ಚಿಕ್ಕನಾಯಕನಹಳ್ಳಿ : ನನ್ನ ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಲು ಹಾಗೂ ವಿವಿಧ ಇಲಾಖೆಗಳ ಲ್ಲಿನ ಮದ್ಯವರ್ತಿ ಗಳ ಹಾವಳಿ ತಪ್ಪಿಸಲು ನೇರವಾಗಿ ಜನರ ಮನೆಬಾಗಿಲಿಗೆ ಮನೆ ಮಗನಾಗಿ ಬಂದಿದ್ದು ನಿಮ್ಮ ಸಮಸ್ಯೆಗಳನ್ನು ಸಾಧ್ಯವದಷ್ಟು ಸ್ಥಳದಲ್ಲೇ ಬಗೆ ಹರಿಸಲಾಗುವುದು ಎಂದು ಶಾಸಕ ಸಿ. ಬಿ. ಸುರೇಶ್ ಬಾಬು ತಿಳಿಸದರು.
ತಾಲ್ಲೋಕಿನ ಶೆಟ್ಟಿಕೆರೆ ಹೋಬಳಿಯ ಗೋಡೆಕೆರೆ ಗ್ರಾಮ ಪಂಚಾಯಿತಿವ್ಯಾಪ್ತಿಯಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ೧೪ನೇ ವಾರದ ಮನೆಬಾಗಿಲಿಗೆ ಮನೆ ಮಗ ಶೀರ್ಷಿಕೆ ಯ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತಾಡಿದ ಅವರು ಎಲ್ಲಾ ಇಲಾಖೆ ಗಳ ಅಧಿಕಾರಿಗಳು ಇಂದು ನಿಮ್ಮ ಗ್ರಾಮ ಗಳಿಗೆ ಬಂದಿದ್ದು ನಿಮ್ಮ ಯಾವುದೇ ವೈಯಕ್ತಿಕ ಇಲ್ಲವೇ ಸಾಮಾಜಿಕ ಸಮಸ್ಯೆ ಗಳಿದ್ದರು ಲಿಖಿತದ ಮೂಲಕ ಅರ್ಜಿ ನೀಡಿ ಅದರಲ್ಲಿ ನಿಮ್ಮ ವಿಳಾಸ ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿ ನಿಮ್ಮ ಅರ್ಜಿಗಳ ಬಗ್ಗೆ ತೆಗೆದುಕೊಂಡ ಕ್ರಮದ ಬಗ್ಗೆ ತಿಳಿಸಲಾಗುವುದು ಹಾಗೂ ಸಾಧ್ಯವದಷ್ಟು ಸ್ಥಳದಲ್ಲೇ ನಿಮ್ಮ ಸಮಸ್ಯೆ ಗಳನ್ನು ಬಗೆ ಹರಿಸಲಾಗುವುದು. ಎಂದ ಅವರು ಪಿ ಡಿ ಒ ಪ್ರತಿ ಗ್ರಾಮಗಳಿಗೆ ಬೇಟಿ ನೀಡಬೇಕು ಅಲ್ಲಿನ ಸಮಸ್ಯೆಗಳನ್ನು ಆಲಿಸಿ ಅಗತ್ಯವಿರುವಂತಹ ಮೂಲಭೂತ ಸೌಲಭ್ಯಗಳ ಬಗ್ಗೆ ಗಮನಹರಿಸುವಂತೆ ಸೂಚನೆ ನೀಡಿದ ಅವರು ಗೋಡೆಕೆರೆ ಗ್ರಾಮಪಂಚಾಯಿತಿಯು ಗಣಿಬಾದಿತ ಪ್ರದೇಶದಲ್ಲಿ ಸೇರಿರುವುದರಿಂದ ಈ ಭಾಗದ ಪ್ರತಿಹಳ್ಳಿಗಳಲ್ಲೂ ಅಭಿವೃದ್ದಿ ಕೆಲಸಗಳನ್ನು ಮಾಡಲಾಗುತ್ತಿದೆ ಇದರೊಂದಿಗೆ ಮನೆಗಳನ್ನು ನೀಡುವುದು ಸೇರಿದಂತೆ ಪ್ರತಿಮನೆಗೊಂದು ಹಸುಗಳನ್ನು ನೀಡುವಂತಹ ಯೋಜನೆಯ ಬಗ್ಗೆ ಕ್ರಮಕೈಗೊಳ್ಳಲಾಗುವುದೆಂದ ಅವರು ಯಾವುದಾದರು ಕೈ ತಪ್ಪಿದ್ದರೆ ಅಂತಹ ರಸ್ತೆಗಳನ್ನು ಮುಂದಿನಗಳಲ್ಲಿ ಮಾಡಲಾಗುವುದು , ಸೊಂಡೆನಹಳ್ಳಿಯ ಅಂಗನಾವಾಡಿ ಕಟ್ಟಡಕ್ಕೆ ಈಗಾಗಲೇ ೨೩ಲಕ್ಷಅನುದಾನ ನೀಡಿದ್ದು ಅದು ಟೆಂಡರ್ ಹಂತದಲ್ಲಿದೆ ಅದೇ ರೀತಿ ಸಮುದಾಯ ಭವನಕ್ಕೆ ಸರ್ಕಾರದಿಂದಅನುದಾನ ಬಂದರೆ ೫೦ಲಕ್ಷ ನೀಡುವ ಭರವಸೆ ನೀಡಿದ ಅವರು ಗೋಡೆಕೆರೆ ಸೇರಿದಂತ ಪ್ರತಿ ಪಿಹೆಚ್ ಸಿಗೂ ಶಾಶ್ವತವಾಗಿ ವೈದ್ಯರ ನೇಮಕಾತಿಯನ್ನು ಮಾಡಲಾಗುತ್ತಿದ್ದು ಇನ್ನು ಮುಂದೆ ವೈದ್ಯರ ಸೇವೆ ದೊರೆಯಲಿದೆ ಹಾಗೂ ಗೋಡೆಕೆರೆ ಗ್ರಾಮಕ್ಕೆ ಮೈಸೂರು ಕಡೆಗೆ, ಬೆಂಗಳೂರು ಕಡೆಗೆ ಹೋಗುವಂತಹ ಹಾಗೂ ಬರುವಂತಹ ಕೆಎಸ್ ಆರ್ ಟಿ ಸಿ ಬಸ್ ಗಳನ್ನು ಬಂದುಹೋಗುವAತೆ ಬಸ್ ವ್ಯವಸ್ಥೆ ಯನ್ನು ಮಾಡುವುದಾಗಿ ತಿಳಿಸದ ಅವರು ಈ ಕಾರ್ಯಕ್ರಮವನ್ನು ಸದ್ಬಳಕೆ ಮಾಡಿಕೊಂಡು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ ಎಂದರು.
ಕಾರ್ಯಕ್ರಮದ ಅದ್ಯಕ್ಷತೆವಹಿಸಿದ್ದ ಗೋಡೆಕೆರೆ ಗ್ರಾ.ಪಂ.ಅದ್ಯಕ್ಷೆ ತೇಜಸ್ವೀನಿ ಮಾತನಾಡಿ ಇಂತಹ ಜನಪಯೋಗಿ ಕಾರ್ಯಕ್ರಮ ಸಾರ್ವಜನಿಕರಿಗೆ ಸಹಕಾರಿಯಾಗಿದೆ ಕಳೆದ ೧೪ವಾರಗಳಿಂದ ವಿವಿಧ ಗ್ರಾಮಪಂಚಾಯಿತಿಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದ್ದು ಇಂದು ನಮ್ಮ ಪಂಚಾಯಿತಿಯಲ್ಲಿ ನಡೆಯುತ್ತಿದ್ದು ನಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಎಲ್ಲಾ ಗ್ರಾಮಗಳನ್ನು ಬೇಟಿ ಮಾಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಶಾಸಕರು ನೇರವಾಗಿ ಅರ್ಜಿಗಳನ್ನು ಪಡೆದು ಕೇಲವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಿ ಪರಿಹರಿಸುವಂತೆ ಸೂಚನೆ ನೀಡಿದ್ದು ಇದು ಅಧಿಕಾರಿಗಳು ಹಾಗೂ ಜನರ ನಡುವೆ ಉತ್ತಮ ಬಾಂದವ್ಯ ಮೂಡುತ್ತದೆ ಜನರು ಅಧಿಕಾರಿಗಳನ್ನು ಹಡುಕಿಕೊಂಡು ಅಲೆದಾಡುವುದು ತಪ್ಪುತ್ತದೆ ಇದು ಒಳ್ಳೆಯ ಕಾರ್ಯಕ್ರಮ ಎಂದರು.
