BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ
  • ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್
  • ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ
  • ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ
  • ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ
  • ರೈತರ ಬೃಹತ್ ಪಾದಯಾತ್ರೆಗೆ ಚಾಲನೆ
  • ಬೈಕ್ ಅಪಘಾತಕ್ಕೆ ವಿದ್ಯಾರ್ಥಿ ಬಲಿ
  • ನವಜಾತ ಶಿಶುವಿಗೆ ತಾಯಿಯ ಹಾಲಿನಿಂದ ರೋಗನಿರೋಧಕ ಶಕ್ತಿ ವೃದ್ಧಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು
ಇತರೆ ಸುದ್ಧಿಗಳು

ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ: ರಮೇಶ್‌ಬಾಬು

By News Desk BenkiyabaleUpdated:September 20, 2025 2:45 pm

ತುಮಕೂರು: ಹಣ, ಜಾತಿ ಬಿಟ್ಟು ಶಿಕ್ಷಕರ ಸಮಸ್ಯೆಗೆ ಸ್ಪಂದಿಸುವ ವ್ಯಕ್ತಿಯನ್ನು ಶಿಕ್ಷಕರ ಕ್ಷೇತ್ರದಿಂದ ಆಯ್ಕೆ ಮಾಡಬೇಕಾಗಿದೆ. ಶಿಕ್ಷಕರ ಸಂಘಟನೆಗಳ ನಡುವಿನ ಒಡಕನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ರಮೇಶ್‌ಬಾಬು ಹೇಳಿದರು.
ನಗರದ ಮಾರುತಿ ಮಹಾರಾಜ್ ಕನ್ವೆಷನ್ ಹಾಲ್ ಸಭಾಂಗಣದಲ್ಲಿ ರಮೇಶಬಾಬು ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಶಿಕ್ಷಕರು ಮತ್ತು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಪಕ್ಷ ಮೀರಿ ಒಳ್ಳೆಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕಾಗಿದೆ ಎಂದರು.
ನಾನು ವಿಧಾನ ಪರಿಷತ್ ಸದಸ್ಯನಾಗಿ ನೇಮಕವಾಗಿದ್ದು, ಅವಕಾಶ ಸಿಕ್ಕಾಗಲೆಲ್ಲಾ ಶಿಕ್ಷಕರ ಪರವಾಗಿ ದ್ವನಿ ಎತ್ತಲಿದ್ದೇನೆ. ನನಗೆ ಅಭಿನಂದಿಸಲು ಶಿಕ್ಷಕರ ಸಂಘಟನೆಯವರು ಬೆಂಗಳೂರಿಗೆ ಬರುವುದು ಬೇಡ. ನಾನೇ ನಿಮ್ಮಲ್ಲಿಗೆ ಬರುತ್ತೇನೆ. ಅನೇಕ ಶಿಕ್ಷಕರು ಈ ಹಿಂದೆಯೂ ನನ್ನ ಜೊತೆ ಕೆಲಸ ಮಾಡಿದ್ದಾರೆ.ಈಗಲು ನಮ್ಮ ಜೊತೆ ಕೆಲಸ ಮಾಡುತ್ತಾರೆ ಎಂಬ ನಂಬಿಕೆ ನನಗಿದೆ ಎಂದು ಹೇಳಿದರು.
ಎಂ.ಎಲ್.ಸಿ. ಸ್ಥಾನಕ್ಕಾಗಿ ನಾನು ದೆಹಲಿ ಪ್ರವಾಸ ಮಾಡಿದವನಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆರವರು ನಮ್ಮ ಕೆಲಸವನ್ನು ಒಪ್ಪಿ ನನ್ನನ್ನು ವಿಧಾನಪರಿಷತ್‌ಗೆ ಶಿಫಾರಸ್ಸು ಮಾಡಿದರು. ಅದನ್ನು ಒಪ್ಪಿ ರಾಹುಲ್‌ಗಾಂಧಿ ನೇಮಕ ಮಾಡಿದರು. ಹಿಂದೆ ಒಂದು ವರ್ಷ ನನಗೆ ವಿಧಾನ ಪರಿಷತ್ ಸದಸ್ಯನಾಗುವ ಅವಕಾಶ ಸಿಕ್ಕಿತ್ತು. ಆಗ ಉಳಿದವರು ಆರು ವರ್ಷದಲ್ಲಿ ಮಾಡುವ ಕೆಲಸವನ್ನು ನಾನು ಒಂದೇ ವರ್ಷದಲ್ಲಿ ಮಾಡಿ ತೋರಿಸಿದ್ದೇನೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತುಮಕೂರು ಜಿಲ್ಲಾಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ವಿಧಾನ ಪರಿಷತ್ ಸದಸ್ಯರಾಗಿರುವ ಚಿಕ್ಕನಾಯಕನಹಳ್ಳಿಯ ರಮೇಶ್‌ಬಾಬು ತನಗೆ ವಹಿಸಿದ ಜವಾಬ್ದಾರಿಯನ್ನು ಅತ್ಯಂತ ದಕ್ಷತೆಯಿಂದ ನಿರ್ವಹಿಸುವ ಪ್ರಾಮಾಣಿಕ ವ್ಯಕ್ತಿಯಾಗಿದ್ದು,ಜಿಲ್ಲೆ ಇವರಿಂದ ಹೆಚ್ಚಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ ಎಂದು ತಿಳಿಸಿದರು.
