ಹುಳಿಯಾರು: ಹುಳಿಯಾರು ಕಸ ವಿಲೇವಾರಿ ಘಟಕಕ್ಕೆ ಜಿಲ್ಲಾಡಳಿತ ಭೂಮಿ ನೀಡದೆ ನಿರ್ಲಕ್ಷಿö್ಯ ಸಿರುವುದನ್ನು ಖಂಡಿಸಿ ಹೋರಾಟ ರೂಪಿಸುವ ಸಲುವಾಗಿ ಹುಳಿಯಾರು ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಘ ಸಂಸ್ಥೆಗಳ ಸಭೆ ನಡೆಯಿತು. ಮರ‍್ನಲ್ಕು ಮಂದಿ ಪಟ್ಟಣ ಪಂಚಾಯ್ತಿ ಸದಸ್ಯರೂ ಕೂಡ ಸಭೆಗೆ ಆಗಮಿಸಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು.
ಕೆಆರ್‌ಎಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಭಟ್ಟರಹಳ್ಳಿ ಮಲ್ಲಿಕಾರ್ಜುನ್ ಮಾತನಾಡಿ ಹುಳಿಯಾರಿನ ಜನ ಸೌಮ್ಯ ಸ್ವಭಾವದವರಾಗಿದ್ದು ಯಾವುದಕ್ಕೂ ತಿರುಗಿಬೀಳುವುದಿಲ್ಲ ಎನ್ನುವ ಕಾರಣಕ್ಕೆ ೭ ವರ್ಷಗಳಿಂದ ಕಸ ವಿಲೇವಾರಿ ಘಟಕಕ್ಕೆ ಭೂಮಿ ನೀಡದೆ ಸತಾಯಿಸುತ್ತಿದ್ದಾರೆ. ಹುಳಿಯಾರಿನ ಜನ ಮೌನ ಮುರಿಯದಿದ್ದರೆ ಕಸದ ನಡುವೆಯೇ ಬದುಕಬೇಕಾದ ದುಸ್ಥಿತಿ ನಿರ್ಮಾಣವಾಗುತ್ತದೆ. ಹಾಗಾಗಿ ಸಂಘಸAಸ್ಥೆಗಳು ಮೊದಲು ಹೋರಾಟಕ್ಕೆ ಧುಮುಕಬೇಕಿದೆ ನಂತರ ಜನ ಸಾಮಾನ್ಯರು ತಮ್ಮ ಮನೆಯ ಕಸದೊಂದಿಗೆ ಪ್ರತಿಭಟನೆಗೆ ಬರಬೇಕಿದೆ. ಆಗ ಮಾತ್ರ ದಪ್ಪ ಚರ್ಮದ ಸರ್ಕಾರಿ ಆಧಿಕಾರಿಗಳಿಗೆ ಎಚ್ಚರಿಸಲು ಸಾಧ್ಯ ಎಂದರು.
ಪಪ0 ಸದಸ್ಯ ಎಸ್‌ಆರ್‌ಎಸ್ ದಯಾನಂದ್ ಅವರು ಮಾತನಾಡಿ ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಬಳಿ ಖುದ್ದು ಪಪಂ ಸದಸ್ಯರೇ ಹೋಗಿ ಮನವಿ ಮಾಡಿದರೂ ಕಸ ವಿಲೇವಾರಿಗೆ ಜಾಗ ಕೊಟ್ಟಿಲ್ಲ. ನಮ್ಮ ನಿಯೋಗ ಹೋದಾಲೆಲ್ಲ ಒಂದೊAದು ಕಡೆ ಜಾಗ ಹೇಳಿಕಳುಹಿಸುತ್ತಾರೆ. ಅಲ್ಲಿಗೆ ಹೋಗಿ ನೋಡಿದರೆ ಅರಣ್ಯದ ಜಾಗವಾಗಿ ರುತ್ತದೆ, ಇಲ್ಲಾ ರೈತರು ಸಾಗು ಮಾಡುತ್ತಿರುವ ಜಾಗ ಆಗಿರುತ್ತದೆ. ಬಹುಮು ಖ್ಯವಾಗಿ ಯಾರಿಗೂ ಗೊತ್ತಾಗದ ಹಾಗೆ ನಾವೇ ಜಾಗ ಗುರುತಿಸಿ ಹೋದರೂ ಸಹ ಅಷ್ಟರಲ್ಲಿ ಜನ ಬಂದರ‍್ತಾರೆ. ಅವರಿಗೆ ನಾವು ಬರುವ ಸುದ್ದಿಯನ್ನು ಕೊಡುತ್ತಿರುವವರಾರು ತಿಳಿಯದಾಗಿದೆ. ಹಾಗಾಗಿ ನಾವೂ ಸಹ ನಿಮ್ಮ ಹೋರಾಕ್ಕೆ ಕೈ ಜೋಡಿಸುತ್ತಿದ್ದೇವೆ ಎಂದರು.
