BenkiyabaleBenkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
Facebook Instagram YouTube WhatsApp RSS
Trending
  • ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ
  • ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ
  • ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ
  • ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!
  • ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ
  • ೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ
  • ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ಸಮಸ್ಯೆ ಪರಿಹಾರಕ್ಕೆ ಕ್ರಮ
  • ಆರು ತಿಂಗಳ ಇಂಧನ ಬವಣೆಗೆ ಮುಕ್ತಿ
Facebook Twitter Instagram YouTube RSS
Benkiyabale Benkiyabale
  • ಮುಖಪುಟ
  • ಸಂಪಾದಕೀಯ
  • ತುಮಕೂರು
  • ಬೆಂಗಳೂರು
  • ರಾಜ್ಯ
  • ರಾಷ್ಟ್ರೀಯ
  • ವಿದೇಶ
  • ಅಂಕಣಗಳು
  • ಕ್ರೀಡೆ
  • ಸಿನಿಮಾ
  • ವಿಜ್ಞಾನ
  • ಇತರೆ
  • ವಿಡಿಯೋ
  • E-Paper
BenkiyabaleBenkiyabale
Home » ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯಾಗಿದೆ
ಇತರೆ ಸುದ್ಧಿಗಳು

ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯಾಗಿದೆ

ನೆನಪುಗಳು ಮತ್ತು ಪ್ರತಿಬಿಂಬಗಳು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಡಾ.ಜಿ.ಪರಮೇಶ್ವರ ಹೇಳಿಕೆ
By News Desk BenkiyabaleUpdated:October 18, 2025 1:51 pm

