ತುಮಕೂರು: ನ್ಯಾಯ ಇರುವಡೆ ಶಾಂತಿ, ನೆಮ್ಮದಿ, ಸಮಾಧಾನ,ಸೌಹಾರ್ಧತೆ,ಸಾಮರಸ್ಯದ ಬದುಕು ಸಾಧ್ಯ ಎಂದು ಹಿರಿಯ ಪ್ರಾಧ್ಯಾಪಕ ಹಾಗು ಪ್ರವಾಚಕ ಲಾಲ್ ಹುಸೇನ್ ಕುಂದಗಲ್ ತಿಳಿಸಿದ್ದಾರೆ.
ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಜಮಾಆತೆ ಇಸ್ಲಾಮಿ ಹಿಂದ್ ವತಿಯಿಂದ ಆಯೋಜಿಸಿದ್ದ ನ್ಯಾಯದ ಹರಿಕಾರ ಪ್ರವಾದಿ ಮಹಮದ್(ಸ), ಸಿರತ್ ಅಭಿಯಾನದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು,ನಿಜವಾದ ಧರ್ಮನಿಷ್ಠೆ ಎಂದರೆ ದೇವರ ಆರಾಧನೆಯಲ್ಲಿ ತೊಡಗುವುದಲ್ಲ,ನ್ಯಾಯದ ಪರ ನಿಲ್ಲುವುದು.ಇದನ್ನು ಪ್ರವಾದಿ ಮಹಮದ(ಸ)ಅವರು ಬದುಕಿನ ಲ್ಲಿಯೂ ಕಾಣಬಹುದಾಗಿದೆ ಎಂದರು.
ನ್ಯಾಯ ನೀಡುವಾಗ ಬಡವರು,ಶ್ರೀಮಂತರು, ಮೇಲು, ಕೀಳು ಎಂಬ ಭಾವನೆ ಬಂದರೆ ಅದು ಅರಾಜಕತೆಗೆ ದಾರಿ ಮಾಡಿಕೊಡುತ್ತದೆ.ತನ್ನ ಹೆತ್ತವರು,ಒಡಹುಟ್ಟಿದವರು ತಪ್ಪು ಮಾಡಿದ್ದರೆ ಅದಕ್ಕೆ ಶಿಕ್ಷೆ ವಿಧಿಸುವುದೇ ನಿಜವಾದ ನ್ಯಾಯ ಎಂದು ಪ್ರವಾದಿ ಮಹಮದ್(ಸ) ಅವರು ಪ್ರತಿಪಾದಿಸಿದ್ದಾರೆ. ಧರ್ಮ, ಜಾತಿ ಮೀರಿ ನ್ಯಾಯ ಕೆಲಸ ಮಾಡಬೇಕು.ನಿನ್ನೆಲ್ಲಾ ತಪ್ಪುಗಳ ಲೆಕ್ಕ ಭಗವಂತನ ಬಳಿ ಇವೆ.ಅವನಿಂದ ಎನ್ನನ್ನು ಮುಚ್ಚಿಡಲು ಸಾಧ್ಯವಿಲ್ಲ ಎನ್ನುವ ಮೂಲಕ ೧೨ನೇ ಶತಮಾನದಲ್ಲಿ ಬಸವಣ್ಣವರು ಪ್ರತಿಪಾದಿಸಿದ ದೇವರ ಕಲ್ಪನೆಯನ್ನು ೧೫೦೦ ವರ್ಷಗಳ ಹಿಂದೆ ಪ್ರವಾದಿ ಮಹಮದ್(ಸ)ರವರು ಮನಗಾಣುವಂತೆ ತಿಳಿಸಿದ್ದರು ಎಂದು ಲಾಲ್ ಹುಸೇನ್ ಕಂದಗಲ್ ತಿಳಿಸಿದರು.
ಪ್ರವಾದಿ ಮಹಮದ್(ಸ)ರ ಜನ್ಮ ದಿನಾಚರಣೆ ಮಿಲಾದುನ್ನಿ ಎಂದರೆ ಅದ್ದೂರಿ ಮೆರವಣಿಗೆ ಮಾತ್ರವಲ್ಲ.ಮನುಷ್ಯನ ಸಂಕಷ್ಟಕ್ಕೆ ಮಿಡಿಯುವುದು.ಹಬ್ಬ ಹರಿದಿನಗಳು ಮನುಷ್ಯರನ್ನು ಒಂದುಗೂಡಿಸಬೇಕೇ ಹೊರತು ವಿಘಟಿಸುವ ಕೆಲಸ ಆಗಬಾರದು.ಭಾರತ ಬಹುತ್ವಗಳ ರಾಷ್ಟç.ಕರ್ನಾಟಕ ಸರ್ವಜನಾಂಗಗಳ ಶಾಂತಿಯ ತೋಟ.ಇನ್ನೊಬ್ಬರ ಸ್ವಾರ್ಥಕ್ಕೆ ಬಲಿಯಾಗುವುದು ಬೇಡ.ಒಬ್ವ ಮಾಡಿದ ತಪ್ಪಿಗೆ ಇಡೀ ಸಮುದಾಯವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು,ಧರ್ಮಗ್ರಂಥಗಳ ಬಗ್ಗೆ ಪೂರ್ವಾಗ್ರಹ ಪೀಡಿತ ವ್ಯಾಖ್ಯಾನ ತಪ್ಪಬೇಕು. ಪರಸ್ವರ ಕಲೆತು ಭಾರತದ ಏಕತೆ ಮತ್ತು ಸಮಗ್ರತೆಗೆ ಕೆಲಸ ಮಾಡುವ ಸೌಹಾರ್ಧ ವಾತಾವರಣ ಸೃಷ್ಟಿಯಾಗಬೇಕೆಂದು ಲಾಲ್ ಹುಸೇನ್ ಕಂದಗಲ್ ನುಡಿದರು.
