ತುಮಕೂರು: ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ ಶ್ರೀ ವಿ.ಸೋಮಣ್ಣ ಅವರು ಇಂದು ತುಮಕೂರು-ದಾವಣಗೆರೆ ಹೊಸ ರೈಲು ಮಾರ್ಗ ಯೋಜನೆಯ ಭಾಗವಾದ ತಿಮ್ಮರಾಜನಹಳ್ಳಿ-ಊರುಕೆರೆ (೧೩ ಕಿ.ಮೀ) ರೈಲು ಮಾರ್ಗ ಮತ್ತು ತುಮಕೂರು-ರಾಯದುರ್ಗ ಹೊಸ ರೈಲು ಮಾರ್ಗ ಯೋಜನೆಯ ಊರುಕೆರೆ-ತುಮಕೂರು ಭಾಗದಲ್ಲಿ (೧೨ ಕಿ.ಮೀ) ಮೋಟಾರ್ ಟ್ರಾಲಿಯ ಮೂಲಕ ತಪಾಸಣೆ ನಡೆಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕರ್ನಾಟಕದಲ್ಲಿ ಸುಮಾರು ೧೧,೮೦೦ ಕೋಟಿ ಮೌಲ್ಯದ ಒಂಬತ್ತು ಪ್ರಮುಖ ಹೊಸ ರೈಲು ಮಾರ್ಗ ಯೋಜನೆಗಳು ಪ್ರಸ್ತುತ ಪ್ರಗತಿಯಲ್ಲಿವೆ. ರೈಲ್ವೆ ಸುರಕ್ಷತಾ ಆಯುಕ್ತರ ಪರಿಶೀಲನೆಯ ನಂತರ ತುಮಕೂರು-ಊರುಕೆರೆ-ತಿಮ್ಮರಾಜನಹಳ್ಳಿ ವಿಭಾಗದಲ್ಲಿ ರೈಲು ಸಂಚಾರಕ್ಕೆ ಚಾಲನೆ ನೀಡಲಾಗು ವುದು ಎಂದು ಹೇಳಿದರು.
ತುಮಕೂರು – ರಾಯದುರ್ಗ ಹೊಸ ಮಾರ್ಗ ಯೋಜನೆಯ ಭಾಗವಾಗಿರುವ ದೊಡ್ಡಹಳ್ಳಿ – ಪಾವಗಡ-ಮಡಕಶಿರ ಭಾಗದಲ್ಲಿ ತಪಾಸಣೆಯನ್ನು ಅ. ೧೭ ರಂದು ನಡೆಸುವುದಾಗಿ ಅವರು ತಿಳಿಸಿದರು.
ತಪಾಸಣೆ ಸಮಯದಲ್ಲಿ ತುಮಕೂರು ಗ್ರಾಮೀಣ ಶಾಸಕರಾದ ಶ್ರೀ ಬಿ. ಸುರೇಶ್ ಗೌಡ, ತುಮಕೂರು ನಗರ ಶಾಸಕರಾದ ಶ್ರೀ ಜಿ.ಬಿ. ಜ್ಯೋತಿ ಗಣೇಶ್ ಮತ್ತು ಮುಖ್ಯ ನಿರ್ಮಾಣ ಎಂಜಿನಿಯರ್ ಶ್ರೀ ಪ್ರದೀಪ್ ಪುರಿ; ಮುಖ್ಯ ನಿರ್ಮಾಣ ಎಂಜಿನಿಯರ್ ಶ್ರೀ ಪ್ರಸಾದ್ ಮತ್ತು ಬೆಂಗಳೂರು ವಿಭಾಗದ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
(Visited 1 times, 1 visits today)