ತುಮಕೂರು: ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯೇ ಆಗಿದೆ.೧೯೪೭ರಲ್ಲಿ ಶೇ೩ರಷ್ಟಿದ್ದ ಸಾಕ್ಷರತೆ,ಪ್ರಸ್ತುತ ಶೇ೮೦ರಷ್ಟಿದೆ.ಇದರ ಫಲವಾಗಿ ಇಂದು ಇಡೀ ವಿಶ್ವದಲ್ಲಿಯೇ ದೊಡ್ಡ ತಾಂತ್ರಿಕ ಮಾನವ ಸಂಪನ್ಮೂಲವನ್ನು ಉತ್ಪಾಧಿಸುವ ದೊಡ್ಡ ರಾಷ್ಟçವಾಗಿದೆ.ಮೆಡಿಕಲ್, ಇಂಜಿನಿಯರಿAಗ್ ಹಾಗೂ ಜನರಲ್ ಡಿಗ್ರಿ ಪಡೆದ ಲಕ್ಷಾಂತರ ಜನ ಯುವಜನರು ನಮ್ಮದೇಶದಲ್ಲಿ ಇದ್ದಾರೆ ಇದಕ್ಕೆ ಕಾರಣ ಶಿಕ್ಷಣ ಎಂದು ಗೃಹ ಹಾಗೂ ತುಮಕೂರು ವಿವಿ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥೆ ಆಂತರ0ಗದ ಆವಲೋಕನದ ಇಂಗ್ಲಿಷ್ ಅನುವಾದ ನೆನಪುಗಳುಮತ್ತು ಪ್ರತಿಬಿಂಬಗಳು ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಶಿಕ್ಷಣ ಪಡೆದ ಯುವಜನತೆಗೆ ಅವಕಾಶಗಳನ್ನು ಸೃಷ್ಟಿಸಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು.
ತುಮಕೂರಿನಲ್ಲಿ ಸಾಧನೆ ಮಾಡುವುದು ತುಂಬ ಕಷ್ಟ ಅಂತಹದರಲ್ಲಿ ಒಂದು ತಳಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ ಶಿಕ್ಷಣ ಪಡೆಯುವುದು ಕಷ್ಟ.ಇಂತಹ ಹೊತ್ತಿನಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ತನಗಿದ್ದ ಸರಕಾರಿ ಹುದ್ದೆಯನ್ನು ಬಿಟ್ಟು, ಏಕಾಂಗಿಯಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ,ಇತರರಿಗೆ ಮಾದರಿಯಾಗಿದ್ದಾರೆ.ದ್ದಾರೆ.ಶ್ರೀದೇವಿ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವಾಗಬೇಕು. ಆ ಮೂಲಕ ಮತ್ತಷ್ಟು ಜನರಿಗೆ ಅವಕಾಶದ ಬಾಗಿಲುಗಳನ್ನು ತೆರೆಯುವಂತಾಗಬೇಕು.ಹಣಬಲ, ಜಾತಿ ಬಲ ವಿಲ್ಲದೆ ಇಂತಹ ಸಂಸ್ಥೆ ಕಟ್ಟಿ ಬೆಳೆಸಿ, ಸಾವಿರಾರು ಯುವಜನರ ಜ್ಞಾನಕೇಂದ್ರವಾಗಿಸಿದ ಹುಲಿನಾಯ್ಕರ್ ಅವರಿಗೆ ತುಮಕೂರು ಜನತೆಯ ಬರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.
ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನ ಅಂತರ0ಗದ ಆವಲೋಕನ ಇಂಗ್ಲೀಷ್ ಕೃತಿ ರೆಮಿನ್‌ರೆಷನ್ ಅಂಡ್ ರಿಪ್ಲೇಕ್ಷನ್(ನೆನಪುಗಳು ಮತ್ತು ಪ್ರತಿಬಿಂಬಿಗಳು) ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ.ಪಾಟೀಲ್,ಬಾಂಬೆ ಕರ್ನಾಟಕದ ಸಣ್ಣ ಹಳ್ಳಿ ತುಪ್ಪದ ಕುರಿಹಟ್ಟಿ ಗ್ರಾಮದಿಂದ ಬಂದು, ಇಲ್ಲಿ ತನ್ನ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.ಇಂದು ಬಿಡುಗಡೆಯಾಗಿರುವ ಅವರ ಅಂತರAಗದ ಆವಲೋಕನ ಕನ್ನಡ ಮತ್ತು ಇಂಗ್ಲಿಷ್ ಕೃತಿ,ಕೇವಲ ಹುಲಿನಾಯ್ಕರ್ ಅವರ ಅಂತರ0ಗವನ್ನು ಬಿಂಬಿಸದೆ ಇಡೀ ನಾಡಿನ ಸಾಂಸ್ಕೃತಿಕ ಚರಿತ್ರೆಯನ್ನು ಅನಾವರಣಗೊಳಿಸಿದೆ ಎಂದರು.
