ತುಮಕೂರು: ನಗರದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿವತಿಯಿಂದ ರಾಜ್ಯ ಮತ್ತು ಕೇಂದ್ರದ ಅವೈಜ್ಞಾನಿಕ ಬಿಪಿಎಲ್ ಪಡಿತರ ಕಾರ್ಡ್ಗಳ ರದ್ದತಿ ಖಂಡಿಸಿ ತುಮಕೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಆಹಾರ ಸಚಿವರಿಗೆ ಜಿಲ್ಲಾಧಿಕಾರಿಗಳ ಮುಕಾಂತರ ಮನವಿ ಸಲ್ಲಿಸಲಾಯಿತು.
ಬಿಪಿಎಲ್ ಕಾರ್ಡ್ಗೆ ನಿಗಧಿಗೊಳಿಸಿರುವ ಆದಾಯ ಪ್ರಮಾಣವನ್ನು ಪುನರ್ ಅವಲೋಕಿಸಿ- ಎ.ನರಸಿಂಹಮೂರ್ತಿ
ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಸಂಚಾಲಕರಾದ ಎ.ನರಸಿಂಹಮೂರ್ತಿ ರಾಜ್ಯ ಸರ್ಕಾರ ಪಡಿತರ ಚೀಟಿ ದಾರರಿಗೆ ಮಾನದಂಡವನ್ನು ನಿಗಧಿ ಮಾಡಿದೆ ಇದು ಬಡಜನವಿರೋಧಿ ನೀತಿಯಾಗಿದ್ದು, ಹಿಂದಿನ ಸರ್ಕಾರಗಳು ನೀತಿ ಆಯೋಗದ ಆದೇಶದಂತೆ ರಾಜ್ಯ ಸರ್ಕಾರ ನಡೆಯುತ್ತಿರುವುದನ್ನು ನೋಡುತ್ತಿದ್ದೆವೆ. ಹಿಂದಿನ ನೀತಿ ಆಯೋಗದ ನಿರ್ಧಾರವನ್ನು ರಾಜ್ಯದ ಕಾಂಗ್ರೇಸ್ ಸರ್ಕಾರ ಅನುಷ್ಠಾನ ಮಾಡುತ್ತಿದೆ, ೨೦೨೩ ರಲ್ಲಿ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಣೆಯಲ್ಲಿ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಭರವಸೆಯನ್ನು ನೀಡಿತ್ತು, ಅದರ ಪ್ರಕಾರ ಅನ್ನಭಾಗ್ಯ ಯೋಜನೆಯನ್ನು ನೀಡುತ್ತೇವೆ ಎಂದು ಗ್ಯಾರಂಟಿ ನೀಡಿತ್ತು ಅದರ ಪ್ರಕಾರ ಅನ್ನಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗಿದೆ, ಆದರೆ ಈ ಎರಡುವರೆ ವರುಷ ಪೂರೈಯಿಸುತ್ತಿರುವ ಸಂದರ್ಭದಲ್ಲಿ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆ ಕೊಡಲಾಗುತ್ತಿತ್ತು ಈ ಅನ್ನಭಾಗ್ಯ ಯೋಜನೆಯನ್ನು ರದ್ದು ಮಾಡುವಂತಹ ಕೆಲಸವನ್ನು ಅವೈಜ್ಞಾನಿಕ ಮಾನದಂಡವನ್ನ ೧೨೦೦೦೦ ಸಾವಿರ ಆದಾಯ ಗಳಿಕೆ, ಐಟಿ ರಿಟರ್ನ್, ಪಾನ್‌ಲಿಂಕ್ ಆಗಿರುವಂತಹ ಕುಟುಂಬಗಳನ್ನು ಬಿಪಿಎಲ್‌ನಿಂದ ಎಪಿಎಲ್‌ಗೆ ಉನ್ನತ್ತೀಕರಿಸುವಂತಹ ಅವೈಜ್ಞಾನಿಕವಾಗಿರುವಂತಹ ಸ್ಪಷ್ಟ ತೀರ್ಮಾನಕ್ಕೆ ಬಂದಿರುವುದು ಖಂಡನೀಯವಾಗಿದೆ.