ಶಾಂತಿ ಪ್ರಕಾಶನ ಹೊರತಂದಿರುವ ಪ್ರವಾದಿ ಮಹ ಮದ್(ಸ) ಅರಿಯಿರಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಇತಿಹಾಸ ಪ್ರಾಧ್ಯಾಪಕ ಡಾ.ಸಿದ್ದಲಿಂಗಯ್ಯ,ಪ್ರವಾದಿಗಳು ಜ್ಞಾನಕ್ಕೆ ಹೆಚ್ಚು ಮಹತ್ವ ನೀಡಿದವರು. ಹಾಗಾಗಿ ಅವರ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ.ನಮ್ಮಲ್ಲಿ ಅರಿಯುವಲ್ಲಿ ಅಂತರವಿಲ್ಲ.ಆದರೆ ಅರಿತವರ ನಡುವೆ ಅಂತರವಿದೆ.ಪ್ರವಾದಿಗಳು ಶಾಂತಿ, ಕರುಣೆ, ಪ್ರೀತಿಯ ಸಂಕೇತ.ಧರ್ಮ ಗ್ರಂಥಗಳನ್ನು ಪೂರ್ವಾಗ್ರಹ ಪೀಡಿತರಾಗಿ ನೋಡುವ ಮನಸ್ಥಿತಿ ಬದಲಾಗಬೇಕು. ದಾರಿ ತಪ್ಪಿಸುವ ಕೆಲಸ ಆಗಬಾರದು.ಬಹುತ್ವದ ನಡುವೆ ನಾವು ಬದುಕುತಿದ್ದೇವೆ ಎಂಬ ಅರಿವು ನಮಗಿರಬೇಕು ಎಂದರು.
ಭಾರತೀಯ ಸಮಾಜದಲ್ಲಿ ಪ್ರವಾದಿ ಮಹಮದ್(ಸ)ಆದರ್ಶದ ಔಚಿತ್ಯ ಎಂಬ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಪ್ರೊ.ಚಂದ್ರಕಾAತ್,ಪ್ರವಾದಿ ಮಹ ಮದ್(ಸ) ಅವರು ತಮ್ಮ ಜೀವನದಲ್ಲಿ ಇಡೀ ಪ್ರಪಂಚಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡಿದ್ದಾರೆ.ಈ ಪುಸ್ತಕ ವಾಟ್ಸಫ್ ವಿವಿಗಳ ಅರೆತಿಳುವಳಿಕೆಗೆ ಉತ್ತರವಾಗಿ ಮೂಡಿ ಬಂದಿದೆ.ಪ್ರತಿಯೊಬ್ಬರು ಓದುವ ಮೂಲಕ ಇಸ್ಲಾಂ ಧರ್ಮದ ಬಗ್ಗೆ ಇರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರೊ,ರಿಜ್ವಾನ್ ಖಾಲಿದ್,ಸತ್ಯ ನುಡಿಯುವ ಮೂಲಕ ನ್ಯಾಯ ಸ್ಥಾಪಿಸಲು ಸಾಧ್ಯ ಎಂದು ಪ್ರವಾದಿ ಮಹಮದ(ಸ) ತೊರಿಸಿಕೊಟ್ಟಿದ್ದಾರೆ.ಸತ್ಯನಿಷ್ಠೆ ಮತ್ತು ಪ್ರಾಮಾಣಿಕತೆಗೆ ಮತ್ತೊಂದು ಹೆಸರು ಪ್ರವಾದಿಗಳು. ಈ ಬಗ್ಗೆ ಜನರಿಗೆ ಅರಿವು ಮೂಡಿಸಲು ಜಮಾಆತೆ ಇಸ್ಲಾಮಿ ಹಿಂದ್ ಪ್ರವಾದಿಗಳ ಜನನದ ಮಾಸದಲ್ಲಿ ಈ ರೀತಿಯ ಉಪನ್ಯಾಸಗಳ ಮೂಲಕ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಆತೆ ಇಸ್ಲಾಮಿ ಹಿಂದ್‌ನ ಸ್ಥಾನಿಯ ಅಧ್ಯಕ್ಷರಾದ ಅಸ್ರಾರ್ ಅಹಮದ್ ವಹಿಸಿದ್ದರು.ಜಮಾಆತೆ ಇಸ್ಲಾಮಿ ಹಿಂದಿನ ಪದಾಧಿಕಾರಿಗಳು, ವಿವಿಧ ಸಮುದಾಯದ ನಾಗರಿಕರು ಪಾಲ್ಗೊಂಡಿದ್ದರು.

(Visited 1 times, 1 visits today)