ಸೂಲಗಿತ್ತಿಯಾಗಿ ಸೇವೆ ಮಾಡುತ್ತಿದ್ದ ತಾಯಿಯಿಂದ ಬಂದ ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಂಡು ಇಂದಿಗೂ ಅದೇ ರೀತಿಯಲ್ಲಿ ಬದುಕುತ್ತಿರುವ ಡಾ.ಎಂ.ಆರ್.ಹುಲಿನಾಯ್ಕರ್ ಮಿತ ಭಾಷಿ.ವಿಧಾನಪರಿಷತ್ ಸದಸ್ಯರಾಗಿದ್ದಾಗಲೂ ಯಾರೊಂದಿಗೂ ವೈಮನಸ್ಸು ಕಟ್ಟಿಕೊಳ್ಳದೆ,ಎಲ್ಲರೊಂದಿಗೆ ಸ್ನೇಹಮಯಿಯಾಗಿದ್ದರು. ಇಂದಿಗೂ ಅದನ್ನೇ ಮುಂದುವರೆಸಿ ಕೊಂಡು ಹೊಗುತ್ತಿರುವುದು ಸಂತೋಷದ ವಿಚಾರ.ಅವರ ವಿನಮ್ರ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಹೆಚ್.ಕೆ.ಪಾಟೀಲ್ ಶುಭ ಹಾರೈಸಿದರು.
ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ,ಕಾಯಕವಿಲ್ಲದೆ ಬೇರೆ ಲೋಕವಿಲ್ಲ ಎಂದು ನಂಬಿದವನು ನಾನು. ವೈದ್ಯಕೀಯ ಕ್ಷೇತ್ರಕ್ಕೆ ನಾನು ಬಂದಿದ್ದು ಆಕಸ್ಮಿಕ.ಹೈಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಆಶು ಭಾಷಣ,ಪ್ರಬಂಧ ಸ್ಪರ್ಧೆಗಳಲ್ಲಿ ಭಾಗಿಯಾಗಿ, ಬರೆಯವಣಿಯನ್ನು ಕಲಿತಿದ್ದ ನನಗೆ ವೈದ್ಯಕೀಯ ಕಾಲೇಜು ಸೇರ್ಪಡೆ ನಂತರ ಬರವಣಿಗೆಯಿಂದ ದೂರ ಉಳಿದಿದ್ದೆ.ಆದರೆ ಗೆಳೆಯ ಕಮಲೇಶ್ ಅವರ ಒತ್ತಾಸೆಯ ಮೇರೆಗೆ ನನಗೆ ತಿಳಿದಿದ್ದನ್ನು ಪೋನಿನ ಮೂಲಕ ಹೇಳಿದೆ.ಅದನ್ನು ಕಮಲೇಶ್ ಬಹಳ ಅಚ್ಚುಕಟ್ಟಾಗಿ ನಿರೂಪಿಸಿ, ಪುಸ್ತಕ ರೂಪಕ್ಕೆ,ಅದು ನನ್ನ ಜೀವನಕ್ಕೆ ಹತ್ತಿರವಾಗಿತ್ತು ಎಂದರು.
ನನ್ನ ಪ್ರತಿ ಹಂತದ ಬೆಳೆವಣಿಗೆ ಕುರಿತ ಆಂತರರ0ಗದ ಅವಲೋಕನ ಎಂಬ ಕೃತಿಯ ಮೂಲಕ ನನ್ನ ಆತ್ಮಕಥನವಾಗಿ ೨೦೨೩ರ ನವೆಂಬರನಲ್ಲಿ ಪುಸ್ತಕರೂಪದಲ್ಲಿ ಹೊರಬಂದಿತ್ತು.ಅದರ ಇಂಗ್ಲಿಷ್ ತರ್ಜುಮೆ ಪ್ರತಿ ನೆನಪುಗಳು ಮತ್ತು ಪ್ರತಿಬಿಂಬಿಗಳು ಎಂಬ ಹೆಸರಿನಲ್ಲಿ ಇಂಗ್ಲಿಷ್‌ನಲ್ಲಿ ಕೃಷ್ಣ ಅವರ ಅನುವಾದದಲ್ಲಿ ಮೂಡಿಬಂದಿದೆ.ತುಮಕೂರು ಸೇರಿದಂತೆ ಕರ್ನಾಟಕದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಿದ್ದಗಂಗೆ ಮತ್ತು ಸಿದ್ದಾರ್ಥ ಸಂಸ್ಥೆಗಳ ಕೊಡುಗೆ ಅಪಾರ. ಅದೇ ದಾರಿಯಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯೂ ಸಾಗುತ್ತಿದೆ. ಎಲ್.ಕೆ.ಜಿ.ಯಿಂದ ಮೆಡಿಕಲ್ ಕಾಲೇಜುವರೆಗೆ ಶಿಕ್ಷಣ ನೀಡುತ್ತಿದೆ.ಇದಕ್ಕೆ ಹತ್ತಾರು ಜನರು ಕೈಜೋಡಿಸಿದ್ದಾರೆ. ಕುಟುಂಬದ ಎಲ್ಲರೂ ನನ್ನ ಸಾಧನೆಯ ಹಿಂದಿದ್ದಾರೆ ಎಂದು ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.
ಕಾರ್ಯಕ್ರಮದಲ್ಲಿ ಅಂತರ0ಗದ ಅವಲೋಕನ ಕೃತಿಯ ಮೊದಲ ಪ್ರತಿಯನ್ನು ಏಮ್ಸ್ ಅಧ್ಯಕ್ಷರಾದ ಡಾ.ಪದ್ಮಶ್ರೀ ವಿಕಾಸ ಮಹಾತ್ಮೆ ಸ್ವಿಕರಿಸಿ, ಮಾತನಾಡಿದರು.ಶಿಕ್ಷಣ ತಜ್ಞರಾದ ಡಾ.ಸಿ.ನಾಗಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಅಂತರ0ಗದ ಅವಲೋಕನ ಕೃತಿಯ ಇಂಗ್ಲೀಷ್ ಅನುವಾದಕ ವಿ.ಕೃಷ್ಣ, ವಿಧಾನಪರಿಷತ್ ಸದಸ್ಯರಾದ ಎಫ್.ಹೆಚ್.ಜಕ್ಕಪ್ಪ, ಶಿಕ್ಷಣ ತಜ್ಞರು ಮಾಜಿ ಉಪಕುಲಪತಿ ಡಾ.ತಿಮ್ಮೇಗೌಡ, ಡಾ.ಎಂ.ಆರ್.ಹುಲಿನಾಯ್ಕರ್,ಶ್ರೀಮತಿ ಶಾಂತಾದುರ್ಗಾದೇವಿ, ಡಾ.ರಮಣ್ ಹುಲಿನಾಯ್ಕರ್,ಅಂಬಿಕಾ ಹುಲಿನಾಯ್ಕರ್,ಎಂ.ಎಸ್.ಪಾಟೀಲ್, ಡಾ. ಲಾವಣ್ಯ ಹುಲಿನಾಯ್ಕರ್, ಪತ್ರಕರ್ತ ಎಸ್.ನಾಗಣ್ಣ, ಟಿ.ಎನ್.ಮಧುಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