ಮಲ್ಲಿಕಾರ್ಜುನ್ ಅವರ ಕರೆಗೆ ಸಭೆಯಲ್ಲಿದ್ದ ಎಲ್ಲಾ ಸಂಘಸ0ಸ್ಥೆಗಳು ಸಹಮತ ವ್ಯಕ್ತಪಡಿಸಿ ದರಲ್ಲದೆ ಅಮೂಲ್ಯವಾದ ಸಲಹೆಯನ್ನೂ ಸಹ ನೀಡಿದರು. ಜನರೇ ತಮ್ಮ ಮೈ ಮೇಲೆ ಕಸ ಸುರಿದುಕೊಳ್ಳುವ ಚಳುವಳಿಯನ್ನು ಕೈ ಬಿಟ್ಟು ನಾಡಕಛೇರಿ ಮಂದೆ ಕಸ ಸುರಿಯುವ, ನಂತರ ತಾಲೂಕು ಕಛೇರಿ, ಕೊನೆಗೆ ಜಿಲ್ಲಾಧಿಕಾರಿಳ ಕಛೇರಿ ಬಳಿ ಕಸ ಸುರಿಯುವ ಚಳುವಳಿ ಮಾಡೋಣ. ಇದಕ್ಕೂ ಬಗ್ಗದಿದ್ದರೆ ಹುಳಿಯಾರ್ ಬಂದ್‌ಗೆ ಕರೆ ಕೊಡೋಣ ಎಂದು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕರವೇಯ ತಾಲೂಕು ಅಧ್ಯಕ್ಷ ಬೇಕರಿ ಪ್ರಕಾಶ್, ಹುಳಿಯಾರು ಅಧ್ಯಕ್ಷ ಗೌಡಿ, ಪಪಂ ಸದಸ್ಯರಾದ ಹೇಮಂತ್, ರಾಜುಬಡಗಿ, ಮಾಜಿ ಸದಸ್ಯ ರಾಘವೇಂದ್ರ, ತಾಪಂ ಮಾಜಿ ಸದಸ್ಯ ಏಜೆಂಟ್ ಕುಮಾರ್, ನಿವೃತ್ತ ಶಿಕ್ಷಕ ನಂದವಾಡಗಿ, ರೈತ ಮುಖಂಡರಾದ ಮಲ್ಲಿಕಾರ್ಜುನಯ್ಯ, ದಸೂಡಿ ನಾಗರಾಜು, ಅರಳಿಕೆರೆ ಪ್ರಕಾಶಣ್ಣ, ಜಯಕರ್ನಾಟಕದ ಮೋಹನ್‌ಕುಮಾರ್ ರೈ, ಕಾಮನಬಿಲ್ಲು ಪೌಂಡೇಷನ್‌ನ ಚನ್ನಕೇಶವ, ಮಹಿಳಾ ಸಂಘದ ಜಯಲಕ್ಷಿö್ಮ, ಭಜರಂಗದಳದ ಬಸವರಾಜು, ಗುರುಪ್ರಸಾದ್, ಮುಖಂಡರಾದ ಕಿರಣ್, ರವಿ, ಮುಸ್ಮಿಂ ಸಂಘದ ಇಮ್ರಾಜ್ ಸೇರಿದಂತೆ ಅನೇಕರು ಇದ್ದರು.

(Visited 1 times, 1 visits today)