
ತುಮಕೂರು: ಸಿದ್ಧಗಂಗಾ ಮಠದ ಡಾ. ಶ್ರೀ ಶಿವಕುಮಾರ ಸ್ವಾಮಿಗಳು ತಮ್ಮ ಮಠದಲ್ಲಿಯೇ ಅಲ್ಲದೆ ರಾಜ್ಯದ ವಿವಿಧಡೆ ಕನ್ನಡ ಮಾಧ್ಯಮದ ಐವತ್ತೇಂಟು ಪ್ರೌಢಶಾಲೆಗಳನ್ನು ತೆರೆದದ್ದೇ ಅಲ್ಲದೆ ತಮ್ಮ ಸಿದ್ಧಗಂಗಾ ಪುರಾತನ ಸಂಸ್ಥೆಯ ಮೂಲಕ ೧೫೦ಕ್ಕೂ ಹೆಚ್ಚು ಕನ್ನಡ ಸಾಹಿತ್ಯದ ಕೃತಿಗಳನ್ನು ಪ್ರಕಟಿಸಿ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿರುವುದರಿಂದ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವ ಸರ್ಕಾರದ ತುಮಕೂರು ವಿಶ್ವವಿದ್ಯಾನಿಲಯಕ್ಕೆ ಡಾ. ಶಿವಕುಮಾರಸ್ವಾಮೀಜಿಯವರ ಹೆಸರನ್ನು ನಾಮಕರಣ ಮಾಡಬೇಕು ಎಂದು ಇತಿಹಾಸ ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಆಗ್ರಹ ಪಡಿಸಿದರು.
ಅವರು ನಗರದ ಶ್ರೀ ಸಿದ್ಧಗಂಗಾ ಮಹಿಳಾ ಕಾಲೇಜಿನಲ್ಲಿ ಏರ್ಪಡಿಸಿದ್ದ ೭೦ನೇ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟನೆ ಮಾತನಾಡಿದರು.
ಅರವತ್ತರ ದಶಕದಲ್ಲಿ ಕರ್ನಾಟಕದಲ್ಲಿ ಕನ್ನಡ ಭಾಷೆಯ ಅಭಿವೃದ್ಧಿಗಾಗಿ ಇದ್ದ ಎರಡೇ ಕಾಲೇಜುಗಳಲ್ಲಿ ಮೈಸೂರು ಸರ್ಕಾರ ತನ್ನ ಕಾಲೇಜನ್ನು ಮುಚ್ಚಿದರೂ ಪೂಜ್ಯ ಶಿವಕುಮಾರ ಸ್ವಾಮಿಗಳು ಅದನ್ನು ಮುಚ್ಚದೆ ನಷ್ಟವಾ ದರೂ ಅದನ್ನು ಬಲಪಡಿಸಿ ಮುಂದುವರಿಸಿಕೊ0ಡು ಬಂದಿದ್ದು ಕನ್ನಡ ಭಾಷೆಯ ಮೇಲಿನ ಅವರ ಅಗಾಧ ಪ್ರೀತಿಯನ್ನು ತೋರಿಸುತ್ತದೆ ಎಂದ ಅವರು ೧೯೬೩ರಲ್ಲಿಯೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿ ತಮ್ಮ ಭಾಷಾ ಪ್ರೇಮವನ್ನು ಮೆರೆದಿದ್ದಾರೆ ಎಂದರು.
ಕರ್ನಾಟಕದ ಏಕೀಕರಣಕ್ಕೆ ದಕ್ಷಿಣ ಕರ್ನಾಟಕದವರು ವಿರೋಧಿಸಿದ್ದರೂ ಪೂಜ್ಯ ಶಿವಕುಮಾರ ಸ್ವಾಮಿಗಳು ತಮ್ಮ ಶಿಷ್ಯರಾದ ಪದ್ಮಶ್ರೀ ಬಿ ಶಿವಮೂರ್ತಿ ಶಾಸ್ತಿçಗಳನ್ನು ಏಕೀಕರಣ ಚಳುವಳಿಗೆ ಕಳುಹಿಸಿ ತಮ್ಮ ಬೆಂಬಲವನ್ನು ನೀಡಿದ್ದರು ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜ್ಯೋತಿ ಅನಂದ್‌ರವರು ಮಾತನಾಡಿ, ಕನ್ನಡ ಸಾಹಿತ್ಯದ ಬೇರುಗಳು ಜಾನಪದ ಸಾಹಿತ್ಯದಲ್ಲಿದೆ ಕನ್ನಡದ ಗಾದೆ, ಒಗಟುಗಳು ಇಂದು ಮಾಯವಾಗಿ ನಮ್ಮ ಸಂಸ್ಕೃತಿಗೆ ಕೊಡಲಿ ಪೆಟ್ಟನ್ನು ನೀಡಿದ್ದೇವೆ. ಪಂಚ ದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಗೆ ಎರಡು ಸಾವಿರ ವರ್ಷವಿದ್ದರೂ ಅದರ ಮೊದಲ ಲಿಪಿ ನಮಗೆ ಐದನೇ ಶತಮಾನದ ಹಲ್ಮಿಡಿ ಶಾಸನದ ಮೂಲಕ ಈ ಭಾಷೆ ಪ್ರಾಚೀನ ಕವಿ ಮಹಾಲಿಂಗರAಗ ಹೇಳಿದಂತೆ ಸುಲಿದ ಬಾಳೆ ಹಣ್ಣಿನಂತೆ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಹೆಚ್.ಎಂ.ದಕ್ಷಿಣಮೂರ್ತಿ ಮಾತನಾಡಿ ಕನ್ನಡ ಭಾಷಿಕರು ತಮ್ಮ ಭಾಷೆ ಬಳಸಲು ಕೀಳರರಿಮೆ ಮನೋಭಾವವನ್ನು ಬಿಡಬೇಕು ಭಾಷಾ ಬಳಕೆಗೆ ಅನಿವಾರ್ಯತೆ ಸೃಷ್ಟಿಸುವಂತೆ ಮಾಡಬೇಕು. ಕನ್ನಡ ಭಾಷೆಯಲ್ಲಿನ ಅಚ್ಚಕನ್ನಡ ಪದಗಳನ್ನು ಬಳಸುವ ಪ್ರಯತ್ನ ಮಾಡಿದರೆ ಅದೇ ನಾವು ಕನ್ನಡ ಸಂಸ್ಕೃತಿಗೆ ನೀಡಿದ ಬಹುದೊಡ್ಡ ಕೊಡುಗೆ ಎಂದರು.
ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಸಿ.ವಿ.ಶಕುಂತಲ, ಕೆ.ಪಿ.ಶೀಲಾ ಹಾಜರಿದ್ದರು. ಪ್ರಾಧ್ಯಾಪಕರಾದ ಡಾ. ನಳಿನಾ, ಡಾ. ಹೇಮಾವತಿ, ಪ್ರೊ. ಚಿದಾನಂದಮೂರ್ತಿ, ಪ್ರೊ. ದಕ್ಷಿಣಾಮೂರ್ತಿ,ಡಾ. ಮಾರಪ್ಪ, ಡಾ. ಜಗದೀಶ್, ಪ್ರೊ. ಹರ್ಷಶ್ರೀ ಇತರರು ಭಾಗವಹಿಸಿದ್ದರು.