(Visited 1 times, 1 visits today)
Previous Articleಸಚಿವರಿಂದ ತಿಮ್ಮರಾಜನಹಳ್ಳಿ, ಊರುಕೆರೆ ವಿಭಾಗದ ತಪಾಸಣೆ
Next Article ಹುಳಿಯಾರು ಬಂದ್‌ಗೆ ಕರೆ ಕೊಡಲು ನಿರ್ಧಾರ
News Desk Benkiyabale

Related Posts

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm news
ತಾಜಾ ಸುದ್ಧಿಗಳು
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm
news

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm
news

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm
news

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
news

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
news

೫೬ ಶಿಬಿರಾರ್ಥಿಗಳಿಗೆ ಉಚಿತ ಕ್ಷೌರ ಸೇವೆ

July 20, 2026 5:26 pm
Our Youtube Channel
Our Picks

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

July 21, 2026 5:46 pm

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm

ಅಂ. ವಿಮಾನ ನಿಲ್ದಾಣ ಬೆಂಗಳೂರು-೨ ನಿರ್ಮಾಣ ಪ್ರಸ್ತಾವನೆ ಸ್ವಾಗಾತಾರ್ಹ

July 21, 2026 5:36 pm
News Tags
Accident Ambedkar Araga jnanendra BJP Chikkanayakanahalli Congress crime DC gs basavaraju Gubbi jc madhuswamy Jds kannada news karnataka Kn rajanna kodigenahalli Koratagere kunigal local news madhugiri Mla Mla jyothiganesh mlc r.rajendra pavagada Police Protest tumakur tumkur Tumkur dc yspatil Tumkur mahanagara palike tumkur news turuvekere University ಕಾಂಗ್ರೆಸ್ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಕೊರಟಗೆರೆ: ಚಿಕ್ಕನಾಯಕನಹಳ್ಳಿ ಜಿಲ್ಲಾಡಳಿತ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತುಮಕೂರು: ತುಮಕೂರು ವಿವಿ ತುಮಕೂರು ವಿಶ್ವವಿದ್ಯಾನಿಲಯ ತುರುವೇಕೆರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಳಿಯಾರು
About us
About us

BBNews 24×7 is Kannada Online News Portal from Benkiyabale Kannada News Paper Team. Benkiyabale is very popular Daily Newspaper publishing from Tumkur City.