ಈ ಸಂದರ್ಭದಲ್ಲಿ ಗೋಡೆಕರೆ ಪಂಚಾಯಿತಿಯ ತರಬೇತಿನಹಳ್ಳಿಯಲ್ಲಿ ಉದ್ಘಾಟನೆಗೊಂಡ ಮನೆಬಾಗಿಲಿಗೆ ಮನೆಮಗ ಕಾರ್ಯಕ್ರಮದಲ್ಲಿ ತರಬೇತಿನಹಳ್ಳಿ ಗ್ರಾಮದಲ್ಲಿನ ರಸ್ತೆಗಳನ್ನು ದುರಸ್ಥಿಮಾಡಿಸುವಂತೆ , ನಡುವನಹಳ್ಳಿ ಗ್ರಾಮದಲ್ಲಿನ ಕಾರ್ಯಕ್ರಮದಲ್ಲಿ ಸಮುದಾಯಭವನ , ಬಾಣದದೇವರಹಟ್ಟಿಗೆ ಹೋಗುವಂತಹ ರಸ್ತೆ ನಿರ್ಮಾಣ, ಸಾಮುಹಿಕ ಶೌಚಾಲಯ, ನಿರ್ಮಿಸುವಂತೆ ಹಾಗೂ ನಡುವನಹಳ್ಳಿಯ ಗುಂಡತೋಪಿನಲ್ಲಿ ವಾಸಿಸುತ್ತಿರುವಂತಹ ಜನರಿಗೆ ನಿವೇಶನ ಮಂಜೂರು ನೀಡುವುದು ಹಾಗೂ ಮನೆಗಳ ನಿರ್ಮಾಣಕ್ಕೆ ಅಗತ್ಯ ನೆರವು ನೀಡುವ ಬಗ್ಗೆ, ನಿವೇಶನರಹಿತರಿಗೆ ನಿವೇಶನ ನೀಡುವುದು , ಕಂದಾಯ ಇಲಾಕೆಯ ಖಾತೆ ಮಾಡಿಸುವಬಗ್ಗೆ, ಮನವಿ ಗಳು ಬಂದರೆ, ಸೊಂಡೆನಹಳ್ಳಿ ಗ್ರಾಮದ ಕಾರ್ಯಕ್ರಮದಲ್ಲಿ ಶಾಲೆಗೆ ಅಡುಗೆ ಕೋಣೆ ನಿರ್ಮಿಸುವಂತೆ, ಸಮುದಾಯಭವನ , ಸೊಂಡೆನಹಳ್ಳಿಗೆ ಉತ್ತಮ ರಸ್ತೆ, ಹಾಗೂ ಟ್ರಾನ್ಸ್ ಫಾರ್ಮರ್ ಸಂಪರ್ಕ, ಗೃಹಲಕ್ಷ್ಮಿ ಯೋಜನೆಗಾಗಿ ಮನವಿಗಳು ಬಂದವು, ಸೋಮನಹಳ್ಳಿ ಗ್ರಾಮದಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಡಿಯುವ ನೀರಿಗಾಗಿ ಶುದ್ದನೀರಿನ ಘಟಕವನ್ನು ನೀಡುವಂತೆ ಹಾಗೂ ರಸ್ತೆಗಳನ್ನು ನಿರ್ಮಿಸುವಂತೆ ಮನವಿಯನ್ನು ನೀಡಲಾಯಿತು. ಗೋಡೆಕೆರೆ ಗ್ರಾಮದಲ್ಲಿ ಗೋಡೆಕೆರೆ ಗ್ರಾಮಕ್ಕೆ ಒಂದು ಬ್ಯಾಂಕ್ ನ್ನು ಪ್ರಾರಂಭಿಸಲು ಪೊಸ್ಟ್ ಆಫೀಸ್ ಕಚೇರಿ ನಿರ್ಮಿಸಲು, ಕೆಎಸ್ ಆರ್ ಟಿಸಿ ಬಸ್ ಗೋಡೆಕೆರೆಗೆ ಬಂದು ಹೋಗುವಂತಹ ವ್ಯವಸ್ಥೆ ಮಾಡಲು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಶ್ವತ ವೈದ್ಯರನ್ನು ನೇಮಿಸುವಂತೆ ಮನವಿಗಳು ಸಾರ್ವಜನಿಕವಾಗಿ ಅರ್ಜಿಗಳು ಬಂದವು.
ಕಾರ್ಯಕ್ರಮದಲ್ಲಿ ಪಿಎಲ್ ಡಿ ಬ್ಯಾಂಕ್ ಅದ್ಯಕ್ಷ ಹೆಚ್.ಆರ್.ಶಶಿಧರ್, ಶಿರಸ್ಥೇದಾರ್ ರಂಗನಾಥ್, ಇಒ ದೊಡ್ಡಸಿದ್ದಯ್ಯ, ಗೋಡೆಕೆರೆ ಗ್ರಾ.ಪಂ.ಉಪಾದ್ಯಕ್ಷೆ ಯಶೋದಮ್ಮ, ಸದಸ್ಯರುಗಳಾದ ಮಲ್ಲಿಕಯ್ಯ, ತೋಂಟಾರಾದ್ಯ, ಕೃಷ್ಣಮೂರ್ತಿ, ರೂಪಾ, ಸಂಗಮೇಶ್, ಮಂಗಳಗೌರಮ್ಮ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಿವರಾಜ್ ಕುಮಾರ್, ಸಿಡಿಪಿಒ ಹೊನ್ನಪ್ಪ, ಲೋಕೊಪಯೋಗಿ ಇಲಾಖೆ ಎಇಇ ತಿಮ್ಮಪ್ಪ, ಜಿ.ಪಂ. ಎಇಇ ಮೋಹನ್, ಮಾರುತಿ, ವಲಯಅರಣ್ಯಾಧಿಕಾರಿ ಅಮಿತ್, ಪಿಡಿಒ ಸಂತೋಶ್ , ಕಾರ್ಯದರ್ಶಿ ನಟರಾಜ್ ಟಿ ಸೇರಿದಂತೆ ಇತರರು ಇದ್ದರು.