ರಮೇಶ್‌ಬಾಬು ರವರು ಈ ಹಿಂದೆ ಜೆಡಿಎಸ್ ಪಕ್ಷದಿಂದ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿಯಾಗಿದ್ದಾಗ, ಶಿಕ್ಷಕರ ಹಲವಾರು ಬೇಡಿಕೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದಾರೆ. ವಿಧಾನಸೌಧದ ಪ್ರತಿ ಟೇಬಲ್‌ಗೂ ತಿರುಗಿ, ಶಿಕ್ಷಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.ಹಾಗಾಗಿ ಅವರಿಂದ ಮತ್ತಷ್ಟು ಸೇವೆಯ ನಿರೀಕ್ಷೆಯಲ್ಲಿದ್ದೇವೆ ಎಂದರು.
ಪಕ್ಷದ ಸಿದ್ದಾಂತವನ್ನು ವಿಧಾನಸಭೆಯ ಒಳಗೆ ಮತ್ತು ಹೊರಗೆ ಮತ್ತು ಒಳಗೆ ಅತ್ಯಂತ ಸಮರ್ಥವಾಗಿ ಎತ್ತಿ ಹಿಡಿಯುವ ರಮೇಶಬಾಬು ಅವರಿಗೆ ಎಂ.ಎಲ್.ಸಿ ಸ್ಥಾನ ಸಿಕ್ಕಿರುವುದು ಮೆಚ್ಚುವಂತಹದ್ದು,ಸಹಕಾರ ಸಂಘಗಳ ನಿರ್ದೇಶಕರಾಗಿ, ಅಧ್ಯಕ್ಷರಾಗಿ ಕೆಲಸ ಮಾಡುತ್ತಲೇ ರಾಜಕೀಯ ರಂಗ ಪ್ರವೇಶಿಸಿ,ಎರಡು ಬಾರಿ ಎಂ.ಎಲ್.ಸಿ ಆಗಿದ್ದಾರೆ. ಉಜಕಾರಿಣಿಯಾಗಿ ಅಷ್ಟೇ ಅಲ್ಲ.ಸಮಾಜ ಸೇವಕರಾಗಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳನ್ನು ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಮಾಡಿದ್ದಾರೆ. ಅವರಿಗೆ ಜಿಲ್ಲೆಯ ಸಮಸ್ತ ಶಿಕ್ಷಕರ ಪರವಾಗಿ ಅಭಿನಂದನೆ ಸಲ್ಲಿಸುವುದಾಗಿ ಪರಶಿವಮೂರ್ತಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಮೇಶಬಾಬು ಅಭಿಮಾನಿ ಬಳಗದ ಅಧ್ಯಕ್ಷ ರಾಮುಸ್ವಾಮಿ ಮಾತನಾಡಿ,ವಿಧಾನಪರಿಷತ್ ಸದಸ್ಯರಾಗಿ ನೇಮಕವಾಗಿರುವ ರಮೇಶ್ ಬಾಬು ],ಸಜ್ಜರು, ಸರಳ ವ್ಯಕ್ತಿತ್ವ ನೇರ ಮತ್ತು ನಿಷ್ಠೂರು ನಡೆಗೆ ಹೆಸರಾಗಿದ್ದಾರೆ.ಪ್ರತಿಯೊಬ್ಬರಿಗೂ ಸ್ಪಂದಿಸುವ ಒಳ್ಳೆಯ ಗುಣ ಅವರಲ್ಲಿದೆ.ಹಾಗಾಗಿಯೇ ಅವರಿಗೆ ಇಂದು ಅಭಿನಂದನೆಯನ್ನು ಇಟ್ಟುಕೊಂಡಿದ್ದೇವೆ.ಇನ್ನು ಹೆಚ್ಚಿನ ರಾಜಕೀಯ ಅಧಿಕಾರ ಸಿಗಲಿ, ಶಿಕ್ಷಕರ ಕ್ಷೇತ್ರದ ಸಮಸ್ಯೆಗಳನ್ನು ಅದ್ಯತೆಯ ಮೇಲೆ ಬಗೆ ಹರಿಸಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.
ಈ ಸಂದರ್ಭದಲ್ಲಿ ರಮೇಶಬಾಬು ಅಭಿಮಾನಿ ಬಳಗದ ಅಧ್ಯಕ್ಷರಾದ ರಾಮುಸ್ವಾಮಿ,ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪರಶಿವಮೂರ್ತಿ,ತಾಲೂಕು ಅಧ್ಯಕ್ಷ ತಿಮ್ಮೇಗೌಡ,ಪ್ರೌಢಶಾಲೆ ಶಿಕ್ಷಕರ ಸಂಘದ ಲೋಕೇಶ್, ಉಮೇಶರೆಡ್ಡಿ, ಹನುಮೇಶ್, ಬೀರೇಂದ್ರ, ದೊಡ್ಡಯ್ಯ, ತುಮಕೂರು ವಿವಿ ರಾಮಕೃಷ್ಣಪ್ಪ, ಮಂಜುಳ, ಮಹಾಲಿಂಗಪ್ಪ. ತಾ.ಪಂ.ಮಾಜಿ ಸದಸ್ಯ ರಂಗಸ್ವಾಮಯ್ಯ ಮತ್ತಿತರರು ಉಪಸ್ಥಿತರಿದ್ದರು.