Email us: benkiyabale@gmail.com
Contact: +1-320-0123-451


• Terms of Service
• Privacy Policy

Facebook Instagram YouTube WhatsApp RSS
ಅಂಕಣಗಳು

ಬಡವರ ಗೋಳು ಕೇಳುವರ‍್ಯಾರು

June 15, 2026 5:20 pm

ಬಡವರ ಕಣ್ಣೀರು ತರಿಸುತ್ತಿರುವ ಪಡಿತರ

November 21, 2024 6:06 pm

ಶಕ್ತಿ ಯೋಜನೆ : ರಸ್ತೆ ಸಾರಿಗೆ ನಿಗಮಕ್ಕೆ ೨೪.೪೨ ಕೋಟಿ ಆದಾಯ

August 03, 2023 4:59 pm

ಜಿಲ್ಲೆಯಲ್ಲಿ ಕಸಾಪ ಸಾಹಿತ್ಯ ಸಮ್ಮೇಳನಗಳು ಯಶಸ್ವಿ

December 13, 2022 5:26 pm
Don't Miss
news

ಎನ್‌ಹೆಚ್-೨೦೬ ರಸ್ತೆ, ಕೆಪಿಟಿಸಿಎಲ್, ಬಿಎಸ್‌ಎನ್‌ಎಲ್ ೪ಜಿ ಯೋಜನೆಗಳ ಪ್ರಗತಿ ಪರಿಶೀಲನೆ: ಕಾಮಗಾರಿಗಳಿಗೆ ವೇಗ ನೀಡಲು ಜಿಲ್ಲಾಧಿಕಾರಿ ಸೂಚನೆ

By News Desk BenkiyabaleJuly 21, 2026 5:46 pm

ತುಮಕುರು: ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟಿಯ ಹೆದ್ದಾರಿ (ಎನ್‌ಹೆಚ್)-೨೦೬ ನಾಲ್ಕು ಪಥಗಳ ರಸ್ತೆ ಕಾಮಗಾರಿ, ಕೆಪಿಟಿಸಿಎಲ್ ವಿದ್ಯುತ್…

ರೈಲ್ವೆ ಇಲಾಖೆಯ ರಾಜ್ಯ ಸಚಿವ ವಿ.ಸೋಮಣ್ಣ ಅವರ ಹುಟ್ಟು ಹಬ್ಬ ಆಚರಣೆ

July 21, 2026 5:42 pm

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣ ಖಂಡಿಸಿ ಪ್ರತಿಭಟನೆ

July 21, 2026 5:40 pm

ಬೀದಿನಾಯಿಗಳ ಅಟ್ಟಹಾಸ: ಸಾರ್ವಜನಿಕರ ಆಕ್ರೋಶ!

July 21, 2026 5:38 pm
News by Date
July 2026
M T W T F S S
 12345
6789101112
13141516171819
20212223242526
2728293031  
« Jun    
Facebook Twitter Instagram YouTube LinkedIn WhatsApp RSS
  • Home
  • ಅಂಕಣಗಳು
  • ಅಡುಗೆ
  • ನಿತ್ಯ ಭವಿಷ್ಯ
  • ಪ್ರವಾಸ
  • ಸುಭಾಷಿತ
© 2016-2026 Benkiyabale - Kannada Online News Portal. Designed by Digicube Solutions.

Type above and press Enter to search. Press Esc to cancel.