್ಫಾರಂಗಳನ್ನು ನಿಗಧಿತ ಕಾಲಾವಧಿಯಲ್ಲಿ ನೀಡುವುದು, ರಸಗೊಬ್ಬರ ಮತ್ತು ಮಾರ್ಗದರ್ಶನ ಹಾಗೂ ಎಲ್ಲಾ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿ, ರೈತರ ಉತ್ಪನ್ನಗಳ ಖರೀದಿಗೆ ವರ್ಷವಿಡಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂಬುದು ಭಾರತೀಯ ಕಿಸಾನ್ ಸಂಘದ ಒತ್ತಾಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಬಿ.ಕೆ.ಎಸ್‌ನ ಗುಬ್ಬಿ ತಾಲೂಕು ಅಧ್ಯಕ್ಷ ಮಂಜುನಾಥ್,ಗ್ರಾಮ ಮಟ್ಟದಿಂದ ರೈತರನ್ನು ಸಂಘಟಿಸುವ ನಿಟ್ಟಿನಲ್ಲಿ ಇಂದು ಗುಬ್ಬಿ ತಾಲೂಕು ಮಟ್ಟದ ಗ್ರಾಮ ಸಮಿತಿಗಳ ಪ್ರಶಿಕ್ಷಣ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.ರೈತರು ರಾಷ್ಟç, ರಾಜ್ಯಮಟ್ಟದಲ್ಲಿ ಅನುಭವಿಸುತ್ತಿರುವ ಸಂಕಷ್ಟಗಳ ಜೊತೆಗೆ, ಸ್ಥಳೀಯವಾಗಿರುವ ತೊಂದರೆಗಳ ನಿವಾರಣೆಗೆ ಭಾರತೀಯ ಕಿಸಾನ್ ಸಂಘ ಪ್ರಯತ್ನಿಸುತ್ತಿದೆ ಎಂದರು.
ಬಿ.ಕೆ.ಎಸ್‌ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಂಗಾಧರ ಸ್ವಾಮಿ, ಸಂಘಟನೆ ಕುರಿತು ಮಾತನಾಡಿದರು.ವೇದಿಕೆಯಲ್ಲಿ ತಾಲೂಕು ಅಧ್ಯಕ್ಷರಾದ ಮಂಜುನಾಥ್, ದಕ್ಷಿಣ ಪ್ರಾಂತ ಮಹಿಳಾ ಪ್ರಮುಖರಾದ ಪುಟ್ಟಮ್ಮ, ದಕ್ಷಿಣ ಪ್ರಾಂತ ಕಾರ್ಯದರ್ಶಿ ಸಂತೋಷ, ಜಿಲ್ಲಾ ಉಪಾಧ್ಯಕ್ಷರಾದ ಶಿವನಂಜಪ್ಪ, ಸಾವಯವ ಕೃಷಿ ಪ್ರಮುಖ ಶಂಕರಪ್ಪ,ತಾಲೂಕು ಉಪಾಧ್ಯಕ್ಷ ಪರಮೇಶ್ ಉಪಸ್ಥಿತರಿದ್ದರು,

(Visited 1 times, 1 visits today)