 

 

 

(Visited 1 times, 1 visits today)
Previous Articleಹಿಂದೂ ಮಹಾಗಣಪತಿಯ ವಿಸರ್ಜನಾ ಮಹೋತ್ಸವ
Next Article ಅಂಬ್ಯುಲೆನ್ಸ್ ಡ್ರೈವರ್ ಗಳು ರೋಗಿಗಳ ಪಾಲಿಗೆ ದೇವರಾದರೆ, ಸಮಾಜಕ್ಕೆ ಆಸ್ತಿ ಇದ್ದಂತೆ: ಇಕ್ಬಾಲ್ ಅಹಮದ್ ಹೇಳಿಕೆ
News Desk Benkiyabale

Related Posts

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm news
ತಾಜಾ ಸುದ್ಧಿಗಳು
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm
news

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm
news

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm
news

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
news

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
news

ರೈತರ ಬೃಹತ್ ಪಾದಯಾತ್ರೆಗೆ ಚಾಲನೆ

August 07, 2026 4:54 pm
Our Youtube Channel
Our Picks

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

August 07, 2026 5:05 pm

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm

ಮಕ್ಕಳು ಕಲೆ ಕಲಿತು ಭವಿಷ್ಯದ ಪ್ರತಿಭೆಗಳಾಗಿ: ಈಶ್ವರ್ ಕು.ಮಿರ್ಜಿ

August 07, 2026 4:57 pm
News Tags
Accident Ambedkar Araga jnanendra BJP Chikkanayakanahalli Congress crime DC dcm dr.g.parameshwar gs basavaraju Gubbi Jds kannada news karnataka kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest SIR tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ

By News Desk BenkiyabaleAugust 07, 2026 5:05 pm

ತುಮಕೂರು: ಮಧುಮೇಹ ರೋಗಿಗಳು ಅನುಭವಿಸುವ ಡಯಾಬಿಟಿಕ್ ಪುಟ್ ಕಾಯಿಲೆಯನ್ನು ಆರಂಭದಲ್ಲೇ ಗುರುತಿಸಿ,ಸುಧಾರಿತ ವ್ಯಾಸ್ಕ÷್ಯಲರ್ ಚಿಕಿತ್ಸೆಯ ಮೂಲಕ ಅಂಗವೈಕಲ್ಯವನ್ನು ತಡೆಯಬಹುದಾಗಿದೆ ಎಂದು…

ಅಸಹಾಯಕ ಮಹಿಳೆಯನ್ನು ದತ್ತು ಪಡೆದ ಇಕ್ಬಾಲ್ ಅಹಮದ್

August 07, 2026 5:03 pm

ಬದಲಾವಣೆ ಅಗತ್ಯ ಎಂಬ ಹೆಸರಿನಲ್ಲಿ ರಾಜಕೀಯ ಅಭಿಯಾನ

August 07, 2026 5:01 pm

ವಿಶ್ವ ಸ್ತನ್ಯಪಾನ ಸಪ್ತಾಹದ ಅಂಗವಾಗಿ ಜಾಗೃತಿ ಕಾರ್ಯಕ್ರಮ

August 07, 2026 4:59 pm
News by Date
August 2026
M T W T F S S
 12
3456789
10111213141516
17181920212223
24252627282930
31  
« Jul    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.