ಸರ್ಕಾರ ನುಡಿದಂತೆ ನಡೆಯುತ್ತಿದ್ದೇವೆ ಎಂದು ಪ್ರಚಾರ ತೆಗೆದುಕೊಳ್ಳುತ್ತಿದೆ ಅರ್ಹ ಕುಟುಂಬಗಳನ್ನು ಬಿಟ್ಟು ೧೨೦೦೦೦ ಸಾವಿರ ಆದಾಯದ ಮಿತಿಯನ್ನು ತೋರಿಸುತ್ತಿರುವುದು ಅವೈಜ್ಞಾನಿಕವಾಗಿದೆ. ಇಂದು ಇಡಬ್ಯಲೂಎಸ್ ಗೆ ತಲಾದಾಯವನ್ನು ಸುಮಾರು ಎರಡುವರೆ ಲಕ್ಷದಿಂದ ೫ ಲಕ್ಷದ ವರೆಗೆ ಏರಿಸಿರುವುದಿದೆ. ಆದರೆ ಬಿಪಿಎಲ್ ಕುಟುಂಬಗಳಿಗೆ ೧೨೦೦೦೦ ತಲಾದಯವನ್ನು ಏರಿಸಿರುವುದು ಅವೈಜ್ಞಾನಿಕವಾಗಿದೆ. ಈಗಿನ ಸಂದರ್ಭಕ್ಕೆ ಈ ಅವೈಜ್ನಾನಿಕ ತಲಾದಾಯವನ್ನು ಪುನರ್ ಅವಲೋಕಿಸಬೇಕು, ಹಾಗೇಯೆ ಖಾಸಗೀ ಕಂಪನಿಗಳಲ್ಲಿ ಸಣ್ಣ-ಪುಟ್ಟ ಸೆಕ್ಯೂರಿಟಿಗಳಲ್ಲಿ ಕೆಲಸ ಮಾಡುತ್ತಿರುವಂತಹ ಕಾರಣಾಂತರಗಳಿಗೆ ಐಟಿ ರಿಟರ್ನ್ ಸಂಬ0ಧ ಪಾನ್ ಕಾರ್ಡ್ನ್ನು ಲಿಂಕ್ ಮಾಡಲೇಬೇಕಾದಂತಹ ಪರಿಸ್ಥಿತಿಯಿದ್ದು ಪಾನ್ ಕಾರ್ಡ್ ಲಿಂಕ್ ಆದ ಕುಟುಂಬಗಳನ್ನು ಐಟಿ ರಿಟನ್ ಎಂದು ಪರಿಗಣಿಸುವುದು ಅವೈಜ್ಞಾನಿಕವಾಗಿದೆ. ಇದನ್ನು ಕೂಲಂಕುಶವಾಗಿ ಪರಿಶೀಲನೆ ಮಾಡಬೇಕಾಗಿದೆ ಎಂದರು
ಮನವಿಯನ್ನು ಆಹಾರ ಇಲಾಖೆಯ ಸಹಾಯಕ ಆಹಾರ ನಿರೀಕ್ಷಕರಾದ ನಾಗರಾಜು ಸ್ವೀಕರಿಸಿ ತಾವು ನೀಡಿರುವ ಮನವಿಯನ್ನು ಜಿಲ್ಲಾಧಿಕಾರಿಗಳ ಮುಕಾಂತರ ಸರ್ಕಾರಕ್ಕೆ ತಲಿಪಿಸುವುದಾಗಿ ತಿಳಿಸಿ ನಮ್ಮ ತುಮಕೂರು ಜಿಲ್ಲೆಯಲ್ಲಿ ೩೨೭೧೩ ಕುಟುಂಬಗಳು ಆದಾಯ ತೆರಿಗೆ, ಪಾವತಿಸುತ್ತದ್ದಾರೆ ಎಂದು ಸರ್ಕಾರದಿಂದ ಮಾಹಿತಿಯನ್ನು ಕಳಿಸಿದ್ದು ಸರ್ಕಾರದ ಮಾಹಿತಯನ್ನು ತೆಗೆದುಕೊಂಡು ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡದೇ ಅದನ್ನು ಪರಿಶೀಲನೆ ಮಾಡಿ ಆದಾಯ ತೆರಿಗೆ ಪಾವತಿ ಮತ್ತು ೭ ಎಕರೆ ಜಮೀನು ಇರುವಂತಹವರು, ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರು ಮತ್ತು ಖಾಸಗೀ ಕಂಪನಿಗಳಲ್ಲಿ ಕೆಲಸ ಮಾಡುವಂತವರು ಇರುವುದಾದರೆ ಅಂತಹ ಕಾರ್ಡ್ಗಳನ್ನು ರದ್ದುಗೊಳಿಸಿ ಅರ್ಹ ಕುಟುಂಬಗಳನ್ನು ಪಟ್ಟಿ ಮಾಡಿ ಇವರ ಬಿಪಿಎಲ್ ಕಾರ್ಡ್ಗಳನ್ನು ರದ್ದು ಮಾಡದಂತೆ ಸರ್ಕಾರಕ್ಕೆ ಗಮನಕ್ಕೆ ತರುವುದಾಗಿ ತಿಳಿಸಿ ಮುಂದಿನ ದಿನಗಳಲ್ಲಿ ಆಹಾರ ಇಲಾಖೆಯ ಜಂಟಿನಿರ್ದೇಶಕರು ಹಾಗೂ ಜಿಲ್ಲಾಧಿಕಾರಿಗಳ ಸಮುಖದಲ್ಲಿ ಸಭೆ ಕರೆಯಲಾಗುವುದೆಂದರು.
ಸ್ಲಂ ಸಮಿತಿ ಅರುಣ್ ಮಾತನಾಡಿ ಒಂದೊ0ದು ಪಡಿತರ ಚೀಟಿದಾರರ ಅಂಗಡಿಗಳಲ್ಲಿ ೧೫೦-೨೦೦ ಕಾರ್ಡ್ಗಳನ್ನು ರದ್ದು ಮಾಡುವಂತಹ ಟಾರ್ಗೇಟ್‌ನ್ನು ಈಗಿನ ರಾಜ್ಯ ಸರ್ಕಾರ ನಿಗಧಿ ಮಾಡಿದೆ. ನೀತಿ ಆಯೋಗ ಹೇಳಿರುವ ಪ್ರಕಾರ ರಾಜ್ಯದಲ್ಲಿ ಸುಮಾರು ೪೦ ಲಕ್ಷ ಬಿಪಿಲ್ ಕಾರ್ಡ್ಗಳನ್ನು ರದ್ದು ಮಾಡಬೇಕು ಮೊದಲನೇ ಹಂತದಲ್ಲಿ ೮ ಲಕ್ಷ ಕುಟುಂಬಗಳನ್ನು ಮಾನದಂಡಗಳನ್ನು ನಗಧಿಪಡಿಸಿ ರದ್ದು ಮಾಡುವ ತೀರ್ಮಾನಕ್ಕೆ ಬಂದಿದ್ದು, ಜನವಿರೋಧಿ ಮಾನದಂಡಗಳನ್ನು ಕೈಬಿಡಬೇಕು, ಒಂದು ಪಡಿತರ ಚೀಟಿ ರದ್ದಾದರೆ ರಾಜ್ಯ ಸರ್ಕಾರ ನೀಡುತ್ತಿರುವ ಗ್ಯಾರಂಟಿಗಳಿ0ದ ವಂಚಿತರಾಗುತ್ತಾರೆ, ಸರ್ಕಾರಿ ಸವಲತ್ತುಗಳನ್ನು ಕಳೆದುಕೊಳ್ಳಬೇಕಾಗುತ್ತದೆ ಮೂಲ ದಾಖಲೆಯನ್ನೇ ರದ್ದು ಮಾಡುತ್ತಿರುವ ನೀತಿಯು