ತುಮಕೂರು: ಜೆಡಿಯು ಪಕ್ಷದ ವತಿಯಿಂದ ನಗರದಲ್ಲಿ ಅಕ್ಟೋಬರ್ ೧೨ ರಂದು ನಡೆಯುವ ರಾಷ್ಟçಪಿತ ಮಹಾತ್ಮಗಾಂಧಿ,ಮಾಜಿ ಮುಖ್ಯಮಂತ್ರಿ ಜೆ.ಹೆಚ್.ಪಟೇಲ್ ಹಾಗೂ ಜೆಡಿಯು ರಾಜ್ಯಾಧ್ಯಕ್ಷ ಮಹಿಮ.ಜೆ.ಪಟೇಲ್ ಅವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿರುವ ಚುನಾವಣಾ ಸುಧಾರಣೆಗಳ ಕುರಿತು ವಿಚಾರ ಸಂಕಿರಣದ ಪೂರ್ವಭಾವಿ ಸಭೆಯನ್ನು ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್, ಚುನಾವಣೆಗಳು ಅವುಗಳು ನಡೆಯುತ್ತಿರುವ ರೀತಿಗಳ ಬಗ್ಗೆ ರಾಜಕೀಯ ಪಕ್ಷಗಳ ಜೊತೆಗೆ,ಜನಸಾಮಾನ್ಯರಲ್ಲಿಯೂ ಹಲವಾರು ಅನುಮಾನ ಗಳು ಹುಟ್ಟಿಕೊಂಡಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣಬಹುದಾಗಿದೆ.ಮತಗಳ್ಳತನ,ಮತಗಳನ್ನು ಖರೀದಿಸುವುದು, ಆಸೆ, ಅಮೀಷಗಳ ಮೂಲಕ ಮತದಾರರನ್ನು ಭ್ರಷ್ಟರನ್ನಾಗಿಸಿ,ತಮ್ಮ ಬೆಳೆ ಬೆಯಿಸಿಕೊಳ್ಳುತ್ತಿರುವ ಇಂದಿನ ಯುಗದಲ್ಲಿ ಮತದಾನ ವೆಂಬುದು ಒಂದು ಪವಿತ್ರ ಕರ್ತವ್ಯ.ಮತಗಳನ್ನು ಮಾರಿಕೊಳ್ಳಬಾರದು ಎಂಬ ನೈತಿಕ ರಾಜಕಾರಣದ ಪಾಠವನ್ನು ಜನರಿಗೆ ತಿಳಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷರಾದ ಮಹಿಮ ಜೆ ಪಟೇಲ್ ಅವರ ನೇತೃತ್ವದಲ್ಲಿ ನಗರದ ಕನ್ನಡ ಭವನದಲ್ಲಿ ಆಕ್ಟೋಬರ್ ೧೨ ರಂದು ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇರುವ ಎಲ್ಲರೂ ಪಾಲ್ಗೊಳ್ಳುವಂತೆ ಮಾಡಬೇಕೆಂದರು.
ಮು0ಬರುವ ೨೦೨೬ರಲ್ಲಿ ನಡೆಯುವ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಯು ಪಕ್ಷ ಡಾ.ನಾಗರಾಜು ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಈಗಾಗಲೇ ಘೋಷಣೆ ಮಾಡಿದೆ.ಪದವಿಧರರ ಕ್ಷೇತ್ರದ ಮತದಾರರಾಗಿ ಹೆಸರು ನೊಂದಾವಣೆ ಮಾಡಿಕೊಳ್ಳಲು ನವೆಂಬರ್ ೦೬ರವರೆಗೆ ಚುನಾವಣಾ ಆಯೋಗ ಅವಕಾಶ ಕಲ್ಪಿಸಿದ್ದು,ಫಾರಂ ನಂ ೧೮ ರಲ್ಲಿ ಮಾಹಿತಿಗಳನ್ನು ತುಂಬಿ, ಅಗತ್ಯ ದಾಖಲೆಗಳೊಂದಿಗೆ ಚುನಾವಣಾ ಶಾಖೆಗೆ ಅರ್ಜಿ ಸಲ್ಲಿಸುವ ಮೂಲಕ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶವಿದೆ.ಹಾಗಾಗಿ ಪದವಿ ಪಡೆದಿರುವ ಎಲ್ಲಾ ವಯಸ್ಕ ಮತದಾರರು ಆಗ್ನೇಯ ಪದವಿಧರರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನೊಂದಾಯಿಸುವ0ತೆ ಮನವಿ ಮಾಡಿದ ಅವರು, ಅಕ್ಟೋಬರ್ ೧೬ ರಿಂದ ಜೆಡಿಯು ಪಕ್ಷ ಈ ಕುರಿತು ಅಭಿಯಾನ ಹಮ್ಮಿಕೊಂಡಿದೆ ಎಂದು ಕೆ.ಆರ್.ರಂಗನಾಥ್ ತಿಳಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಜೆಡಿಯು ಪಕ್ಷ ಎನ್.ಡಿ.ಎ ಮೈತ್ರಿಕೂಟದ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ. ಬಿಹಾರದ ಮತದಾರರಾಗಿ, ಉದ್ಯೋಗ, ಜೀವನ ಹರಸಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ನೆಲೆಸಿರುವ ಬಿಹಾರದ ಪ್ರಜೆಗಳೂ ಚುನಾವಣೆಯ ವೇಳೆ ತಮ್ಮ ರಾಜ್ಯಕ್ಕೆ ತೆರಳಿ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡು, ಜೆಡಿಯು ಪಕ್ಷದ ಅಭ್ಯರ್ಥಿಗಳಿಗೆ ಮತ ಚಲಾಯಿಸುವಂತೆ ಬಿಹಾರ ರಾಜ್ಯದ ಮತದಾರರಲ್ಲಿ ಜೆಡಿಎಸ್ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್ ಮನವಿ ಮಾಡಿದರು.
ಕರ್ನಾಟಕ ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಂಬ0ಧ ಚರ್ಚೆ ನಡೆಸಲಾಯಿತು ಎಂದು ರಂಗನಾಥ್ ತಿಳಿಸಿದ್ದಾರೆ.
ಈ ವೇಳೆ ಪಕ್ಷ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್,ಸುರೇಶಕುಮಾರ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಮೇಶ್ ,ಕುದೂರು ಬಸಣ್ಣ ಮತ್ತಿತರರು ಉಪಸ್ಥಿತರಿದ್ದರು.
(Visited 1 times, 1 visits today)