ಜನವಿರೋದಿಯಾಗಿದ್ದು ಇದನ್ನು ಹಿಂಪಡೆಯಬೇಕೆ0ದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಪೂರ್ಣಿಮಾ ಗಂಗಾ, ಲಕ್ಷö್ಮಮ್ಮ ಮಾತನಾಡಿ ಪಡಿತರ ಕಾರ್ಡ್ ವಜಾಗೊಳಿಸುತ್ತಿರುವುದು ಬಡವರ ಅನ್ನ ಕಸಿಯುವ ಕೆಲಸವಾಗಿದೆ, ಮಕ್ಕಳ ಸ್ಕಾಲರ್‌ಶಿಪ್, ಪಿಂಚಣಿ, ಆರೋಗ್ಯ ಸೇವೆಗಳಿಂದ ವಂಚಿತರಾಗಿಸುವ ಸರ್ಕಾರದ ನಡೆ ಹಿಂಪಡೆಯಬೇಕು, ಸವಲತ್ತು ಕೊಡುವ ನಡೆಪದಲ್ಲಿ ಮತ್ತೊಂದು ಸವಲತ್ತು ಕಸಿಯುವುದು ಸರ್ಕಾರಕ್ಕೆ ಒಳ್ಳೆದಾಗಲ್ಲ, ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ತಲುಪಿಸುವಲ್ಲಿ ಸಾಧ್ಯವಾಗದೇ ಬಿಪಿಎಲ್ ಕಾರ್ಡ್ ಕಸಿಯುವ ಕೆಲಸ ಕಾರ್ಯಕ್ಕೆ ಕೈಹಾಕಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ ಎಂದರು.
ಪ್ರತಿಭಟನೆಯನ್ನು ನೇತೃತ್ವವನ್ನು ಸ್ಲಂ ಸಮಿತಿ, ತಿರುಮಲಯ್ಯ, ಜಾಬೀರ್‌ಖಾನ್, ಶಂಕ್ರಯ್ಯ, ಕೃಷ್ಣಮೂರ್ತಿ, ದನಂಜಯ್, ವೆಂಕಟೇಶ್, ಶಾರದಮ್ಮ ಗಂಗಾ, ವಸಂತಮ್ಮ, ಸಂದ್ಯಾಯಾದವ್, ಗುಲ್ನಾಜ್ ವಹಿಸಿದ್ದರು, ಕೋಡಿಹಳ್ಳ ಶಾಖೆಯ ಗೋವಿಂದರಾಜ್, ವೆಂಕಟೇಶ್, ಮಾರಿಯಮ್ಮ ನಗರದ ಕೃಷ್ಣ, ಮಾಧವನ್, ಅರ್ಜುನ್, ಎಸ್,ಎನ್ ಪಾಳ್ಯ ಹನುಮಕ್ಕ, ಭಾರತಿ ನಗರದ ಕೆಂಪಣ್ಣ, ಮಾಣಿಕ್ಯಮ್ಮ, ಮರಳೂರು ದಿಣ್ಣೆಯ ಮುಭಾರಕ್, ಅಬೀಬ್‌ಉನ್ನಿಸಾ, ಇಸ್ಮಾಯಿಲ್ ನಗರದ ಮುತ್ತುರಾಜು,ಸಂತು, ಹಾಗೂ ನಿವೇಶನ ಹೋರಾಟ ಸಮಿತಿಯ ಶಂಕರ್, ಗಂಗಾ, ಹನುಮಕ್ಕ, ಶೆಟ್ಟಾಳಮ್ಮ, ಮುಂತಾದವರು ಹಾಜರಿದ್ದರು.